Advertisement
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, 15 ದಿನಗಳಲ್ಲಿ ತಾತ್ಕಾಲಿಕ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗುತ್ತದೆ. ಉಳಿದಂತೆ ಸೆಂಟ್ರಲ್ ಮಾರುಕಟ್ಟೆ ಜಾಗದಲ್ಲಿ ಸ್ಮಾರ್ಟ್ ಮಾರುಕಟ್ಟೆ 3 ವರ್ಷಗಳಲ್ಲಿ ತಲೆ ಎತ್ತಲಿದೆ. ಕೊರೊನಾ ನಿಯಂತ್ರಣಕ್ಕೆ ಬಂದು ಲಾಕ್‌ಡೌನ್ ತೆರವುಗೊಂಡಾಗ ಸೆಂಟ್ರಲ್ ಮಾರುಕಟ್ಟೆಯಲ್ಲಿದ್ದ ಇತರ ರಿಟೇಲ್ ವ್ಯಾಪಾರಸ್ಥರಿಗೂ ನೆಹರೂ ಮೈದಾನ ಬಳಿಯ ತಾತ್ಕಾಲಿಕ ಮಾರುಕಟ್ಟೆ ಕಟ್ಟಡದಲ್ಲಿ ವ್ಯವಸ್ಥೆ ಆಗಲಿದೆ ಎಂದರು.
ಸೆಂಟ್ರಲ್ ಮಾರುಕಟ್ಟೆಯ ತರಕಾರಿ ಹಾಗೂ ಹಣ್ಣುಹಂಪಲು ಸಗಟು ವ್ಯಾಪಾರ ಬೈಕಂಪಾಡಿಯ ಎಪಿಎಂಸಿಗೆ ಸ್ಥಳಾಂತರವಾಗಿದೆ. ಆದರೆ ಅಲ್ಲಿ ಸೂಕ್ತ ವ್ಯವಸ್ಥೆ ಇಲ್ಲವೆಂಬ ಆರೋಪ ವ್ಯಾಪಾರಿಗಳದ್ದಾಗಿದೆ. ಜತೆಗೆ ರಿಟೇಲ್ ವ್ಯಾಪಾರಸ್ಥರಿಗೆ ಸೂಕ್ತ ಸ್ಥಳ ನಿಗದಿಪಡಿಸಲಾಗಿಲ್ಲ ಎಂದು ಶಾಸಕ ಯು.ಟಿ. ಖಾದರ್ ಹೇಳಿದರು. ಈ ಸಂದರ್ಭ ಶಾಸಕ ವೇದವ್ಯಾಸ ಕಾಮತ್ ಹಾಗೂ ಯು.ಟಿ. ಖಾದರ್ ನಡುವೆ ಮಾತಿನ ಚಕಮಕಿ ನಡೆಯಿತು. ಆಳಸಮುದ್ರ ಮೀನುಗಾರಿಕೆ ಸದ್ಯ ಕಷ್ಟ : ಕೋಟ
ಕೋವಿಡ್ -19 ನಿಯಂತ್ರಣಕ್ಕೆ ಸಂಬಂಧಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತ್ಯಗತ್ಯ. ಹಾಗಾಗಿ ಬಂದರು ಪ್ರದೇಶದ ಮೂಲಕ ಪರ್ಸಿನ್ ಹಾಗೂ ಯಾಂತ್ರೀಕೃತ ದೋಣಿಗಳ ಮೂಲಕ ಆಳ ಸಮುದ್ರದ ಮೀನುಗಾರಿಕೆಗೆ ಅವಕಾಶ ಸದ್ಯ ನೀಡಿದರೆ ನಿಯಂತ್ರಣ ಕಷ್ಟ. ಹೊರ ರಾಜ್ಯಗಳಿಂದ ಈಗ ಮಂಗಳೂರಿಗೆ ಬರುವ 10ರಿಂದ 20ರಷ್ಟು ಮೀನಿನ ಲಾರಿಗಳಲ್ಲಿ ಬರುವ ಸಗಟು ಮೀನು ಮಾರಾಟವನ್ನು ಎಪಿಎಂಸಿ, ಸುರತ್ಕಲ್ ಹಾಗೂ ಜಪ್ಪಿನಮೊಗರು ಮೈದಾನದಲ್ಲಿ ಸ್ಥಳ ಹಾಗೂ ಸಮಯ ನಿಗದಿಪಡಿಸಿ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸಚಿವ ಶ್ರೀನಿವಾಸ ಪೂಜಾರಿ ಸೂಚಿಸಿದರು.