Advertisement
ನಗರದ ಡಿಸಿಸಿ ಬ್ಯಾಂಕ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸತ್ತವರ ಹೆಸರಲ್ಲಿ ಸಾಲ ನೀಡಲಾಗಿದೆ ಎಂಬ ಸಚಿವರ ಆರೋಪವನ್ನು ತಳ್ಳಿಹಾಕಿದರು. ಸಾರ್ವಜನಿಕ ಜೀವನದಲ್ಲಿ ಕೆಲಸ ಮಾಡುತ್ತಿದ್ದೇವೆ. ಸಹಕಾರ ವ್ಯವಸ್ಥೆ ಬಡವರ ವ್ಯವಸ್ಥೆಯಾಗಿದೆ, ಸತ್ತವರ ಹೆಸರಿನಲ್ಲಿ ಸಾಲ ಕೊಟ್ಟಿದ್ದೇವೆ ಎಂಬ ನಿಮ್ಮ ಆರೋಪ ಗಂಭೀರವಾದುದು.
Related Articles
Advertisement
ವಾಸ್ತಾಂಶ ಅರಿಯಿರಿ: ಸಹಕಾರ ಸಂಘಗಳು ಬ್ಯಾಂಕಿನ ವ್ಯಾಪ್ತಿಗೆ ಒಳಪಡುವುದಿಲ್ಲ. ನಿಮ್ಮದೇ ಸರ್ಕಾರದ ಸಹಕಾರ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತವೆ. ರೈತರು, ಮಹಿಳೆಯರು ಸಾಲಕ್ಕಾಗಿ ಸಂಘಕ್ಕೆ ಅರ್ಜಿ ಹಾಕಿದಾಗ ಬೇಡಿಕೆಗೆ ತಕ್ಕಂತೆ ಹಣ ನೀಡಲಾಗುತ್ತದೆ. ವಾಸ್ತವಾಂಶ ಅರಿತು ಮಾತನಾಡಿದರೆ ಸಮಾಜಕ್ಕೆ ಉತ್ತಮ ಸಂದೇಶ ನೀಡಿದಂತಾಗುತ್ತದೆ ಎಂದು ಹೇಳಿದರು.
ಬ್ಯಾಂಕ್‌ಗೆ ಶಕ್ತಿ ತುಂಬಿದ್ದೇವೆ: 2014ಕ್ಕೆ ಮುನ್ನಾ ದಿವಾಳಿಯಾಗಿ ಸತ್ತು ಹೋಗಿದ್ದಂತಹ ಬ್ಯಾಂಕಿಗೆ ಶಕ್ತಿ ತುಂಬಿ ಬದುಕಿಸಲಾಗಿದೆ. ಇಲ್ಲಿ ನಮಗೇನು ಅಕಾರ ಶಾಶ್ವತವಲ್ಲ. ಬೆಳೆ ಸಾಲ ಕೊಡುವಾಗ ಮಾರ್ಟ್ ಗೇಜ್(ಅಡವು) ಮಾಡಿಯೇ ಸಾಲ ಮಂಜೂರು ಮಾಡಲಾಗುತ್ತದೆ. ರೈತರು ಆನ್‌ಲೈನ್ ಮೂಲಕವೇ ವ್ಯವಹಾರ ನಡೆಸುತ್ತಾರೆ. ಹೀಗಿರುವಾಗ ಹೇಗೆ ಅವ್ಯವಹಾರ ನಡೆಸಲು ಸಾಧ್ಯ ಎಂದು ಪ್ರಶ್ನಿಸಿದರು.
ತಪ್ಪು ಮಾಡಿದ್ರೆ ಜೈಲಿ ಹೋಗಲು ಸಿದ್ಧ: ಬಡ್ಡಿ ಕ್ಲೈಮ್ ಮಾಡುವುದು ಇಲಾಖೆಯ ಅಧಿಕಾರಿಗಳ ಜವಾಬ್ದಾರಿ. ಬಿಲ್ ತಯಾರಿಸುವುದು ಅಧಿಕಾರಿಗಳ ಜವಾಬ್ದಾರಿ. ವ್ಯವಸ್ಥೆಯಲ್ಲಿ ಯಾರು ತಪ್ಪು ಮಾಡಿದರೂ ಶಿಕ್ಷೆ ಅನುಭವಿಸಲೇಬೇಕು, ಡಾ. ಬಿ.ಆರ್. ಅಂಬೇಡ್ಕರ್ ಬರೆದಿರುವ ಸಂವಿಧಾನ ದಡಿ ಬದುಕುತ್ತಿದ್ದೇವೆ. ತಪ್ಪು ಮಾಡಿರುವುದು ಸಾಭೀತಾದರೆ ಜೈಲಿಗೆ ಹೋಗುವುದು ಖಚಿತ. ದೇಶದಲ್ಲಿ ಕಾನೂನಿಗಿಂತ ದೊಡ್ಡವರು ಯಾರು ಇಲ್ಲ ಎಂದು ಸ್ಪಷ್ಟಪಡಿಸಿದರು. ವಿನಾಕಾರಣ ರಾಜಕೀಯ ಸ್ವಾರ್ಥಕ್ಕಾಗಿ ಬಡವರು, ರೈತರು, ತಾಯಂದಿರಿಗೆ ಆರ್ಥಿಕ ಬಲ ತುಂಬಿರುವ ಬ್ಯಾಂಕ್ ವಿರುದ್ಧ ಮಾತನಾಡಿ, ಬ್ಯಾಂಕಿನ ಘನತೆಗೆ ಚ್ಯುತಿ ತಾರದಿರಿ, ಬ್ಯಾಂಕನ್ನು ಹಾಳು ಮಾಡಿದರೆ ಅದು ರೈತರು, ಮಹಿಳೆಯರಿಗೆ ಮಾಡಿದ ದ್ರೋಹ ವಾಗುತ್ತದೆ, ತಪ್ಪಾಗಿದ್ದರೆ ತನಿಖೆ ನಡೆಸಿ ಕ್ರಮ ಕೈಗೊಳ್ಳಿ ಎಂದು ಸಲಹೆ ನೀಡಿದರು.