Advertisement
ಸರಕಾರ ಎಲ್ಲರಿಗೂ ಏಕರೂಪದ ಮಾರ್ಗಸೂಚಿ ರಚಿಸಿ ಸಂಬಂಧಪಟ್ಟ ಇಲಾಖೆಗಳ ಮೂಲಕ ಪರಿಹಾರ ನೀಡಲು ತೀರ್ಮಾನಿಸಿದೆ. ಇದಕ್ಕೆ ಸಂಬಂಧಿಸಿದಂತೆ ಮೇಲುಸ್ತುವಾರಿಗೆ ನೋಡಲ್ ಅಧಿಕಾರಿ ನೇಮಿಸಲು ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ.
– ಪರಿಹಾರ ಪಡೆಯುವ ಫಲಾನುಭವಿಗಳು ಸರಕಾರದ ಸೇವಾ ಸಿಂಧು ಆ್ಯಪ್‌ನಲ್ಲಿ ಸರಕಾರ ಸೂಚಿಸುವ ದಾಖಲೆಗಳನ್ನು ಸಲ್ಲಿಸಿ ಅರ್ಜಿ ಭರ್ತಿ ಮಾಡಬೇಕು.
– ಫಲಾನುಭವಿ ಹೆಸರು, ಆಧಾರ್ ಕಾರ್ಡ್, ಬ್ಯಾಂಕ್ ಅಕೌಂಟ್ ನಂಬರನ್ನು ಕಡ್ಡಾಯವಾಗಿ ನೀಡಬೇಕು.
– ಜತೆಗೆ ಕಟ್ಟಡ ಕಾರ್ಮಿಕರು ತಮ್ಮ ಕಾರ್ಮಿಕ ನೋಂದಣಿ ಕಾರ್ಡ್ ನಂಬರ್ ನೀಡಬೇಕು.
– ನೇಕಾರರು ತಮ್ಮ ಹೆಸರಿನಲ್ಲಿ ಕೈಮಗ್ಗ ಇರುವ ದಾಖಲೆ ಸಲ್ಲಿಸಬೇಕು.
– ಆಟೋ ಹಾಗೂ ಟ್ಯಾಕ್ಸಿ ಚಾಲಕರು, ತಮ್ಮ ವಾಹನ ನಂಬರ್, ಡ್ರೈವಿಂಗ್ ಲೈಸನ್ಸ್, ಕಾರ್ಡ್ ಬ್ಯಾಡ್ಜ್ ನಂಬರ್, ಮಾರ್ಚ್ ಒಂದರವರೆಗೆ ಚಾಲನೆಯಲ್ಲಿರುವ ಚಾಲನಾ ಪ್ರಮಾಣ ಪತ್ರವನ್ನು ಸೇವಾ ಸಿಂಧು ಆ್ಯಪ್ ಮೂಲಕ ಭರ್ತಿ ಮಾಡಬೇಕು.
– ಹೂವು ಬೆಳೆಗಾರರು ತಮ್ಮ ಹೊಲದ ಪಹಣಿ ಪತ್ರ, ಒಂದು ಹೆಕ್ಟೇರ್ ಬೆಳೆಗೆ ಮಾತ್ರ ಪರಿಹಾರ ನೀಡಲು ಸರಕಾರ ನಿರ್ಧಾರ.
– ಹೂವು ಬೆಳೆಗಾರರ ಬಗ್ಗೆ ಗ್ರಾಮ ಪಂಚಾಯತ್ ಮೂಲಕ ಮಾಹಿತಿ ಸಂಗ್ರಹಿಸಲು ಸರಕಾರ ನಿರ್ಧರಿಸಿದೆ.
– ಕ್ಷೌರಿಕರು ಹಾಗೂ ಮಡಿವಾಳ ಸಮುದಾಯದವರಿಗೆ ದೇವರಾಜ ಅರಸು ನಿಗಮದಿಂದ ಪರಿಹಾರ ನೀಡಲು ಚಿಂತನೆ.
– ಚರ್ಮ ಕುಶಲಕರ್ಮಿಗಳಿಗೆ ಬಾಬು ಜಗಜೀವನ್ ರಾಮ್ ಅಭಿವೃದ್ಧಿ ನಿಗಮದಿಂದ ಪರಿಹಾರ ನೀಡಲು ತೀರ್ಮಾನಿಸಲಾಗಿದೆ.