Advertisement

“ಕ್ವಿಟ್‌ ಇಂಡಿಯಾ’ದಿನ ಆಚರಣೆ

02:31 PM Aug 10, 2020 | Suhan S |

ಬಳ್ಳಾರಿ: ನಗರದ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ “ಕ್ವಿಟ್‌ ಇಂಡಿಯಾ’ ದಿನವನ್ನು ಭಾನುವಾರ ಆಚರಿಸಲಾಯಿತು.

Advertisement

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಜಿ.ಎಸ್‌.ಮಹ್ಮದ್‌ ರಫೀಕ್‌ ಅವರು, ಸ್ವಾತಂತ್ರ್ಯ ಹೋರಾಟದ ಪ್ರಮುಖ ರೂವಾರಿಗಳಾದ ಮಹಾತ್ಮಾಗಾಂಧೀಜಿ ಮತ್ತು ಮಾಜಿ ಪ್ರಧಾನಿ ದಿ. ಜವಾಹರಲಾಲ್‌ ನೆಹರು ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ, ಗೌರವ ಸಮರ್ಪಿಸಿದರು. ಬಳಿಕ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟದ ಸುವರ್ಣ ಅಧ್ಯಾಯಗಳಲ್ಲಿ “ಕ್ವಿಟ್‌ ಇಂಡಿಯಾ” ದಿನವೂ ಒಂದು. ಈ ದಿನವನ್ನು ಪ್ರತಿ ವರ್ಷ ಆಗಸ್ಟ್‌ 9ರಂದು ದೇಶಾದ್ಯಂತ ಆಚರಿಸುತ್ತಾ ಬಂದಿದೆ. ದೇಶದ ಸ್ವಾತಂತ್ರÂಕ್ಕಾಗಿ ತ್ಯಾಗ ಬಲಿದಾನಗಳನ್ನು ಮಾಡಿದ್ದ ಕಾಂಗ್ರೆಸ್‌ ಪಕ್ಷದ ಮಹಾನಾಯಕರುಗಳನ್ನು ಸ್ಮರಿಸುತ್ತಾ ಬರಲಾಗಿದೆ. ಅದರಂತೆ ಈ ವರ್ಷದ ಕ್ವಿಟ್‌ ಇಂಡಿಯಾ ದಿನಾಚರಣೆಯನ್ನು ನಗರದ ಕಾಂಗ್ರೆಸ್‌ ಜಿಲ್ಲಾ ಕಚೇರಿಯಲ್ಲಿ ಆ.9 ರಂದು ಭಾನುವಾರ ಆಚರಿಸಲಾಯಿತು. ಎಂದು ಸ್ಮರಿಸಿದರು.

ಈ ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರುಗಳಾದ ಕಲ್ಲುಕಂಭ ಪಂಪಾಪತಿ, ಕಂದರಿ ನಾಗರಾಜ, ಕುಮಾರಮ್ಮ, ಅಯಾಜ್‌ ಅಹಮ್ಮದ್‌, ಅಸುಂಡಿ ನಾಗರಾಜ ಗೌಡ, ಕಾಂತಿನೋಹ ವಿಲ್ಸನ್‌, ಜೈಕುಮಾರ್‌ ನಾಯುಡು, ಪಾಲಿಕೆ ಮಾಜಿ ಸದಸ್ಯೆ ಪರ್ವಿನ್‌ಭಾನು, ಶಾಂತಮ್ಮ, ಕಮಲ ಮತ್ತು ಸಮೀರ್‌, ಮಲ್ಲೇಶ್ವರಿ, ಪ್ರೀತಿ, ಮಹೇಶ್‌, ಉದಯಕುಮಾರ್‌, ಶಿವಕುಮಾರ್‌, ಶಂಕರ್‌, ಪೆನ್ನಯ್ಯ, ಚಾಂದ್‌ಬಾಷ, ಸುಭಾನ್‌, ಸ್ವಾಮಿ, ಪ್ರಶಾಂತ್‌ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next