Advertisement
ನಗರ ಪ್ರದೇಶಗಳಲ್ಲಿ ಇತ್ತೀಚಿನ ದಿನಗಳಲ್ಲಿ ತಾರಸಿಯಲ್ಲಿ ತರಕಾರಿ ಬೆಳೆಯುವ ಟ್ರೆಂಡ್ ಹೆಚ್ಚುತ್ತಿದೆ. ಗುಣಮಟ್ಟದ ಬೀಜಗಳು ಆ ಗ್ರಾಹಕರಿಗೆ ದೊರೆಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸ್ವತಃಭಾರತೀಯ ತೋಟಗಾರಿಕಾ ಸಂಶೋ ಧನಾ ಸಂಸ್ಥೆ (ಐಐಎಚ್‌ಆರ್) ಅಭಿವೃದ್ಧಿ ಪಡಿಸಿದ ಗುಣಮಟ್ಟದ ಬೀಜಗಳು ಸುಲಭ ವಾಗಿ ಗ್ರಾಹಕರಿಗೆ ಸಿಗುವಂತೆ ಮಾಡುವ ಉದ್ದೇಶದಿಂದ “ಸೀಡ್ ವೆಂಡಿಂಗ್ ಮೆಷಿನ್’
ಸುಮಾರು 36 ಪ್ರಕಾರದ 24 ತರಕಾರಿ ಪ್ಯಾಕೆಟ್‌ಗಳು ಪ್ರತಿ ಮೆಷಿನ್‌ನಲ್ಲಿ ಇರು ತ್ತವೆ. ಲಾಲ್‌ಬಾಗ್, ಬಸ್ ನಿಲ್ದಾಣ, ರೈಲು ನಿಲ್ದಾಣ ಸಹಿತ ನಗರದ ಹತ್ತು ಕಡೆಗಳಲ್ಲಿ ಈ ವಿನೂತನ ಯಂತ್ರಗಳನ್ನು ಅಳವಡಿಸಲು ಉದ್ದೇಶಿಸಲಾಗಿದೆ. ಪ್ರತಿ ಯಂತ್ರಕ್ಕೆ ಎರಡೂವರೆ ಲಕ್ಷ ರೂ. ವೆಚ್ಚ ಆಗುತ್ತದೆ. ಆದ್ದರಿಂದ ತೋಟಗಾರಿಕೆ ಇಲಾಖೆ ನೆರವು ಕೋರಲಾಗಿದ್ದು, ಪೂರಕ ಸ್ಪಂದನೆ ದೊರೆತಿದೆ. ಅಷ್ಟೇ ಅಲ್ಲ, ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಈ ಸೀಡ್ ವೆಂಡಿಂಗ್ ಮೆಷಿನ್‌ಗಳನ್ನು ಅಳವಡಿಸುವ ಚಿಂತನೆ ಇದೆ ಎಂದು ತಿಳಿಸಿದರು.
Related Articles
Advertisement
ಸೀಡ್ ಕಿಟ್‌ಗೆ ಭಾರೀ ಬೇಡಿಕೆಭಾರತೀಯ ತೋಟಗಾರಿಕಾ ಸಂಶೋಧನ ಸಂಸ್ಥೆ ಪರಿಚಯಿಸಿದ “ಸೀಡ್ ಕಿಟ್’ (ತರಕಾರಿಗಳ ಬಾಕ್ಸ್)ಗೆ ವಿದೇಶಗಳಲ್ಲಿ ಈಗ ಭಾರೀ ಬೇಡಿಕೆ ಇದ್ದು, ಲಕ್ಷಕ್ಕೂ ಅಧಿಕ ಕಿಟ್‌ಗಳು ಇದುವರೆಗೆ ಮಾರಾಟ ಆಗಿವೆ ಎಂದು ಸಂಸ್ಥೆಯ ತರಕಾರಿ ವಿಭಾಗದ ಮುಖ್ಯಸ್ಥ ಹಾಗೂ ಪ್ರಧಾನ ವಿಜ್ಞಾನಿ ಡಾ| ಎ.ಟಿ. ಸದಾಶಿವ ತಿಳಿಸಿದರು. ದೇಶದಲ್ಲೇ ಮೊದಲ ಬಾರಿಗೆ ಈ ರೀತಿಯ ಸೀಡ್ ಕಿಟ್‌ಗಳನ್ನು ಐಐಎಚ್‌ಆರ್ ಪರಿಚಯಿಸಿದೆ. ಕಳೆದ ಎರಡು ವರ್ಷಗಳಿಂದ ಇವುಗಳಿಗೆ ದೇಶಾದ್ಯಂತ ಬೇಡಿಕೆ ಬರುತ್ತಿದೆ. ಇದರಲ್ಲಿ 8 ಪ್ರಕಾರದ ತರಕಾರಿ ಬೀಜಗಳಿದ್ದು, ಇದರ ಬೆಲೆ 140 ರೂ. ಗ್ರಾಹಕರು ಡಿಡಿಡಿ.ಜಿಜಿಜr.rಛಿs.ಜಿn ಮೂಲಕ ಆನ್‌ಲೈನ್‌ನಲ್ಲಿ ಕೂಡ ಪಡೆಯಬಹುದು ಎಂದು ಮಾಹಿತಿ ನೀಡಿದರು.