Advertisement

ಸೂಪರ್‌ ಮಾರುಕಟ್ಟೆ ಸಮಸ್ಯೆಗೆ ಶೀಘ್ರ ಪರಿಹಾರ

04:45 PM Jun 10, 2017 | Team Udayavani |

ಧಾರವಾಡ: ಸೂಪರ್‌ ಮಾರುಕಟ್ಟೆಯಲ್ಲಿರುವ ಕುಡಿವ ನೀರಿನ ಅರವಟಿಗೆ ಕಾರ್ಯಾರಂಭ, ಕಸ ವಿಲೇವಾರಿ ಹಾಗೂ ವಿವಿಧ ಸಮಸ್ಯೆಗಳ ನಿವಾರಣೆ ಕುರಿತು ಒಂದು ತಿಂಗಳಲ್ಲಿ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್‌ ಡಿ.ಕೆ. ಚವ್ಹಾಣ ಹೇಳಿದರು. ಇಲ್ಲಿನ ಸುಭಾಸ ರಸ್ತೆಯಲ್ಲಿರುವ ಸೂಪರ್‌ ಮಾರುಕಟ್ಟೆಗೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

Advertisement

ರಸ್ತೆ ಅತಿಕ್ರಮಣ, ಪಾದಚಾರಿ ದಾರಿಯಲ್ಲಿ ಅಕ್ರಮ ಅಂಗಡಿ ನಿರ್ಮಾಣ, ಕುಡಿಯುವ ನೀರು ಹಾಗೂ ಕಸ ವಿಲೇವಾರಿಗೆ ಸಂಬಂಧಿಸಿದಂತೆ ಸಾರ್ವಜನಿಕರು, ವರ್ತಕರು ಪಾಲಿಕೆಗೆ ಲಿಖೀತ ಹಾಗೂ ಮೌಖೀಕವಾಗಿ ಸಾಕಷ್ಟು ದೂರು ನೀಡಿದ ಹಿನ್ನೆಲೆಯಲ್ಲಿ ಆಯುಕ್ತರೊಂದಿಗೆ ಅದಕ್ಕಾಗಿ ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ ಎಂದರು.

 ಸ್ಮಾರ್ಟ್‌ಸಿಟಿ ಯೋಜನೆ ಕುರಿತು ಈಗಾಗಲೇ ಎರಡು ಸಭೆ ನಡೆಸಲಾಗಿದೆ. ಸೂಪರ್‌ ಮಾರುಕಟ್ಟೆ, ಜನತಾ ಬಜಾರ ಸೇರಿದಂತೆ ಹುಬ್ಬಳ್ಳಿ-ಧಾರವಾಡ ನಗರದ ಕೆಲವು ಪ್ರದೇಶಗಳನ್ನು ಯೋಜನೆಯಡಿ ಅಭಿವೃದ್ಧಿಗೊಳಿಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಈ ಎಲ್ಲ ಕಾಮಗಾರಿಗಳು ಪ್ರಾರಂಭವಾಗಲಿವೆ.

ಇಲ್ಲಿ ಸಾಕಷ್ಟು ಪ್ರಮಾಣದಲ್ಲಿ ರಸ್ತೆ ಅತಿಕ್ರಮಣ ಮಾಡಲಾಗಿದೆ. ವರ್ತಕರು ಜಾಗೆಯನ್ನು ಅತಿಕ್ರಮಣ ಮಾಡಿದ್ದಾರೆ. ಎಲ್ಲೆಂದರಲ್ಲಿ ಕಸ ಚೆಲ್ಲಿರುವುದರಿಂದ ಅನೈರ್ಮಲ್ಯ ಉಂಟಾಗಿದೆ ಎಂದರು. ಪಾಲಿಕೆಯಿಂದ ಕಮಿಟಿ ರಚಿಸಿ ಮಾರುಕಟ್ಟೆಯಲ್ಲಿನ ಕುಡಿಯುವ ನೀರಿನ ಅರವಟಿಗೆ ಪುನಃ ಕಾರ್ಯಾರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು. 

