Advertisement

ಸದ್ದಿಲ್ಲದೇ ಉಗ್ರರ ಫೋರ್ಸ್‌ ಸಕ್ರಿಯ

06:00 AM Jan 12, 2018 | Team Udayavani |

ಬೆಂಗಳೂರು: ದಕ್ಷಿಣ ಭಾರತದ ರಾಜ್ಯಗಳಲ್ಲಿ ಉಗ್ರ ಚಟುವಟಿಕೆಗಳಲ್ಲಿ ಎಕ್ಯೂಐಎಸ್‌ ಸಂಘಟನೆ ತೊಡಗಿಸಿಕೊಂಡಿರುವ ಬೆನ್ನಿಗೆ ಅಲ್‌-ಮುತ್ತಕೀನ್‌-ಫೋರ್ಸ್‌ ( ಎಎಂಎಫ್) ಹೆಸರಿನ ಮತ್ತೂಂದು ಉಗ್ರಸಂಘಟನೆಯೂ ಸದ್ದಿಲ್ಲದೆ ಕಾರ್ಯಚಟುವಟಿಕೆ ನಡೆಸುತ್ತಿದೆ ಎಂಬ ಸ್ಫೋಟಕ ಮಾಹಿತಿ ಬಹಿರಂಗಗೊಂಡಿದೆ.

Advertisement

ಅಬು ಬಕರ್‌ ಸಿದ್ದಿಕಿ ಎಂಬವನ ಹೆಸರು 2013 ಏಪ್ರಿಲ್‌ನಲ್ಲಿ ಮಲ್ಲೇಶ್ವರದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯಾಲಯದ ಬಳಿ ಘಟಿಸಿದ ಬಾಂಬ್‌ ನ್ಪೋಟದ ಪ್ರಕರಣದಲ್ಲಿ ಕೇಳಿಬಂದಿತ್ತು. 2011ರ ಆಜೂಬಾಜಿಗೆ  ಎಎಂಎಫ್ ಸಂಘಟನೆ ಸ್ಥಾಪಿತವಾಗಿದ್ದು,  ಬಳಿಕ ಅಲ್‌ ಖೈದಾ (ಭಾರತೀಯ ಉಪಖಂಡ) -ಎಕ್ಯೂಐಎಸ್‌ ನ “ಬೇಸ್‌ ಮೂವ್‌ಮೆಂಟ್‌’ ಚಟುವಟಿಕೆಗಳಿಗೆ ಸಹಕರಿಸಿತ್ತು. ಅದರ ನಾಯಕನೇ ಸಿದ್ದಿಕಿ ಎಂಬ ಮಾಹಿತಿ ಬಯಲಾಗಿದೆ.

ಮೈಸೂರು ಕೋರ್ಟ್‌ ಆವರಣದ ಬಾಂಬ್‌ ಸ್ಫೋಟ ಪ್ರಕರಣದ ಬೆನ್ನತ್ತಿರುವ ರಾಷ್ಟ್ರೀಯ ತನಿಖಾ ದಳ ( ಎನ್‌ಐಎ)ಕ್ಕೆ ಈ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಪ್ರಕರಣದ ಪ್ರಮುಖ ಬಂಧಿತ ಆರೋಪಿ ನೈನಾರ್‌ ಅಬ್ಟಾಸ್‌ ಅಲಿ ಅಲಿಯಾಸ್‌ ಲೈಬ್ರರಿ ಅಬ್ಟಾಸ್‌ “ಎಎಂಎಫ್’ ಬಗ್ಗೆ  ಬಾಯ್ಬಿಟ್ಟಿದ್ದಾನೆ.

