Advertisement

ಜಾಲತಾಣಕ್ಕೆ ಆಧಾರ್‌ ಲಿಂಕ್‌ ಶೀಘ್ರ ನಿರ್ಧರಿಸಿ: ಸುಪ್ರೀಂ

12:39 AM Sep 14, 2019 | Team Udayavani |

ಹೊಸದಿಲ್ಲಿ: ಸೋಷಿಯಲ್‌ ಮೀಡಿಯಾ ಖಾತೆಗಳನ್ನು ಆಧಾರ್‌ ಜೊತೆಗೆ ಲಿಂಕ್‌ ಮಾಡುವ ಬಗ್ಗೆ ಶೀಘ್ರದಲ್ಲೇ ನಿರ್ಧರಿಸ ಬೇಕು ಎಂದು ಶುಕ್ರವಾರ ಸುಪ್ರೀಂಕೋರ್ಟ್‌ ಅಭಿಪ್ರಾಯ ಪಟ್ಟಿದೆ. ಈ ಬಗ್ಗೆ ಸುಪ್ರೀಂಕೋರ್ಟ್‌ ನಿರ್ಧರಿಸಬೇಕೋ ಅಥವಾ ಹೈಕೋರ್ಟ್‌ ನಿರ್ಧರಿಸಬೇಕೋ ಎಂಬುದು ನಮಗೆ ಇನ್ನೂ ಸ್ಪಷ್ಟವಿಲ್ಲ ಎಂದೂ ನ್ಯಾಯಮೂರ್ತಿ ದೀಪಕ್‌ ಗುಪ್ತಾ ಮತ್ತು ಅನಿರುದ್ಧ ಬೋಸ್‌ ಒಳಗೊಂಡ ನ್ಯಾಯಪೀಠ ಹೇಳಿದೆ.

Advertisement

ಆದರೆ ಮದ್ರಾಸ್‌, ಬಾಂಬೆ ಮತ್ತು ಮಧ್ಯಪ್ರದೇಶ ಕೋರ್ಟ್‌ ನಲ್ಲಿ ಸಲ್ಲಿಸಲಾದ ವಿವಿಧ ಪ್ರಕರ ಣಗಳನ್ನು ಸುಪ್ರೀಂಕೋರ್ಟ್‌ಗೆ ವರ್ಗಾವಣೆ ಮಾಡುವಂತೆ ಸೋಷಿಯಲ್‌ ಮೀಡಿಯಾ ಸಂಸ್ಥೆ ಫೇಸ್‌ಬುಕ್‌ ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಿದ್ದು, ಈ ಕುರಿತ ನಿರ್ಧಾರವನ್ನು ಮಾತ್ರ ಮಾಡುತ್ತೇವೆ ಎಂದು ನ್ಯಾಯಪೀಠ ಹೇಳಿತು. ಅಲ್ಲದೆ, ಪ್ರಕರಣವನ್ನು ವರ್ಗಾವಣೆ ಮಾಡಲು ನಮಗೆ ಯಾವ ಆಕ್ಷೇಪವೂ ಇಲ್ಲ ಎಂಬುದಾಗಿ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಹೇಳಿದರು.

ಜತೆಗೆ ಸೆ. 24ರ ಒಳಗಾಗಿ ಸರಕಾರದ ನಿರ್ಧಾರವನ್ನು ಪ್ರಕಟಿಸುವುದಾಗಿ ಹೇಳಿದರು. ಈ ಪ್ರಕರಣದಲ್ಲಿ ಗುರುವಾರ ವಾದಿಸಿದ್ದ ತಮಿಳುನಾಡು ಸರಕಾರವು, ಫೇಸ್‌ಬುಕ್‌ ಹಾಗೂ ಇತರ ಸಾಮಾಜಿಕ ಮಾಧ್ಯಮ ಸಂಸ್ಥೆಗಳು ಸರಕಾರದ ನಿಯಮಗಳನ್ನು ಪಾಲಿಸುತ್ತಿಲ್ಲ. ಇದರಿಂದಾಗಿ ಕಾನೂನು ಉಲ್ಲಂಘನೆ ಪ್ರಕರಣಗಳು ಹೆಚ್ಚುತ್ತಿದ್ದು, ಅಪರಾಧಿ ಗಳನ್ನು ಪತ್ತೆ ಮಾಡುವುದು ಕಷ್ಟಕರವಾಗಿದೆ ಎಂದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next