Advertisement
ಏನಿದು ವರದಿ?ನ್ಯಾಯವನ್ನು ಕೇಳಿ ಪಡೆಯುವುದು ಸಾರ್ವಜನಿಕರ ಹಕ್ಕಾಗಿದ್ದು, ಸಮಾಜದ ಪ್ರಜೆಗಳ ಹಿತಾಸಕ್ತಿ ಕಾಯ್ದುಕೊಳ್ಳುವುದು ಆಯಾ ದೇಶ-ರಾಜ್ಯದ ಹೊಣೆಗಾರಿಕೆ. ಈ ನಿಟ್ಟಿನಲ್ಲಿ ರಾಜ್ಯಗಳ ನ್ಯಾಯಾಂಗ ವ್ಯವಸ್ಥೆ ಪರಿಣಾಮಕಾರಿ ಆಗಿದೆಯೇ ಎಂಬುದನ್ನು ತಿಳಿದುಕೊಳ್ಳಲು ಈ ಸಮೀಕ್ಷೆ ನಡೆಸಲಾಗಿದೆ.
ನ್ಯಾಯಾಂಗ ವ್ಯವಸ್ಥೆಯಲ್ಲಿ ಆಗುವ ಬೆಳವಣಿಗೆಗೆ ಸಂಬಂಧಪಟ್ಟಂತೆ ಇದೇ ಮೊದಲ ಬಾರಿಗೆ ಇಂಥ ವರದಿ ಬಿಡುಗಡೆಯಾಗಿದ್ದು, ಮುಂದಿನ ದಿನಗಳಲ್ಲಿ ಸಮಾಜದಲ್ಲಿನ ಶಾಂತಿ ಮತ್ತು ಸುರಕ್ಷತೆಯನ್ನು ಕಾಯ್ದುಕೊಳ್ಳಲು ಈ ಸಮೀಕ್ಷೆ ನೆರವಾಗಲಿದೆ. ಟಾಟಾ ಟ್ರಸ್ಟ್‌ನ ನೆರವು
ಸರಕಾರ ನೀಡಿರುವ ಅಂಕಿ-ಅಂಶ, ಉದ್ದೇಶ ಮತ್ತು ವರದಿಗಳನ್ನಿಟ್ಟುಕೊಂಡು ಟಾಟಾ ಟ್ರಸ್ಟ್ ಈ ಒಂದು ಸಮೀಕ್ಷೆಯನ್ನು ಸಿದ್ಧಪಡಿಸಿದ್ದು, ಸೆಂಟರ್ ಫಾರ್ ಸೋಶಿಯಲ್ ಜಸ್ಟೀಸ್, ಕಾಮನ್ ಕಾಸ್, ಕಾಮನ್ವೆಲ್ತ… ಹ್ಯೂಮನ್ ರೈಟ್ಸ್ ಇನಿಶಿಯೇಟಿವ್, ಡಿಎಕೆಎಸ್, ಟಿಐಎಸ್‌ಎಸ್-ಪ್ರಯಾಸ್ ಮತ್ತು ವಿಧಿ ಸೆಂಟರ್ ಫಾರ್ ಲೀಗಲ್ ಪಾಲಿಸಿ ಎಂಬ ಸಂಸ್ಥೆಗಳು ಇದಕ್ಕೆ ಸಾಥ್ ನೀಡಿವೆ.
Related Articles
ಪೊಲೀಸ್ – ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹೇಗಿದೆ?
ಕಾರಾಗೃಹಗಳು – ಜೈಲಿನಲ್ಲಿನ ಜನಸಂದಣಿ ಮತ್ತು ಸಮರ್ಪಕ ಮಾನವ ಸಂಪನ್ಮೂಲ
ಹೊಂದಿರುವ ಬಗ್ಗೆ
ನ್ಯಾಯಾಂಗ – ನ್ಯಾಯಾಧೀಶರ ಲಭ್ಯತೆ, ಪ್ರಕರಣಗಳ ನಿರ್ಣಯ ಬಗ್ಗೆ
ಕಾನೂನು ಸಹಾಯ – ಅವಶ್ಯರಿಗೆ ಕಾನೂನು ಸಹಾಯ ಒದಗಿಸುವುದರಲ್ಲಿ ರಾಜ್ಯಗಳ ಕಾರ್ಯಕ್ಷಮತೆ.
Advertisement
28 ರಾಜ್ಯಗಳಲ್ಲಿ ಸಮೀಕ್ಷೆದೇಶದ 28 ರಾಜ್ಯಗಳನ್ನು ಸಮೀಕ್ಷೆಗೆ ಒಳಪಡಿಸಿದ್ದು, ದೊಡ್ಡ ಹಾಗೂ ಮಧ್ಯಮ ವಿಭಾಗದಲ್ಲಿ 18 ರಾಜ್ಯಗಳಿದ್ದು, ಸಣ್ಣ ಪ್ರದೇಶಗಳ ಗುಂಪಿನಲ್ಲಿ 6 ರಾಜ್ಯಗಳಿವೆ.