ವಿಚಾರಣೆ ವೇಳೆ ಅಬ್ಟಾಸ್‌ ಅಲಿ ನೀಡಿದ ಮಾಹಿತಿ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಎನ್‌ಐಎ, ಅಬು ಬಕರ್‌ ಸಿದ್ದಿಕಿ ಸೇರಿದಂತೆ ಶಂಕಿತ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದೆ. ಸಿದ್ದಿಕಿ ಜತೆ ಮೊಹಮದ್‌ ಅಲಿ ಅಲಿಯಾಸ್‌ ಬಾಂಡ್‌ ಅಲಿ, ಮೊಹಮದ್‌ ಅಲಿ ಜಿನ್ನಾ ಸೇರಿದಂತೆ ಇನ್ನೂ ಹಲವು ಮಂದಿ ಮೋಸ್ಟ್‌ ವಾಂಟೆಡ್‌ ಪಟ್ಟಿಗೆ ಸೇರಿಕೊಂಡಿದ್ದಾರೆ.

ತಮಿಳುನಾಡು ಮೂಲದ ಅಲ್‌ ಒಮಾ ಸಂಘಟನೆ ದಕ್ಷಿಣ ಭಾರತದಲ್ಲಿ ಬಲಿಷ್ಠವಾಗಿದ್ದ ಸಂದರ್ಭದಲ್ಲಿ ಅದರ ನಾಯಕ ಇಮಾಮ್‌ ಅಲಿ ಮತ್ತು ಆತನ ಸಹಚರರನ್ನು 2002ರಲ್ಲಿ ಬೆಂಗಳೂರಿನ ಸಂಜಯ್‌ನಗರ ಬಳಿ ಕರ್ನಾಟಕ ಮತ್ತು ಕೊಯಮತ್ತೂರು ಪೊಲೀಸರು ಗುಂಡಿಕ್ಕಿ ಸಾಯಿಸಿದ್ದರು. ಬಳಿಕ ಆ ಸಂಘಟನೆಯಲ್ಲಿದ್ದ ಸಿದ್ದಿಕಿ, ಅಬ್ಟಾಸ್‌ ಅಲಿ ಮತ್ತಿತರರ ಜತೆ ಸೇರಿಕೊಂಡು ಎಎಂಎಫ್ ಹುಟ್ಟುಹಾಕಿದ್ದರು.

Advertisement

ಉಗ್ರಗಾಮಿ ಚಟುವಟಿಕೆ ಆರೋಪದಲ್ಲಿ ಜೈಲು ಸೇರಿದ್ದವರು ಜೈಲಿನೊಳಗೆ, ನ್ಯಾಯಾಲಯಗಳಲ್ಲಿ ಪಟ್ಟ ಕಷ್ಟದ ವಿರುದ್ಧ ಪ್ರತೀಕಾರ ತೀರಿಸುವುದೂ ಕೂಡ  ಆ ಸಂಘಟನೆಯ ಉದ್ದೇಶವಾಗಿದೆ. ಸಿದ್ದಿಕಿ ಬಳಿ ಸುಧಾರಿತ ಬಾಂಬ್‌ ತಯಾರಿಕೆ ತರಬೇತಿ ಪಡೆದಿದ್ದ ಅಬ್ಟಾಸ್‌ ಅಲಿ 2014ರಲ್ಲಿ ಹೊರಗಡೆ ಬಂದು ” ಬೇಸ್‌ ಮೂವ್‌ಮೆಂಟ್‌’ನಲ್ಲಿ ಸಕ್ರಿಯಗೊಂಡಿದ್ದ. ಆತನೇ ಉಳಿದ ಆರೋಪಿಗಳಿಗೆ ಬಾಂಬ್‌  ತರಬೇತಿ ನೀಡಿದ್ದಾನೆ ಎಂದು ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದರು.

