Advertisement

ಪರೀಕ್ಷಾ ಫಲಿತಾಂಶ ಸುಧಾರಣೆಗೆ ರಸಪ್ರಶ್ನೆ ಸ್ಪರ್ಧೆ

05:57 PM Mar 02, 2022 | Shwetha M |

ತಾಳಿಕೋಟೆ: ತಾಲೂಕಿನ ಮೈಲೇಶ್ವರ ಗ್ರಾಮದಲ್ಲಿರುವ ಬ್ರಿಲಿಯಂಟ್‌ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗಾಗಿ ತಾಲೂಕು ಮಟ್ಟದ ರಸಪ್ರಶ್ನೆ ಕಾರ್ಯಕ್ರಮವನ್ನು ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿತ್ತು.

Advertisement

ಸರ್ಕಾರಿ ಪ್ರೌಢಶಾಲೆ ವಿಜ್ಞಾನ ಶಿಕ್ಷಕ ವಿ.ಎನ್‌. ಯಾತಗಿರಿ ಮಾತನಾಡಿ, ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಸಿ.ವಿ. ರಾಮನ್‌ ಅವರ ಆದರ್ಶದೊಂದಿಗೆ ನೋಬೆಲ್‌ ಪ್ರಶಸ್ತಿ ಪಡೆಯುವಂತಾಗಲಿ ಎಂದು ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಮಾರುತಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎನ್‌.ಬಿ. ನಡುವಿನಮನಿ ಮಾತನಾಡಿ, ರಸಪ್ರಶ್ನೆಯೊಳಗೊಂಡು ಎಲ್ಲ ಕಾರ್ಯಕ್ರಮಗಳು ಮುಂಬರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಪೂರ್ವ ತಯಾರಿಯಾಗಿದ್ದು ವಿದ್ಯಾರ್ಥಿಗಳು ತಮ್ಮ ಜೀವನದ ಪ್ರಮುಖ ಘಟ್ಟವಾದ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಎಂದರು.

ರಸಪ್ರಶ್ನೆ ಕಾರ್ಯಕ್ರಮದಲ್ಲಿ ಒಟ್ಟು 15 ಶಾಲೆಗಳು ಭಾಗವಹಿಸಿದ್ದು, ಇವುಗಳಲ್ಲಿ ಪ್ರಥಮ ಸ್ಥಾನವನ್ನು ಸರ್ಕಾರಿ ಪ್ರೌಢಶಾಲೆ ಲಿಂಗದಳ್ಳಿ ವಿದ್ಯಾರ್ಥಿಗಳು, ದ್ವಿತೀಯ ಸ್ಥಾನವನ್ನು ಬ್ರಿಲಿಯಂಟ್‌ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮೈಲೇಶ್ವರ ಹಾಗೂ ತೃತೀಯ ಸ್ಥಾನವನ್ನು ಸರ್ಕಾರಿ ಪ್ರೌಢಶಾಲೆ ಮಡಿಕೇಶ್ವರ ವಿದ್ಯಾರ್ಥಿಗಳು ಪಡೆದರು. ಸಿದ್ದು ಕರಡಿ ನಿರೂಪಿಸಿದರು. ಲಕ್ಷ್ಮಣ ಪೀರಂಗಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next