ಮಹಾರಾಷ್ಟ್ರ ಮೊದಲು ನ್ಯಾಯೋಚಿತವಾಗಿ ಮತ್ತು ತ್ವರಿತವಾಗಿ ನ್ಯಾಯವನ್ನು ನೀಡುವುದರಲ್ಲಿ 28 ರಾಜ್ಯಗಳ ಪೈಕಿ ಮಹಾರಾಷ್ಟ್ರ ಮೊದಲ ಸ್ಥಾನಗಳಿಸಿದ್ದು, 10 ಅಂಕಗಳಲ್ಲಿ 5.92 ಅಂಕಗಳಿಸಿದೆ. ರಾಜ್ಯಕ್ಕೆ 6ನೇ ಸ್ಥಾನ
ನಾಲ್ಕು ಮಾನದಂಡಗಳಲ್ಲಿ ಮಧ್ಯಮ ಪ್ರದರ್ಶನ ನೀಡಿರುವ ಕರ್ನಾಟಕ ನ್ಯಾಯೋಚಿತವಾಗಿ ಮತ್ತು ತ್ವರಿತವಾಗಿ ನ್ಯಾಯವನ್ನು ನೀಡುವುದರಲ್ಲಿ 5.11 ಅಂಕಗಳಿಸುವ ಮೂಲಕ 6ನೇ ಸ್ಥಾನವನ್ನು ಪಡೆದುಕೊಂಡಿದೆ. ರಾಜ್ಯದ ಒಟ್ಟು ಸ್ಥಿತಿ
ಪೊಲೀಸ್: ಕಾನೂನು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವಲ್ಲಿ ರಾಜ್ಯ 5.81 ಅಂಕಗಳಿಸಿದ್ದು, 6ನೇ ಸ್ಥಾನದಲ್ಲಿದೆ.
ಕಾರಾಗೃಹಗಳು : ಜೈಲಿನಲ್ಲಿನ ಜನಸಂದಣಿ ಮತ್ತು ಸಮರ್ಪಕ ಮಾನವ ಸಂಪನ್ಮೂಲ ಮಾನದಂಡದಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದ್ದು, 6.31 ಅಂಕವನ್ನು ಗಳಿಸಿದೆ.
ನ್ಯಾಯಾಂಗ: ನ್ಯಾಯಾಧೀಶರ ಲಭ್ಯತೆ, ಪ್ರಕರಣಗಳ ನಿರ್ಣಯ ದದಲ್ಲಿ 16ನೇ ಸ್ಥಾನದಲ್ಲಿರುವ ರಾಜ್ಯ ಕೇವಲ 3,76 ಅಂಕ ಗಳಿಸಿದೆ. ಕಾನೂನು ಸಹಾಯ: ಅವಶ್ಯರಿಗೆ ಕಾನೂನು ಸಹಾಯ ಒದಗಿಸು ವುದರಲ್ಲಿ 7ನೇ ಸ್ಥಾನದಲ್ಲಿರುವ ಕರ್ನಾಟಕ 5.22 ಅಂಕಗಳನ್ನು ಪಡೆದಿದೆ. 67.7 ಶೇ. ವಿಚಾರಣಾಧೀನ ಕೈದಿಗಳು
2016 ರ ಅಂಕಿ-ಅಂಶದ ಪ್ರಕಾರ ಭಾರತದ ಜೈಲಿನಲ್ಲಿ ಶೇ.67.7 ರಷ್ಟು ವಿಚಾರಣಾಧೀನ ಕೈದಿಗಳಿದ್ದಾರೆ. 2.8 ಕೋಟಿ ಪ್ರಕರಣಗಳು ಬಾಕಿ
ದೇಶದ ಅಧೀನ ನ್ಯಾಯಾಲಯಗಳಲ್ಲಿ 2.8 ಕೋಟಿ ಪ್ರಕರಣಗಳ ವಿಚಾರಣೆ ಬಾಕಿ ಇದ್ದು, ಮುಂದಿನ 5 ವರ್ಷಗಳು ಕಳೆದರೂ ಇದರ ಪ್ರಮಾಣದಲ್ಲಿ ಶೇ.24ರಷ್ಟು ಬಾಕಿ ಉಳಿಯಲಿದೆ. 621 ಅಧಿಕಾರಿಗಳು
ದೇಶದ ಒಟ್ಟು 1,412 ಕಾರಾಗೃಹಗಳಿಗೆ ಕೇವಲ 621 ಜೈಲು ಅಧಿಕಾರಿಗಳಿದ್ದಾರೆ. 68 ನೇ ಸ್ಥಾನ
ಕಾನೂನು ನಿಯಮ ಸೂಚ್ಯಂಕದಲ್ಲಿ ವಿಶ್ವದ 126 ದೇಶಗಳ ಪೈಕಿ ಭಾರತ 68ನೇ ಸ್ಥಾನದಲ್ಲಿದೆ. 59 ನೇ ಸ್ಥಾನ
ಹಿಂಸಾಕೃತ್ಯದಿಂದ ಆರ್ಥಿಕ ಪರಿಣಾಮದ ಕುರಿತ ಸೂಚ್ಯಂಕದಲ್ಲಿ ವಿಶ್ವದ 163 ದೇಶಗಳ ಪೈಕಿ ಭಾರತ 59ನೇ ಸ್ಥಾನ ಪಡೆದುಕೊಂಡಿದೆ.