ವಿಚಾರಣೆ ವೇಳೆ ಅಬ್ಟಾಸ್‌ ಅಲಿ ನೀಡಿದ ಈ ಮಾಹಿತಿ ಮೇರೆಗೆ ಕಾರ್ಯತತ್ಪರಗೊಂಡಿರುವ ಎನ್‌ಐಎ ಕೇಂದ್ರ ಗುಪ್ತಚರ ದಳ ಹೈ ಅಲರ್ಟ್‌ ಆಗಿದ್ದು, ಕರ್ನಾಟಕ, ತಮಿಳುನಾಡು, ಕೇರಳ, ತೆಲಂಗಾಣ ಸೇರಿದಂತೆ ದಕ್ಷಿಣ ಭಾರತದ ಉಗ್ರಚಟುವಟಿಕೆಗಳ ಬೇಸ್‌ ಎಂದು ಗುರ್ತಿಸಲಾಗಿರುವ ಸೂಕ್ಷ್ಮ ಪ್ರದೇಶಗಳಲ್ಲಿ ನಿಗಾವಹಿಸುವಂತೆ ಆಯಾ ರಾಜ್ಯಗಳ ಗುಪ್ತಚರ ದಳಗಳಿಗೆ  ಕಟ್ಟುನಿಟ್ಟಿನ  ಸೂಚನೆ ರವಾನಿಸಿದೆ ಎಂದು ಕೇಂದ್ರಗುಪ್ತಚರ ಇಲಾಖೆ ಮೂಲಗಳು ತಿಳಿಸಿವೆ.

ದಕ್ಷಿಣ ಭಾರತದ ಐದು ಕೋರ್ಟ್‌ ಸ್ಫೋಟ ಪ್ರಕರಣಗಳ ತನಿಖೆ ನಡೆಸಿರುವ ಎನ್‌ಐಎ ಅಧಿಕಾರಿಗಳಿಗೆ, ಆರೋಪಿಗಳು ನೀಡಿರುವ ಮಾಹಿತಿ ಮತ್ತಷ್ಟು ಸ್ಲಿàಪರ್‌ ಸೆಲ್‌ಗ‌ಳು ಚಟುವಟಿಕೆಯಿಂದಿರುವ  ಬಗ್ಗೆ ಅನುಮಾನಗಳು ದಟ್ಟವಾಗಿವೆ. ಮೈಸೂರು ಬಾಂಬ್‌ ಸ್ಫೋಟ ಪ್ರಕರಣ ಸಂಬಂಧ ಈಗಾಗಲೇ ಮಧ್ಯಂತರ ದೋಷಾರೋಪ ಪಟ್ಟಿಯಲ್ಲಿ ಹಲವು ಮಹತ್ವದ ಅಂಶಗಳನ್ನು ಉಲ್ಲೇಖೀಸಲಾಗಿದೆ. ಸದ್ಯ ತಲೆಮರೆಸಿಕೊಂಡಿರುವ ಆರೋಪಿಗಳ ಮಾಹಿತಿ ದೊರೆತ ಬಳಿಕ, ಸದ್ದಿಲ್ಲದೆ ಕಾರ್ಯನಿರ್ವಹಿಸುತ್ತಿರುವ ಸ್ಲಿàಪರ್‌ ಸೆಲ್‌ಗ‌ಳ ಬಗ್ಗೆ ಖಚಿತತೆ ದೊರೆಯಬಹುದು ಎಂದು ಮೂಲಗಳು ತಿಳಿಸಿವೆ.

ಮಲ್ಲೇಶ್ವರ ಪ್ರಕರಣವೇನು?:
2013ರ ಏಪ್ರಿಲ್‌ 17ರಂದು ಬಿಜೆಪಿ ಕಚೇರಿ ಮುಂದೆ ಸಂಭವಿಸಿದ್ದ ಬಾಂಬ್‌ ಸ್ಫೋಟದಲ್ಲಿ 8 ಮಂದಿ ಪೊಲೀಸರು, 7 ಮಂದಿ  ಸಾರ್ವಜನಿಕರು ಗಾಯಗೊಂಡಿದ್ದರು. ಈ ಪೈಕಿ ಮಹಾರಾಣಿ ಕಾಲೇಜಿನಲ್ಲಿ ಬಿಸಿಎ ವ್ಯಾಸಂಗ ಮಾಡುತ್ತಿದ್ದ ಲೀಷಾ ಗಾಯಗೊಂಡಿದ್ದರು. ಅವರು ಶೇ.50ರಿಂದ 70ರಷ್ಟು ಅಂಗವೈಕಲ್ಯಕ್ಕೆ ತುತ್ತಾಗಿ ಎಡಗಾಲು ಕಳೆದುಕೊಂಡಿದ್ದರು. ಜತೆಗೆ 23 ವಾಹನಗಳು ಹಾಗೂ ಸುತ್ತಮುತ್ತಲ ಭಾಗದ ಹಲವು ಕಟ್ಟಡಗಳಿಗೆ ಹಾನಿಯುಂಟಾಗಿತ್ತು. ಪ್ರಕರಣ ಸಂಬಂಧ 18 ಜನರ ವಿರುದ್ಧ  ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಸರ್ಕಾರದ ನಿರ್ಲಕ್ಷ್ಯಕ್ಕೆ ಶೋಭಾ ಆಕ್ರೋಶ
ಮೈಸೂರು ಕೋರ್ಟ್‌ ಆವರಣದಲ್ಲಿ 2016ರಲ್ಲಿ ನಡೆದ ಬಾಂಬ್‌ ಸ್ಫೋಟಕ್ಕೆ ರಾಜ್ಯ ಸರ್ಕಾರ ಉಗ್ರ ಸಂಘಟನೆಗಳ ಬಗ್ಗೆ ಇಟ್ಟುಕೊಂಡಿರುವ ಬೇಜವಾಬ್ದಾರಿಯೇ ಕಾರಣ ಎಂಬುದು ಬಹಿರಂಗವಾಗಿದೆ ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

