Advertisement
ಮೂಲಗಳ ಪ್ರಕಾರ ನೊಬೆಲ್ ಶಾಲೆಯಲ್ಲಿನ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಜು.29 ಇಲ್ಲವೇ 30ರಂದು ಆರೋಪಪಟ್ಟಿ ಸಲ್ಲಿಸಲು ಸಿಐಡಿ ತಂಡ ಮುಂದಾಗಿದ್ದು, ತನಿಖಾಧಿಕಾರಿ ಆಗಿರುವ ಸಿಐಡಿ ಡಿವೈಎಸ್ಪಿ ವೀರೇಂದ್ರಕುಮಾರ ಅವರು ಸಾಕ್ಷ್ಯಾಧಾರಗಳೊಂದಿಗೆ ಇಲ್ಲಿನ ಮೂರನೇ ಜೆಎಂಎಫ್ಸಿ ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ.
Related Articles
Advertisement
ಮನೆಯಿಂದಲೇ ಊಟ ಪೂರೈಕೆ! ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಇಬ್ಬರು ಡಿಎಸ್ಪಿ, ಓರ್ವ ಇನ್ಸ್‌ಪೆಕ್ಟರ್, 11 ಅಭ್ಯರ್ಥಿಗಳು ಹಾಗೂ ಕಿಂಗ್‌ಪಿನ್, ಮಧ್ಯವರ್ತಿಗಳು ಸೇರಿದಂತೆ ಒಟ್ಟಾರೆ 42 ಜನರು ಬಂಧನವಾಗಿದ್ದಾರೆ. ಡಿಎಸ್ಪಿ ಗಳಾದ ಮಲ್ಲಿಕಾರ್ಜುನ ಸಾಲಿ, ವೈಜನಾಥ ರೇವೂರ, ಇನ್ಸ್‌ಪೆಕ್ಟರ್ ಆನಂದ ಮೇತ್ರೆ, ಅಭ್ಯರ್ಥಿಗಳಾದ ವಿಶಾಲ್, ಎನ್.ವಿ.ಪಾಟೀಲ್, ವಿಕಾಸ, ಶ್ರೀಧರ, ಪ್ರಭುದೇವ, ಹೈಯಾಳಿ ದೇಸಾಯಿ, ಇಸ್ಮಾಯಿಲ್ ಜಮಾದಾರ ಹಾಗೂ ಕಿಂಗ್‌ಪಿನ್‌ಗಳಾದ ರುದ್ರಗೌಡ ಪಾಟೀಲ್, ಬಿಜೆಪಿ ನಾಯಕಿ ದಿವ್ಯಾ ಹಾಗರಗಿ, ಅಫಜಲಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಾಂತೇಶ ಸೇರಿದಂತೆ ಒಟ್ಟಾರೆ 42 ಜನರ ಬಂಧನವಾಗಿ ಮೂವರು ಮಾತ್ರ ಜಾಮೀನು ಮೇಲೆ ಹೊರ ಬಂದಿದ್ದಾರೆ. ಮಹಾರಾಷ್ಟ್ರದ ಸುರೇಶ ಕಾಟೆಗಾಂವ, ಚಾಲಕ ಸದ್ದಾಂ ಹಾಗೂ ಕಾಳಿದಾಸ್ ಮಾತ್ರ ಹೊರ ಬಂದಿದ್ದಾರೆ. ಇನ್ನುಳಿದಂತೆ 39 ಆರೋಪಿಗಳು ಈಗಲೂ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿದ್ದಾರೆ. ಆಶ್ಚರ್ಯಕರ ಏನೆಂದರೆ ಇವರಲ್ಲಿ ಬಹುತೇಕರಿಗೆ ಆರಂಭದ ದಿನದಿಂದ ಇಂದಿನವರೆಗೂ ಮನೆಯಿಂದಲೇ ಕಾರಾಗೃಹಕ್ಕೆ ಊಟ ಪೂರೈಕೆಯಾಗುತ್ತಿದೆ. ದಿನಾಲು ಬೆಳಿಗ್ಗೆ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟ ಪೂರೈಸಲಾಗುತ್ತಿದೆ. ಆರೋಪಿಗಳಿಗೆ ಮನೆಯಿಂದ ಊಟ ಪೂರೈಕೆಯಾಗುತ್ತಿರುವ ಬಗ್ಗೆ ಕಾರಾಗೃಹ ಸುಪರಿಟೆಂಡೆಂಟ್ ಸಮರ್ಪಕ ಉತ್ತರ ನೀಡುತ್ತಿಲ್ಲ.
-ಹಣಮಂತರಾವ ಭೈರಾಮಡಗಿ