Advertisement

ಜಂಕ್‌ಫ‌ುಡ್‌ ಸೇವನೆ ಬಿಟ್ಟು ಬಿಡಿ

11:46 AM Jun 09, 2021 | Team Udayavani |

ಕೋಲಾರ: ನಗರದ ಗೌರಿಪೇಟೆ ಬಸವ ಮಂದಿರದಲ್ಲಿ ಜಯ ಕರ್ನಾಟಕ ಸಂಘಟನೆ ವಿಶ್ವ ಆರೋಗ್ಯ ಸುರಕ್ಷತಾ ದಿನ ಆಚರಿಸುವ ಮೂಲಕ ಆಹಾರ ಪೊಟ್ಟಣದ ಜತೆಗೆ ಹಣ್ಣು ವಿತರಿಸಿತು.

Advertisement

ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಗಾನಂದ ಕೆಂಪರಾಜ್‌ ಮಾತನಾಡಿ, ನಾವು ತಿನ್ನುತ್ತಿರುವ ಆಹಾರ ವಿಷದಿಂದ ಕೂಡಿದ್ದು ಶೇ.70 ರಿಂದ 80 ಕಳಪೆ, ಕಲಬೆರಕೆಯಿದೆ. ಇದರಿಂದ ಕ್ಯಾನ್ಸರ್‌ ಸೇರಿ ಹಲವಾರು ಮಾರಕ ರೋಗಗಳಿಗೆ ಮನುಷ್ಯ ಬಲಿಯಾಗುತ್ತಿದ್ದಾನೆಂದರು.

ವಿಶ್ವ ಸಂಸ್ಥೆ ಜೂ.7 ರಂದು ವಿಶ್ವ ಆಹಾರ ಸುರಕ್ಷತಾ ದಿನ ಆಚರಿಸುತ್ತಿರುವ ಸಂದರ್ಭದಲ್ಲಿ ಸರ್ಕಾರ ಆಹಾರ ಉತ್ಪನ್ನ ತಯಾರಿಸುವ ಸಂಸ್ಥೆಗಳ ಮೇಲೆ ತೀವ್ರ ನಿಗಾ ವಹಿಸಬೇಕು. ಮುಖ್ಯವಾಗಿ ಪೋಷ ಕರು ತಮ್ಮ ಮಕ್ಕಳನ್ನು ಜಂಕ್‌ ಫುಡ್‌ಗಳ ಸೇವನೆಯಿಂದ ಹೊರತಂದು ಪೌಷ್ಟಿಕಾಂಶ ಆಹಾರ ನೀಡುವ ಮೂಲಕ ಅವರ ಆರೋಗ್ಯ ಕಾಪಾಡ  ಬೇಕಿದೆ ಎಂದರು.

ಕರಾರಸಾ ಸಂಸ್ಥೆ ಮುಖಂಡರಾದ ನಾರಾಯಣ  ಸ್ವಾಮಿ ಮಾತನಾಡಿ, ಕೊರೊನಾದಿಂದ ಬಡವರ್ಗ, ನಿರಾಶ್ರಿತರ ಸೇವೆಗೆ ತೊಡಗಿರುವ ಕೆ.ಆರ್‌.ತ್ಯಾಗರಾಜ್‌, ತಂಡದವರ ಸೇವೆಯನ್ನು ಪ್ರಶಂಸಿಸಿದರು. ರೈಲ್ವೆ ನಿಲ್ದಾಣ, ಗಡಿಯಾರ ವೃತ್ತ, ಬಸ್‌ ನಿಲ್ದಾಣ ಮುಂತಾದ ಕಡೆ ಆಹಾರ, ಹಣ್ಣು ನೀಡಲಾಯಿತು. ಜಿಲ್ಲಾ ಕಾರ್ಯಾಧ್ಯಕ್ಷ ಎಸ್‌.ಸುಧಾಕರ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿನ್ನಿ ವೆಂಕಟೇಶ್‌, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಜಿ.ಟಿ.ಪ್ರಭಾವತಿ, ಪುಷ್ಪ  ಲತಾ, ನಂದಿನಿ, ಜಿಲ್ಲಾ ಸಂಚಾಲಕ ಕೊಂಡರಾಜ  ನಹಳ್ಳಿ ವಿ.ಜಗದೀಶ್‌, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಮರನಾಥ ಸ್ವಾಮಿ, ಕೆಎಸ್‌ಆರ್‌ಟಿಸಿ ನಾರಾಯಣಸ್ವಾಮಿ, ಆಟೋ ಘಟಕದ ತಾಲೂಕು ಅಧ್ಯಕ್ಷ ಮಂಜುನಾಥರಾವ್‌, ಮೋನಿಶ್‌ ಶೈಲೇಂದ್ರ ಟಿ.ವಿಕ್ರಮಾದಿತ್ಯ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next