Advertisement

ನೇತಾರರ ಆಸ್ತಿ ವಿವರಕ್ಕೆ ಶೀಘ್ರ ವಿಚಾರಣೆ: ಸುಪ್ರೀಂಕೋರ್ಟ್‌

07:40 AM Sep 13, 2017 | Team Udayavani |

ನವದೆಹಲಿ: ರಾಜಕೀಯ ನೇತಾರರ ಹೆಚ್ಚುತ್ತಿರುವ ಆಸ್ತಿ ವಿವರ ಮತ್ತು ಅವರ ವಿರುದ್ಧದ ಪ್ರಕರಣಗಳ ವಿಚಾರಣೆ ನಡೆಸಲು ಶೀಘ್ರ ಗತಿಯ ನ್ಯಾಯಾಲಯಗಳನ್ನು ಸ್ಥಾಪಿಸಬೇಕು. ಹೀಗೆಂದು ಸುಪ್ರೀಂಕೋರ್ಟ್‌ ಕೇಂದ್ರ ಸರ್ಕಾರಕ್ಕೆ ಸೂಚನೆ ಸಲಹೆ ಮಾಡಿದೆ. ಸುಪ್ರೀಂ ಕೋರ್ಟ್‌ಗೆ ಸಿಬಿಡಿಟಿ ಸಲ್ಲಿಸಿರುವ ಮಾಹಿತಿಯಂತೆ ಕಳೆದ ಎರಡು ಚುನಾವಣೆಗಳ ಅವಧಿಯ ನಡುವೆ ದೇಶದ 97 ಶಾಸಕರು ಹಾಗೂ ಏಳು ಮಂದಿ ಲೋಕಸಭಾ ಸದಸ್ಯರ ಸಂಪತ್ತು ಗಣನೀಯ ಪ್ರಮಾಣದಲ್ಲಿ ವೃದ್ಧಿಯಾಗಿದೆ. ಈ ರಾಜಕಾರಣಿಗಳ ಪಟ್ಟಿ ತನ್ನಲ್ಲಿದ್ದು, ಪ್ರಕರಣದ ವಿಚಾರಣೆ ನಡೆಸುವುದಾಗಿ ಕೋರ್ಟ್‌ ತಿಳಿಸಿದೆ.  ಜನಪ್ರತಿನಿಧಿಗಳ ವಿರುದ್ಧದ ಈ ರೀತಿಯ ಪ್ರಕರಣಗಳ ಶೀಘ್ರ ವಿಲೇವಾರಿಗೆ ವಿಶೇಷ ನ್ಯಾಯಾಲಯಗಳ ಸ್ಥಾಪನೆ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಕಾನೂನಿಗೆ ಅಗತ್ಯ ತಿದ್ದುಪಡಿ ತಂದು ಸೂಕ್ತ ಮೂಲ ಸೌಲಭ್ಯ ಒದಗಿಸಲು ಗಮನಹರಿಸುವಂತೆ ನ್ಯಾ.ಚೆಲಮೇಶ್ವರ್‌ ಹಾಗೂ ನ್ಯಾ. ಎಸ್‌.ಅಬ್ದುಲ್‌ ನಜೀರ್‌ ಅವರನ್ನು ±ಳಗೊಂಡ ನ್ಯಾಯಪೀಠ ಕೇಂದ್ರಕ್ಕೆ ಸೂಚಿಸಿದೆ.

Advertisement

ಕೆಲವೇ ಕೆಲವು ನಿರ್ದಿಷ್ಟ ನ್ಯಾಯಾಧಿಕರಣಗಳನ್ನು ಸ್ಥಾಪಿಸಿರುವುದನ್ನು ಬಿಟ್ಟರೆ ಈವರೆಗೆ ಯಾವುದೇ ಹೊಸ ನ್ಯಾಯಾಲಯಗಳ ಸ್ಥಾಪನೆಯಾಗಿಲ್ಲ. ಅಲ್ಲದೆ ಕೇಂದ್ರ ಆಯವ್ಯಯದಲ್ಲಿ ನ್ಯಾಯಾಂಗಕ್ಕೆ ಅತ್ಯಂತ ಕನಿಷ್ಠ ಪ್ರಮಾಣದ ಹಣ ಮೀಸಲಿಡುತ್ತಿರುವ ಬಗ್ಗೆಯೂ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next