Advertisement

ಯುವಕರ ಪ್ರತಿಭೆಗೆ ಸವಾಲಾದ ರಸಪ್ರಶ್ನೆ -ಮುಖವರ್ಣಿಕೆ ಸ್ಪರ್ಧೆ

09:57 PM Sep 19, 2019 | mahesh |

ಶೇಣಿ ಗೋಪಾಲಕೃಷ್ಣ ಭಟ್‌ ಚಾರಿಟೇಬಲ್‌ ಟ್ರಸ್ಟ್‌ ಯುವ ಜನಾಂಗದಲ್ಲಿ ಯಕ್ಷಗಾನಸಕ್ತಿಯನ್ನು ಉದ್ದೀಪನಗೊಳಿಸಲು ಕಳೆದ ವರ್ಷದಿಂದ ರಸಪ್ರಶ್ನೆ ಮತ್ತು ಮುಖವರ್ಣಿಕೆ ಸ್ಪರ್ಧೆಯನ್ನು ಆಯೋಜಿಸುತ್ತಿದೆ.

Advertisement

ಮಂಗಳೂರಿನ ವಿ.ವಿ. ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಈ ಬಾರಿಯ ಶೇಣಿ ಪ್ರಶಸ್ತಿ ಸಮಾರಂಭದಂಗವಾಗಿ ಪೂರ್ವಾಹ್ನದಿಂದ ಭಾಗವತಿಕೆಯ ಮಟ್ಟುಗಳ ಪ್ರಾತ್ಯಕ್ಷಿಕೆ, ಶೇಣಿ ಅರ್ಥ, ಶೇಣಿ ವಿಚಾರಗೋಷ್ಠಿ ನಡೆಯುತ್ತಿದ್ದಂತೆ ಇನ್ನೊಂದೆಡೆ ಪದವಿಪೂರ್ವ, ಪದವಿ ವಿಭಾಗದ ಪುರಾಣ ರಸಪ್ರಶ್ನೆಗೆ ಇಬ್ಬರು ವಿದ್ಯಾರ್ಥಿಗಳಂತೆ‌ 80 ತಂಡಗಳು ಭಾಗವಹಿಸಿ ಲಿಖೀತ ರಸಪ್ರಶ್ನೆಗೆ ಉತ್ತರಿಸುತ್ತಿದ್ದರು. ಸಾರ್ವಜನಿಕ ವಿಭಾಗದಲ್ಲೂ 10ಕ್ಕಿಂತಲೂ (ವೈಯಕ್ತಿಕ) ಹೆಚ್ಚು ಸ್ಪರ್ಧಿಗಳಿದ್ದರು. ಇನ್ನೊಂದೆಡೆ ಪದವಿಪೂರ್ವ ಮತ್ತು ಪದವಿ ವಿದ್ಯಾರ್ಥಿಗಳಿಗೆ ಪಾರಂಪರಿಕ ಯಕ್ಷಗಾನ ವೇಷಗಳ ಮುಖವರ್ಣಿಕೆಯ ಸ್ಪರ್ಧೆಗೂ 60ಕ್ಕಿಂತ ಹೆಚ್ಚು ಸ್ಪರ್ಧಿಗಳು ಬಣ್ಣ ಹಚ್ಚಿ ಸಿದ್ಧರಾಗುತ್ತಿದ್ದರು.

ರಾಮಾಯಣ, ಭಾರತ, ಶ್ರೀಮದ್‌ ಭಾಗವತ, ಶ್ರೀ ದೇವಿ ಭಾಗವತಗಳಿಗೆ ಸಂಬಂಧಿಸಿ ಲಿಖೀತ ರಸಪ್ರಶ್ನೆಯಲ್ಲಿ ಆಯ್ಕೆಯಾದ ಪ್ರತಿ ವಿಭಾಗದ ಐದು ತಂಡಗಳಿಗೆ ಮುಖ್ಯವೇದಿಕೆಯಲ್ಲಿ ಐದು ಸುತ್ತುಗಳ ಮೌಖೀಕ ರಸಪ್ರಶ್ನೆಗೆ ಉತ್ತರಿಸುತ್ತಿದ್ದ ವಿದ್ಯಾರ್ಥಿಗಳ ಪುರಾಣಸಕ್ತಿಯು ಬೆರಗು ಮೂಡಿಸುವಂತಿತ್ತು.

