Advertisement

ಮಂಗಳೂರು ವ್ಯಾಪ್ತಿಯಲ್ಲಿ ‘ಮಿಂಚಿನ ನೋಂದಣಿ’

10:15 AM Apr 09, 2018 | Team Udayavani |

ಮಹಾನಗರ: ವಿಧಾನಸಭಾ ಚುನಾವಣೆಗೆ ಕೆಲವೇ ದಿನ ಬಾಕಿ ಇದ್ದು, ಅರ್ಹ ಸಾರ್ವಜನಿಕರ ಹೆಸರು ಮತದಾರರ ಪಟ್ಟಿಯಲ್ಲಿ ಸೇರಿಸುವ ಹಿನ್ನೆಲೆಯಲ್ಲಿ ರವಿವಾರ ಬೆಳಗ್ಗಿನಿಂದ ಸಂಜೆಯವರೆಗೆ ಮಂಗಳೂರು, ಮಂಗಳೂರು ದಕ್ಷಿಣ ಹಾಗೂ ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ ಮತಗಟ್ಟೆಗಳಲ್ಲಿ ‘ಮಿಂಚಿನ ನೋಂದಣಿ’ ಕಾರ್ಯಕ್ರಮ ನಡೆಯಿತು.

Advertisement

ಮಂಗಳೂರು ವಿಧಾನಸಭಾ ಕ್ಷೇತ್ರದ 200, ಮಂಗಳೂರು ಉತ್ತರದ 229, ಮಂಗಳೂರು ದಕ್ಷಿಣದ 220 ಹಾಗೂ ಮೂಡಬಿದಿರೆಯ 209 ಮತಗಟ್ಟೆಗಳಲ್ಲಿ ನೋಂದಣಿ ನಡೆಯಿತು. ಎಲ್ಲ ಮತಗಟ್ಟೆ ವ್ಯಾಪ್ತಿಯಲ್ಲಿ ರವಿವಾರ ಬೆಳಗ್ಗೆ 10ರಿಂದ ಸಂಜೆ 5.30ರ ವರೆಗೆ ಬೂತ್‌ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. 

ಎ. 14 ಕೊನೆಯ ದಿನ
ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ಎ. 14 ಕೊನೆಯ ದಿನ. ಈ ಹಿನ್ನೆಲೆಯಲ್ಲಿ ವಿಕಲಚೇತನರು, ಮಹಿಳೆಯರು, ದುರ್ಬಲ ವರ್ಗದವರು ಸೇರಿ ಎಲ್ಲ ಮತದಾರರ ಅನುಕೂಲಕ್ಕಾಗಿ ರವಿವಾರ ಜಿಲ್ಲೆಯಾದ್ಯಂತ ನೋಂದಣಿ ಅಭಿಯಾನ ಆಯೋಜಿಸಲಾಗಿತ್ತು.

ದಾಖಲೆ ಪರಿಶೀಲನೆ
ಅರ್ಹ ಸಾರ್ವಜನಿಕರು ವಯಸ್ಸಿನ ಬಗ್ಗೆ ದಾಖಲೆಗಾಗಿ ಶಾಲಾ ಪ್ರಮಾಣ ಪತ್ರ, ಜನನ ಪ್ರಮಾಣ ಪತ್ರ, ಆಧಾರ್‌ ಕಾರ್ಡ್‌, ಪಾಸ್‌ಪೋರ್ಟ್‌, ಎಸೆಸೆಲ್ಸಿ /ಪಿಯುಸಿ ಅಂಕಪಟ್ಟಿಗಳು, ಪಾನ್‌ ಕಾರ್ಡ್‌ ಹಾಗೂ ವೈದ್ಯಕೀಯ ಪ್ರಮಾಣ ಪತ್ರವನ್ನು ನೋಂದಣಿ ಸಂದರ್ಭದಲ್ಲಿ ಪಡೆದುಕೊಳ್ಳಲಾಯಿತು.

ವಾಸಸ್ಥಳದ ಬಗ್ಗೆ ದಾಖಲೆಗಾಗಿ ಪಡಿತರ ಚೀಟಿ, ಆಧಾರ್‌ ಕಾರ್ಡ್‌, ರಹವಾಸಿ ಪತ್ರ, ಪಾಸ್‌ಪೋರ್ಟ್‌, ಗ್ಯಾಸ್‌ ಸಿಲಿಂಡರ್‌ ಸ್ವೀಕೃತಿ ರಶೀದಿ, ವಿದ್ಯುತ್‌ ಬಿಲ್‌ ಪಾವತಿ, ಬ್ಯಾಂಕ್‌ ಪಾಸ್‌ಬುಕ್‌ ಪ್ರತಿ, ಬಾಡಿಗೆ ಕರಾರು ಪತ್ರ, ಚಾಲನಾ ಪರವಾನಿಗೆ ಹಾಗೂ ಇನ್ನಿತರ ದಾಖಲೆಗಳನ್ನು ಪರಿಶೀಲಿಸಲಾಯಿತು. ಜತೆಗೆ ಎರಡು ಪಾಸ್‌ಪೋರ್ಟ್‌ ಅಳತೆಯ ಭಾವಚಿತ್ರ ಪಡೆದುಕೊಳ್ಳಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next