Advertisement

ಸಾಲಿಗ್ರಾಮದಲ್ಲಿ ಶೀಘ್ರ ಮಿನಿ ವಿಧಾನಸೌಧ ನಿರ್ಮಾಣ

06:24 PM May 10, 2022 | Team Udayavani |

ಕೆ.ಆರ್‌.ನಗರ:ಸಾಲಿಗ್ರಾಮ ನುತನ ತಾಲೂಕಾಗಿ ರುವುದರಿಂದ 640 ಮಂದಿಗೆ ಉದ್ಯೋಗಾ ವಕಾಶ ಗಳು ಸೃಷ್ಟಿಯಾಗಿದ್ದು, ಶೀಘ್ರದಲ್ಲಿಯೇ ಸಾಲಿಗ್ರಾಮದಲ್ಲಿ ಮಿನಿ ವಿಧಾನಸೌಧ ನಿರ್ಮಿಸಲಾಗುವು ದು ಎಂದು ಶಾಸಕ ಸಾ.ರಾ.ಮಹೇಶ್‌ ಹೇಳಿದರು.

Advertisement

ಸಾಲಿಗ್ರಾಮ ಪಟ್ಟಣದಲ್ಲಿ ಅಂಬೇಡ್ಕರ್‌ ಸಂಘಟನೆಯಿಂದ ನಡೆದ ಸಂವಿಧಾನಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ 131ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ತಾಲೂಕಿನಲ್ಲಿ ಅಂಬೇಡ್ಕರ್‌ ಪ್ರತಿಮೆ ಹೊರತುಪಡಿಸಿ ಇತರೆ ಯಾವುದೇ ಮಹನೀಯರ ಪುತ್ಥಳಿಗಳನ್ನು ನಿರ್ಮಾಣ ಮಾಡಲಾಗಿಲ್ಲ. ಪರಿಶಿಷ್ಟ ಜಾತಿ ಸಮುದಾಯದ ಜನತೆ ಇದನ್ನು ಅರ್ಥಮಾಡಿ ಕೊಳ್ಳಬೇಕು. ಕೆ.ಆರ್‌.ನಗರ ಪಟ್ಟಣದಲ್ಲಿ 5 ಕೋಟಿ ರೂ.ಗಳ ವೆಚ್ಚದಲ್ಲಿ ಭೀಮ ಭವನ ನಿರ್ಮಾಣ ಮಾಡಲಾಗುತ್ತಿದೆ ಎಂದರು.

ನಿಮ್ಮ ಋಣ ತೀರಿಸಲು ಪ್ರಾಮಾಣಿಕ ಕೆಲಸ: ತಾಲೂಕಿನ ಹಲವು ಗ್ರಾಮಗಳಲ್ಲಿ ಈಗಾಗಲೇ ಅಂಬೇಡ್ಕರ್‌ ಸಮುದಾಯ ಭವನಗಳನ್ನು ನಿರ್ಮಿಸಲಾಗಿದೆ. ಕಷ್ಟ ಎಂದು ನನ್ನ ಬಳಿಗೆ ಬರುವಂತಹ ಯಾರೊಬ್ಬರನ್ನೂ ಇಲ್ಲಿವರೆಗೆ ಹಿಂದಕ್ಕೆ ಕಳುಹಿಸಿಲ್ಲ ಎಂದ ಶಾಸಕರುಮ ನನ್ನನ್ನು ಮೂರು ಬಾರಿ ಶಾಸಕ, ಒಂದು ಬಾರಿ ಸಚಿವನನ್ನಾಗಿ ಮಾಡಿದ್ದೀರಿ. ಅದಕ್ಕೆ ನಿಮ್ಮ ಋಣ ತೀರಿಸಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ. ಇಷ್ಟೆಲ್ಲಾ ಅಭಿವೃದ್ಧಿ ಕೆಲಸಗಳನ್ನು ಮಾಡಿದರೂ ಕೆಲವು ಮಂದಿ ಬೇರೆಯವರಿಗೆ ಸಿಳ್ಳೆ ಹೊಡೆಯುವುದು ಬೇಸರದ ಸಂಗತಿ ಎಂದು ತಿಳಿಸಿದರು.