“ಉದಯವಾಣಿ’ಯಲ್ಲಿ ಬಂದ ವಿಶೇಷ ವರದಿ ಉಲ್ಲೇಖೀಸಿ ಮಾತನಾಡಿದ ಅವರು, ಮೈಸೂರು ಕೋರ್ಟ್‌ ಆವರಣದಲ್ಲಿ ಸ್ಫೋಟಕ್ಕೆ ಮುನ್ನವೇ ಐಕ್ಯೂಐಎಸ್‌-ಬೇಸ್‌ ಮೂವ್‌ಮೆಂಟ್‌ ಉಗ್ರ ಸಂಘಟನೆ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದರೂ ಸರ್ಕಾರ ನಿರ್ಲಕ್ಷ್ಯ ವಹಿಸಿದ್ದರಿಂದ ಸ್ಫೋಟ ಸಂಭವಿಸಿತ್ತು. ಇದು ಸರ್ಕಾರದ ಬೇಜವಾಬ್ದಾರಿ ಎಂದು ಹೇಳಿದ್ದಾರೆ.

ಪತ್ರ ಬರೆದಿದ್ದವರ ಪೈಕಿ ಇಬ್ಬರು ತಾವು ಅಲ್‌-ಮಜೀದ್‌ ಸಂಘಟನೆಗೆ ಕೆಲಸ ಮಾಡುತ್ತಿದ್ದೇವೆ. ಮುಂಬೈ ಸರಣಿ ಬಾಂಬ್‌ ಸ್ಫೋಟ ಪ್ರಕರಣದ ಅಪರಾಧಿ ಉಗ್ರ ಯಾಕೂಬ್‌ ಮೆಮನ್‌ನನ್ನು ಜುಲೈ 30,2015ರಲ್ಲಿ ನಾಗಪುರ ಸೆಂಟ್ರಲ್‌ ಜೈಲಿನಲ್ಲಿ ಗಲ್ಲಿಗೇರಿಸಿದ್ದಕ್ಕೆ ಪ್ರತೀಕಾರವಾಗಿ ಬಾಂಬ್‌ ಸ್ಫೋಟಿಸುತ್ತೇವೆ ಎಂದು ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿಗಳಿಗೆ ಬರೆದ ಪತ್ರದಲ್ಲಿ ಹೇಳಿದ್ದರು. ಉಗ್ರ ಸಂಘಟನೆ ಪತ್ರ ಬರೆದ ಮೇಲೂ ಕ್ರಮ ಕೈಗೊಳ್ಳದ ಬೇಜವಾಬ್ದಾರಿ ಸರ್ಕಾರ ರಾಜ್ಯದಲ್ಲಿದೆ ಎಂದು ಕಿಡಿ ಕಾರಿದರು.

– ನವೀನ್‌ ಅಮ್ಮೆಂಬಳ/ ಮಂಜುನಾಥ್‌ ಲಘುಮೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next