ಪಿ.ಯು.ವಿಭಾಗದ ವಿದ್ಯಾರ್ಥಿಗಳು ಯಕ್ಷಗಾನ ಕಲಾವಿದ-ವಿದ್ವಾಂಸರಂತೆ ಮುಖ್ಯ ಪ್ರಶ್ನೆಗಳ ಹಿಂದು-ಮುಂದಿನ ಘಟನೆಗಳಿಗೆ ಪಟಪಟನೆ ಉತ್ತರಿಸುವಾಗ ಪ್ರೇಕ್ಷಕರು ಚಕಿತರಾಗಿ ಚಪ್ಪಾಳೆ ಮೂಲಕ ಹರ್ಷ ವ್ಯಕ್ತಪಡಿಸುತ್ತಿದ್ದರು. ರಸಪ್ರಶ್ನೆಯಲ್ಲಿ ಮಂಗಳೂರು ವಿ.ವಿ. ಮಟ್ಟದಲ್ಲಿ ಶ್ರೀರಾಮ ಕಾಲೇಜಿನ ಧನ್ಯಶ್ರೀ, ಪೃಥ್ವಿ (ಪ್ರ), ಸೈಂಟ್‌ ಆಗ್ನೆಸ್‌ ಕಾಲೇಜಿನ ಅನನ್ಯಾ ಮತ್ತು ಅನನ್ಯಾ (ದ್ವಿ) ಮಂಗಳೂರು ವಿ.ವಿ. ಕಾಲೇಜಿನ ತರುಣ್‌, ಅಪರ್ಣಾ (ತೃ) ಬಹುಮಾನ ಪಡೆದರು. ಪದವಿಪೂರ್ವ ಕಾಲೇಜು ವಿಭಾಗದಲ್ಲಿ ಮೂಡಬಿದ್ರಿ ರೋಟರಿ ಕಾಲೇಜಿನ ರೋಹಿತ್‌ ಮತ್ತು ಪ್ರದ್ಯುಮ್ನ (ಪ್ರ), ಕೆನರಾ ಕಾಲೇಜಿನ ಪರಶುರಾಮ ಮತ್ತು ಅನಂತಕೃಷ್ಣ (ದ್ವಿ), ಗಜಾನನ ಕಾಲೇಜಿನ ಹರಿಪ್ರಸಾದ್‌ ಮತ್ತು ಸುಧೀಂದ್ರ (ತೃ) ಹಾಗೂ ಸಾರ್ವಜನಿಕ ವಿಭಾಗದಲ್ಲಿ ಪುರುಷೋತ್ತಮ ಭಟ್‌, ಸುರೇಶ ರಾವ್‌, ರಾಧಾಕೃಷ್ಣ ರೈ ನಗದು ಪುರಸ್ಕಾರ ಶಾಲು ಸ್ಮರಣಿಕೆಯ ಗೌರವವನ್ನು ಪಡೆದರು.

ಮುಖವರ್ಣಿಕೆಯ ಪದವಿ ವಿಭಾಗದ ಬಣ್ಣದ ವೇಷದಲ್ಲಿ ಆಳ್ವಾಸ್‌ ಕಾಲೇಜಿನ ಸಾತ್ವಿಕ್‌ ನೆಲ್ಲಿತೀರ್ಥ (ಪ್ರ), ಎಂ.ಜಿ.ಯಂ ಕಾಲೇಜಿನ ಆಕಾಂಕ್ಷ ಆಚಾರ್ಯ (ದ್ವಿ), ವಿವೇಕಾನಂದ ಕಾಲೇಜಿನ ಗುರುತೇಜ(ತೃ) ಸ್ತ್ರೀವೇಷ ಆಳ್ವಾಸ್‌ ಕಾಲೇಜಿನ ಪೃಥ್ವಿಶಾ(ಪ್ರ), ಅಂಬಿಕಾ ಕಾಲೇಜಿನ ವೈಷ್ಣವಿ(ದ್ವಿ), ಪದವಿಪೂರ್ವ ವಿಭಾಗದಲ್ಲಿ ಬಣ್ಣದ ವೇಷ ಆಳ್ವಾಸ್‌ನ ಅಜೇಯ ಸುಬ್ರಹ್ಮಣ್ಯ (ಪ್ರ), ರಾಮಕೃಷ್ಣ ಕಾಲೇಜಿನ ಗಣೇಶ ಶೆಟ್ಟಿ (ದ್ವಿ), ತೇಜಸ್‌ (ತೃ), ಹಾಸ್ಯ ವೇಷ ಪದವಿ ವಿಭಾಗ ಪ್ರೀತಮ್‌, ಯುವರಾಜ್‌, ಶಬರೀಷ ಪದವಿ ಪೂರ್ವದಲ್ಲಿ ಯಶ್ವಿ‌ನ್‌ ಬಹುಮಾನಿತರಾದರು. ಸಂಪನ್ಮೂಲ ವ್ಯಕ್ತಿ ಸದಾಶಿವ ಶೆಟ್ಟಿಗಾರ್‌ ಕಿನ್ನಿಗೋಳಿ ಆಯ್ದ ಮುಖವರ್ಣಿಕೆಗಳ ಪ್ರಾತ್ಯಕ್ಷಿತೆಯನ್ನು ನಡೆಸಿ ಬಣ್ಣಗಾರಿಕೆಯ ಸೂಕ್ಷ್ಮ ವಿಚಾರಗಳ ಬಗ್ಗೆ ಬೆಳಕು ಚೆಲ್ಲಿದರು.

Advertisement

ದಿವಾಕರ್‌ ಗೇರುಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next