Advertisement

ರೇಚಕ ಸ್ಥಾವರ ಶೀಘ್ರ ಉದ್ಘಾಟನೆ: ಸಚಿವ ರೈ 

03:43 PM Oct 11, 2017 | |

ಬಂಟ್ವಾಳ: ನೇತ್ರಾವತಿ ನದಿಯಿಂದ ಜಕ್ರಿಬೆಟ್ಟಿನಲ್ಲಿ ನೀರೆತ್ತುವ ಯು.ಐ.ಡಿ.ಎಸ್‌.ಎಸ್‌.ಎಂ.ಟಿ. ಯೋಜನೆಯಡಿ 57.79 ಕೋಟಿ ರೂ. ವೆಚ್ಚದ ಸಮಗ್ರ ಕುಡಿಯುವ ನೀರು ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದ್ದು, ಶೀಘ್ರವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದ್ದಾರೆ.

Advertisement

ಅವರು ಬಂಟ್ವಾಳ ಪುರಸಭಾ ವ್ಯಾಪ್ತಿಯ ಸಮಗ್ರ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾಹಿತಿ ಹಂಚಿಕೊಂಡರು.

ಕಾಮಗಾರಿ ಪ್ರಗತಿ ಪರಿಶೀಲನೆ ಸಂದರ್ಭದಲ್ಲಿ ಬಂಟ್ವಾಳ ಪುರಸಭಾ ಅಧ್ಯಕ್ಷ ಪಿ. ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮುಹಮ್ಮದ್‌ ನಂದರಬೆಟ್ಟು, ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಪಿಯೂಸ್‌ ಎಲ್‌. ರೋಡ್ರಿಗಸ್‌, ಪುರಸಭಾ ಸದಸ್ಯರಾದ ಪ್ರವೀಣ್‌ ಬಿ., ಗಂಗಾಧರ ಪೂಜಾರಿ, ಜಗದೀಶ್‌ ಕುಂದರ್‌, ವಾಸು ಪೂಜಾರಿ, ಮಹಮ್ಮದ್‌ ಶರೀಫ್‌ ಶಾಂತಿಯಂಗಡಿ, ವಸಂತಿ ಚಂದಪ್ಪ, ಚಂಚಲಾಕ್ಷಿ, ಪ್ರಭಾ ಆರ್‌. ಸಾಲ್ಯಾನ್‌, ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ, ಎಂಜಿನಿಯರ್‌ ಡೊಮಿನಿಕ್‌ ಡಿ’ಮೆಲ್ಲೊ, ತಾಲೂಕು ಪಂಚಾಯತ್‌ ಉಪಾಧ್ಯಕ್ಷ ಅಬ್ಟಾಸ್‌ ಅಲಿ, ಜಿಲ್ಲಾ ಪಂಚಾಯತ್‌ ಸದಸ್ಯರಾದ ಚಂದ್ರಪ್ರಕಾಶ್‌ ಶೆಟ್ಟಿ, ಬಿ. ಪದ್ಮಶೇಖರ್‌ ಜೈನ್‌, ಎಂ.ಸ್‌. ಮಹಮ್ಮದ್‌, ಗೇರು ನಿಗಮ ಅಧ್ಯಕ್ಷ ಬಿ.ಎಚ್‌. ಖಾದರ್‌, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್‌, ಎಪಿಎಂಸಿ ಅಧ್ಯಕ್ಷ ಕೆ. ಪದ್ಮನಾಭ ರೈ, ಮೆಸ್ಕಾಂ ಸಲಹಾ ಸಮಿತಿ ಸದಸ್ಯ ವೆಂಕಪ್ಪ ಪೂಜಾರಿ, ಯೂಸುಫ್‌  ಕರಂದಾಡಿ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಜಲಮಂಡಳಿಯ ಅಧಿಕಾರಿಗಳಾದ ಮಹದೇವಯ್ಯ, ಲಿಂಗ ರಾಜು, ಶೋಭಾಲಕ್ಷ್ಮೀ ಮತ್ತಿತರರು ಉಪಸ್ಥಿತರಿದ್ದರು. 

ದಿನಕ್ಕೆ 42 ಲಕ್ಷ ಲೀ. 
ನೀರಿನ ಸಂಗ್ರಹ

ಮುಂದಿನ 30 ವರ್ಷಗಳವರೆಗಿನ ಜನಸಂಖ್ಯೆ ಆಧರಿಸಿ ಈ ಯೋಜನೆ ಅನುಷ್ಠಾನಗೊಳಿಸಲಾಗಿದ್ದು, ದಿನವೊಂದಕ್ಕೆ 42 ಲಕ್ಷ ಲೀ. ಕುಡಿಯುವ ನೀರು ಸಂಗ್ರಹಿಸಲಾಗುತ್ತದೆ. ನೇತ್ರಾವತಿ ನದಿ ತೀರದಲ್ಲಿ ಇಂಟೆಕ್‌ ವೆಲ್‌, ಜ್ಯಾಕ್‌ ವೆಲ್‌, ಕನೆಕ್ಟಿಂಗ್‌ ಪೈಪ್‌ಲೈನ್‌ ಅಳವಡಿಸಲಾಗಿದ್ದು, ಜಕ್ರಿಬೆಟ್ಟಿನಲ್ಲಿ ಜಲಶುದ್ಧೀಕರಣ ಘಟಕ, ರೇಚಕ ಸ್ಥಾವರ ನಿರ್ಮಿಸಲಾಗಿದೆ. ಕಾಮಾಜೆ, ಕುರ್ಸುಗುಡ್ಡೆ, ಮೈರಾನ್‌ಪಾದೆ, ಉಪ್ಪುಗುಡ್ಡೆ, ಶಾಂತಿಗುಡ್ಡೆ, ಲೊರೆಟ್ಟೊಪದವು, ಗೂಡಿನಬಳಿ ಸಹಿತ ಒಟ್ಟು 7 ಕಡೆಗಳಲ್ಲಿ ನೀರಿನ ಟ್ಯಾಂಕ್‌ ನಿರ್ಮಿಸಲಾಗಿದೆ. ಈಗಾಗಲೇ 95 ಕಿ.ಮೀ. ಪೈಪ್‌ಲೈನ್‌ ಅಳವಡಿಸಲಾಗುತ್ತಿದ್ದು, 55 ಕಿ.ಮೀ. ಕಾಮಗಾರಿ ಪೂರ್ಣಗೊಂಡಿದೆ. ಹೆಚ್ಚುವರಿಯಾಗಿ ಪೈಪ್‌ಲೈನ್‌ ವಿಸ್ತರಣೆಗೆ 13 ಲ.ರೂ. ಅನುದಾನ ಕೋರಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ರಮಾನಾಥ ರೈ, ಸಚಿವ

Advertisement

Udayavani is now on Telegram. Click here to join our channel and stay updated with the latest news.

Next