ಒಳಗೊಂದು, ಹೊರಗೊಂದು ಮಾಡಲ್ಲ: ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆಯ ಕೋದಂಡ ರಾಮ ಮತ್ತು ಕೆ.ಆರ್‌.ನಗರ ಶ್ರೀಅರ್ಕೇಶ್ವರಸ್ವಾಮಿ ದೇವಾಲಯಗಳನ್ನು ಅಭಿವೃದ್ಧಿ ಪಡಿಸಿ ಪ್ರವಾಸಿ ತಾಣಗಳನ್ನಾಗಿ ಮಾಡಲಾಗುತ್ತಿದೆ. ಕ್ಷೇತ್ರದ ಅಭಿವೃದ್ಧಿಯನ್ನು ಹಿಂದಿನ ಬೆಳವಣಿಗೆಗೆ ಒಮ್ಮೆ ಹೋಲಿಕೆ ಮಾಡಿ ನೋಡಬೇಕು. ನಾನು ಬೇರೆ ರಾಜಕಾರಣಿಗಳ ರೀತಿ ಒಳಗೊಂದು, ಹೊರ ಗೊಂದು ಮಾಡಲ್ಲ. ನಾನು ಇದ್ದದ್ದನ್ನು ಇದ್ದಹಾಗೆ ನೇರವಾಗಿ ಮಾತನಾಡುವ ವ್ಯಕ್ತಿ ಎಂದ ಸಾ.ರಾ., ತಾಲೂಕಿನ ಕಗ್ಗೆರೆ ಬಳಿ ನಿರ್ಮಿಸಿರುವ ಗಾರ್ಮೆಂಟ್ಸ್‌ ಕಾರ್ಖಾನೆ ಆರಂಭಿಸಿದ ನಂತರ ಅದೇ ಮಾದರಿಯ ಕಾರ್ಖಾನೆಯನ್ನು ಸಾಲಿಗ್ರಾಮ ತಾಲೂಕಿನಲ್ಲಿಯೂ ತೆರೆಯಲಾಗುವುದು ಎಂದು ಭರವಸೆ ನೀಡಿದರು.

Advertisement

ಜಿಪಂ ಮಾಜಿ ಸದಸ್ಯ ಡಿ.ರವಿಶಂಕರ್‌ ಮಾತನಾಡಿ, ಅಂಬೇಡ್ಕರ್‌ ರಚಿಸಿರುವ ಸಂವಿಧಾನ ಈ ದೇಶದ ಆಸ್ತಿ. ಅದನ್ನು ಒಳ್ಳೆಯ ರೀತಿಯಲ್ಲಿ ಬಳಸಿಕೊಳ್ಳಬೇಕಾದುದು ನಮ್ಮೆಲ್ಲರ ಆದ್ಯ ಕರ್ತವ್ಯ. ಸಮಾಜದ ಪ್ರಜ್ಞಾವಂತರಾಗಬೇಕು. ಸಾಲಿಗ್ರಾಮ ದಲ್ಲಿ ಅಂಬೇಡ್ಕರ್‌ ಭವನ ನಿರ್ಮಿಸಲು ವೈಯಕ್ತಿಕ ವಾಗಿ ಆರ್ಥಿಕ ನೆರವು ನೀಡುತ್ತೇನೆ ಎಂದರು.

ಇದಕ್ಕೂ ಮೊದಲು ಗೌತಮಬುದ್ಧ, ಬಸವೇಶ್ವರ ಮತ್ತು ಅಂಬೇಡ್ಕರ್‌ರವರ ಭಾ ವಚಿತ್ರಗಳನ್ನು ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳು ಮತ್ತು ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಜಿಪಂ ಮಾಜಿ ಸದಸ್ಯ ಅಚ್ಯುತಾನಂದ, ಗುತ್ತಿಗೆದಾರರ ಸಂಘದ ಅಧ್ಯಕ್ಷ ಹನಸೋಗೆ ನಾಗರಾಜು, ಜಯಂತಿ ಆಚರಣಾ ಸಮಿತಿ ಅಧ್ಯಕ್ಷ ಎಸ್‌.ಎನ್‌.ರಾಮಯ್ಯ, ಮುಡಾ ಮಾಜಿ ಅಧ್ಯಕ್ಷ ಎಚ್‌.ಎನ್‌.ವಿಜಯ್‌, ಜಿಪಂ ಮಾಜಿ ಸದಸ್ಯ ರಾಜಯ್ಯ, ಗ್ರಾಪಂ ಅಧ್ಯಕ್ಷೆಯರಾದ ದೇವಿಕಾ, ನಂದಿನಿರಮೇಶ್‌, ಸದಸ್ಯರಾದ ಹರೀಶ್‌, ಎಸ್‌. ಆರ್‌.ಪ್ರಕಾಶ್‌, ಶಕೀಲ್‌, ಗಂಗಾಧರ್‌, ರಾಂಪುರಲೋಕೇಶ್‌, ತಾಪಂ ಮಾಜಿ ಅಧ್ಯಕ್ಷೆ ಹೇಮಾವತಿ, ಎಸ್‌ಸಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕಂಠಿಕುಮಾರ್‌, ಕಾನೂನು ಸಲಹಾ ಸಮಿತಿ ಸದಸ್ಯ ವಕೀಲ ಬಿ.ಎಂ.ಮೂರ್ತಿ, ವಕೀಲ ರುದ್ರಮೂರ್ತಿ, ಮುಖಂಡರಾದ ಗೋಪಾಲ್‌ರಾಜು, ದೇವರಾಜ್‌ , ತಹಶೀಲ್ದಾರ್‌ ಕೆ.ಎನ್‌.ಮೋಹನ್‌ಕುಮಾರ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next