Advertisement

ಮುಜರಾಯಿ ಇಲಾಖೆಯ ದೇಗುಲಗಳಿಗೆ ಶೀಘ್ರ ಸಮಿತಿಗಳ ರಚನೆ : ಆಯುಕ್ತ ಎ.ದಯಾನಂದ

08:04 PM Nov 01, 2020 | sudhir |

ಗಂಗಾವತಿ: ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಯ ದೇಗುಲಗಳ ಅವಧಿ ಮುಗಿದ ಕಮೀಟಿಗಳಿಗೆ ಹೊಸ ಸದಸ್ಯ ನೇಮಕಾತಿ ಪ್ರಕ್ರಿಯೆ ಶೀಘ್ರ ಮಾಡಲಾಗುತ್ತದೆ ಎಂದು ಮುಜರಾಯಿ ಇಲಾಖೆ ಆಯುಕ್ತ ಎ.ದಯಾನಂದ ತಿಳಿಸಿದ್ದಾರೆ.

Advertisement

ಅವರು ಕನಕಗಿರಿ, ಆನೆಗೊಂದಿ, ಪಂಪಾ ಸರೋವರ ಕಿಷ್ಕಿಂದಾ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿ ಉದಯವಾಣಿ ಜೊತೆ ಮಾತನಾಡಿ, ಕೊರೊನಾ ಹಿನ್ನೆಲೆಯಲ್ಲಿ ರಾಜ್ಯದ ಬಹುತೇಕ ದೇಗುಲಗಳನ್ನು ಬಂದ್ ಮಾಡಲಾಗಿದೆ. ಕೋವಿಡ್ ಮಾರ್ಗಸೂಚಿಯಂತೆ ಅಂಜನಾದ್ರಿ, ಹಂಪಿ ವಿರೂಪಾಕ್ಷ ದೇಗುಲಗಳಲ್ಲಿ ಭಕ್ತರಿಗೆ ದೇವರ ದರ್ಶನ ಅವಕಾಶ ಕಲ್ಪಿಸಲಾಗಿದೆ. ಕನಕಗಿರಿ ಆನೆಗೊಂದಿ, ಶ್ರೀ ರಂಗನಾಥ, ಪಂಪಾ ಸರೋವರ, ಕಿಷ್ಕಿಂದಾ ಅಂಜನಾದ್ರಿ ಬೆಟ್ಟ ಹಾಗೂ ಹುಲಿಗಿ ಶ್ರೀ ಹುಲಿಗೆಮ್ಮ ದೇವಸ್ಥಾನಗಳಲ್ಲಿ ಭಕ್ತರಿಗೆ ಮೂಲಸೌಕರ್ಯ ಕಲ್ಪಿಸಲಾಗುತ್ತದೆ.

ದೇಗುಲಗಳಲ್ಲಿ ಈ ವರ್ಷ ಸಪ್ತಪದಿ ಯೋಜನೆಯಲ್ಲಿ ಮದುವೆ ಮಾಡಿಕೊಳ್ಳಲು ಯೋಜನೆ ಈ ವರ್ಷ ಆರಂಭವಾಗಲಿದೆ. ಮುಜರಾಯಿ ಇಲಾಖೆಯ ದೇಗುಲಗಳಲ್ಲಿ ಧಾರ್ಮಿಕ ಆಚರಣೆ ಸೇರಿ ಹಲವು ವಿಷಯಗಳನ್ನು ಚರ್ಚೆ ನಡೆಸಲು ನ.03 ರಂದು ಬೆಂಗಳೂರಿನಲ್ಲಿ ಅಧಿಕಾರಿಗಳ ಸಭೆ ಕರೆಯಲಾಗಿದೆ. ಸಮಗ್ರ ಚರ್ಚೆ ನಡೆಸಿ ದೇಗುಲಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುತ್ತದೆ ಎಂದರು.

Advertisement

ಆನೆಗೊಂದಿಯಲ್ಲಿ ವಿಜಯನಗರದ ರಾಜವಂಶಸ್ಥರು ನಿರ್ಮಿಸಿದ ಅರಮನೆಯನ್ನು ಆಯುಕ್ತ ಎ.ದಯಾನಂದ ವೀಕ್ಷಿಸಿದರು.
ತಹಸೀಲ್ದಾರ್ ಎಂ.ರೇಣುಕಾ, ಪೊಲೀಸ್ ಇಲಾಖೆಯ ಚೌವ್ಹಾಣ,ಬಸವರಾಜ, ಕಂದಾಯ ನಿರಿಕ್ಷಕ ಮಂಜುನಾಥ ಹಿರೇಮಠ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next