ಅಲ್ಲದೇ ಪಾಲಿಕೆಯಿಂದ ಪ್ರತಿದಿನ ಬೆಳಿಗ್ಗೆ ಕಸ ಸಂಗ್ರಹಣೆಗಾಗಿ ವಾಹನ ಕಳುಹಿಸಿಕೊಡುವುದಾಗಿ ಈಗಾಗಲೇ ಆಯುಕ್ತರು ಆದೇಶಿಸಿದ್ದಾರೆ. ಹೀಗಾಗಿ ಪ್ರತಿಯೊಬ್ಬ ವರ್ತಕರು ತಮ್ಮ ಅಂಗಡಿಯಲ್ಲಿ ಎರಡು ಬಕೆಟ್‌ಗಳನ್ನ ಇಡಬೇಕು. ಅದರಲ್ಲಿನ ಒಣ ಹಾಗೂ ಹಸಿ ಕಸವನ್ನು ಬೇರ್ಪಡಿಸಿ ವಾಹನದಲ್ಲಿ ಹಾಕಬೇಕು.

Advertisement

ಇಷ್ಟಾಗಿಯೂ ವರ್ತಕರು ಒಂದು ವೇಳೆ ಕಸವನ್ನು ಮಾರುಕಟ್ಟೆಯಲ್ಲಿಯೇ ಚೆಲ್ಲಿದರೆ ಅಂಥವರನ್ನು ಗುರುತಿಸಿ ದಂಡ ಹಾಕಲಾಗುತ್ತದೆ ಎಂದು ಎಚ್ಚರಿಸಿದರು. ಆಯುಕ್ತ ಡಾ| ಸಿದ್ದಲಿಂಗಯ್ಯ ಹಿರೇಮಠ ಮಾತನಾಡಿ, ಕಸ ವಿಲೇವಾರಿಗೆ ಸಂಬಂ ಧಿಸಿದಂತೆ 100ರಷ್ಟು ಡೋರ್‌ ಟು ಡೋರ್‌ ಕಸ ಸಂಗ್ರಹಿಸಿ ವಿಲೇವಾರಿ ಮಾಡಬೇಕು ಎಂಬ ಯೋಚನೆಯಿದೆ. 

ಈ ಕುರಿತು ಈಗಾಗಲೇ ವರ್ತಕರ ಜೊತೆ ಚರ್ಚಿಸಿದ್ದೇನೆ. ಆದರೆ ವರ್ತಕರು ಯಾರು ಹಸಿ ಹಾಗೂ ಒಣ ಕಸ ಸಂಗ್ರಹಕ್ಕೆ ಪ್ರತ್ಯೇಕ ಬಕೆಟ್ಸ್‌ ಇಟ್ಟು ಸರಿಯಾದ ಕ್ರಮ ತೆಗೆದುಕೊಂಡಿಲ್ಲ. ಅಲ್ಲದೆ ಪಾಲಿಕೆ ಅ ಧಿಕಾರಿಗಳು ಮತ್ತು ವರ್ತಕರ ನಡುವೆ ಕಸ ವಿಲೇವಾರಿ ಮಾಡುವ ವಿಷಯದಲ್ಲಿ ಸಾಕಷ್ಟು ಕಂದಕವಿದೆ. ಇದರಿಂದ ಚರಂಡಿಗಳು ಶಾಶ್ವತವಾಗಿ ಬಂದಾಗಿ ಚರಂಡಿ ನೀರು ಹರಿಯದಂತಾಗಿ ಅನೇಕ ಸಮಸ್ಯೆಗಳು ಉದ್ಭವಿಸಿವೆ.

ಹೀಗಾಗಿ ಕೂಡಲೇ ಚರಂಡಿಗಳ ಮೇಲಿನ ಅಂಗಡಿಗಳನ್ನ ತೆರವುಗೊಳಿಸಿ ಚರಂಡಿ ಸ್ವತ್ಛಗೊಳಿಸುವ ಕಾರ್ಯ ಮಾಡಲಾಗುವುದು ಎಂದರು. ಇದೇ ಸಂದರ್ಭದಲ್ಲಿ ಗಾಂ ಧಿ ಚೌಕ್‌ನಲ್ಲಿರುವ ಕೆಲ ವರ್ತಕರು ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ಮೇಯರ್‌ ಮತ್ತು ಆಯುಕ್ತರಿಗೆ ಮನವಿ ಸಲ್ಲಿಸಿದರು. ಪಾಲಿಕೆ ಸದಸ್ಯೆ ಪೂರ್ಣಾ ಪಾಟೀಲ, ಮೋಹನ್‌ ರಾಮದುರ್ಗ, ಉದಯ ಯಂಡಿಗೇರಿ ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next