ಗುವಾಹಟಿ: ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲೂ ಭಾರತ ತಂಡ ಗೆಲುವು ಸಾಧಿಸಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಭಾರತದ ನೆಲದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿ ಜಯ ಸಾಧಿಸಿದೆ. ರನ್ ಮಳೆ ಹರಿದ ಪಂದ್ಯದಲ್ಲಿ ಭಾರತ 16 ರನ್ ಅಂತರದ ಗೆಲುವು ಸಾಧಿಸಿದೆ.
ಭಾರತ ನೀಡಿದ 238 ರನ್ ಗಳ ಬೃಹತ್ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡವು ಎರಡನೇ ಓವರ್ ನಲ್ಲಿ ಎರಡು ವಿಕೆಟ್ ಕಳೆದುಕೊಂಡಿತ್ತು. 47 ರನ್ ಗೆ ಮೂರು ವಿಕೆಟ್ ಕಳೆದುಕೊಂಡಲ್ಲಿಂದ ಜೊತೆಯಾಟ ಆರಂಭಿಸಿದ ಡೇವಿಡ್ ಮಿಲ್ಲರ್ ಮತ್ತು ಕ್ವಿಂಟನ್ ಡಿಕಾಕ್ ಅಜೇಯ 174 ರನ್ ಗಳ ಜೊತೆಯಾಟವಾಡಿದರು.
ಡೇವಿಡ್ ಮಿಲ್ಲರ್ ಅವರು ಕೇವಲ 47 ಎಸೆತಗಳಲ್ಲಿ 106 ರನ್ ಗಳಿಸಿದರೆ, ಕ್ವಿಂಟನ್ ಡಿಕಾಕ್ 48 ಎಸೆತಗಳಲ್ಲಿ 69 ರನ್ ಮಾಡಿದರು.
ಇದನ್ನೂ ಓದಿ:ಸೋಲುವ ಭಯಕ್ಕೆ ಹಿಂದೇಟು ಹಾಕುತ್ತಿದ್ದಾರೆ;ಸಿಬಿಐ ಅಧಿಕಾರಿಗಳ ವಿರುದ್ಧ ರೆಡ್ಡಿ ಕಿರುಕುಳ ಆರೋಪ
ಪಂದ್ಯದ ಬಳಿಕ ಮಾತನಾಡಿದ ಮಿಲ್ಲರ್, ‘ಡಿಕಾಕ್ ಪಂದ್ಯದ ನಂತರ ನನ್ನ ಬಳಿ ಬಂದು ಉತ್ತಮವಾಗಿ ಆಡಿದೆ, ನನ್ನನ್ನು ಕ್ಷಮಿಸು’ ಎಂದರು.
ಡಿ ಕಾಕ್ ಮತ್ತು ಮಿಲ್ಲರ್ ಅವರ 174 ಜೊತೆಯಾಟವು ಯಾವುದೇ ತಂಡಕ್ಕೆ ನಾಲ್ಕನೇ ಅಥವಾ ಅದಕ್ಕಿಂತ ಕಡಿಮೆ ವಿಕೆಟಿಗೆ ಅಂತರರಾಷ್ಟ್ರೀಯ ಟಿ20 ಇತಿಹಾಸದಲ್ಲಿ ಅತ್ಯಧಿಕವಾಗಿದೆ.