Advertisement

100 ಮಾರ್ಗಗಳಲ್ಲಿ ಶೀಘ್ರ ವಿಶ್ವದರ್ಜೆ ರೈಲುಗಳ ಓಡಾಟ

09:58 AM Dec 14, 2019 | Team Udayavani |

ಹೊಸದಿಲ್ಲಿ: ಭಾರತದಲ್ಲೂ ವಿಶ್ವದರ್ಜೆಯ ರೈಲುಗಳು ಓಡಾಡಬೇಕೆನ್ನುವ ಕನಸು ಶೀಘ್ರ ನನಸಾಗಲಿದೆ. 100 ಮಾರ್ಗಗಳಲ್ಲಿ 150 ವಿಶ್ವದರ್ಜೆಯ ಪ್ರಯಾಣಿಕ ರೈಲುಗಳನ್ನು ಒಡಿಸಲು ಮಾರ್ಗಗಳನ್ನು ಗುತ್ತಿಗೆ ನೀಡಲು ರೈಲ್ವೇ ಇಲಾಖೆ ಮುಂದಾಗಿದೆ.

Advertisement

ಖಾಸಗಿ-ಸಾರ್ವಜನಿಕ ಸಹಭಾಗಿತ್ವದಲ್ಲಿ ರೈಲುಗಳು ಓಡಾಡಲಿದ್ದು, ರೈಲ್ವೇಯಲ್ಲಿ 22500 ಕೋಟಿ ರೂ. ಹೂಡಿಕೆ ಆಹ್ವಾನಿಸುವ ಆಶಾವಾದವನ್ನು ಹೊಂದಲಾಗಿದೆ.
ನೀತಿ ಆಯೋಗದ ಸಿಇಒ ಅಮಿತಾಭ್‌ ಕಾಂತ್‌ ಅವರ ನೇತೃತ್ವದಲ್ಲಿ ಸಭೆ ನಡೆದ ಬಳಿಕ ರೈಲ್ವೇ ಮಂಡಳಿ ಖಾಸಗಿ-ಸಾರ್ವಜನಿಕ ಸಹಭಾಗಿತ್ವದಲ್ಲಿ ರೈಲುಗಳನ್ನು ಓಡಿಸಲು ಖಾಸಗಿ ಹೂಡಿಕೆ ಆಹ್ವಾನಿಸಲು ನಿರ್ಧರಿಸಿದೆ. ಸದ್ಯ ಈ ಕುರಿತು ಪ್ರಸ್ತಾವನೆಯೊಂದನ್ನು ಅಂತಿಮಗೊಳಿಸಲಾಗಿದೆ.

ಹೂಡಿಕೆಗಾಗಿ ಟ್ರಾವೆಲ್ಸ್‌ ಕಂಪೆನಿಗಳು, ಇತರ ಕಂಪೆನಿಗಳು, ಟೂರ್‌ ಆಪರೇಟರ್‌ಗಳನ್ನು ಆಹ್ವಾನಿಸಲಾಗುತ್ತದೆ. ಕನಿಷ್ಠ 12 ರೈಲುಗಳಿಗೆ ಬಿಡ್‌ಗಳನ್ನು ಸಲ್ಲಿಸಬಹುದಾಗಿದ್ದು, ಗರಿಷ್ಠ 30 ರೈಲುಗಳಿಗೆ ಸಲ್ಲಿಸಬಹುದು. ಸದ್ಯ ದಿಲ್ಲಿ-ಲಕ್ನೋ ಮಧ್ಯೆ ಓಡಾಡುತ್ತಿರುವ ತೇಜಸ್‌ ಎಕ್ಸ್‌ಪ್ರೆಸ್‌ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಉತ್ತೇಜಿತವಾದ ರೈಲ್ವೇ ಖಾಸಗಿ-ಸಾರ್ವಜನಿಕ ಸಹಭಾಗಿತ್ವದ ರೈಲುಗಳನ್ನು ಓಡಿಸಲು ಗುತ್ತಿಗೆ ನೀಡಲು ಮುಂದಾಗಿದೆ. ರೈಲು ಓಡಿಸಿ ಬಂದ ಒಟ್ಟು ಆದಾಯದಲ್ಲಿ ಕಂಪೆನಿಗಳು ರೈಲ್ವೇಗೆ ಪಾಲು ಕೊಡಬೇಕಾಗುತ್ತದೆ. ಪ್ರಸ್ತಾವ ಪ್ರಕಾರ, ರೈಲ್ವೇ ಮೂಲಸೌಕರ್ಯಗಳನ್ನು ಉಪಯೋಗಿಸಿದ್ದಕ್ಕಾಗಿ ರೈಲ್ವೇ ಶುಲ್ಕಗಳನ್ನು ವಿಧಿಸಲಿದೆ. 35 ವರ್ಷಗಳ ಗುತ್ತಿಗೆ ನೀಡಲೂ ನಿರ್ಧರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next