Advertisement
ಶುಕ್ರವಾರ ಪಟ್ಟಣದ ಶಾಸಕರ ಮಾದರಿ ಶಾಲೆಯಲ್ಲಿ ಶಾಸಕ ಶ್ರೀನಿವಾಸ ಮಾನೆ ಹಾಗೂ ತಹಶೀಲ್ದಾರ್ ಪಿ.ಎಸ್.ಎರ್ರಿಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎನ್.ಹುರಳಿ ಅವರು ವಿದ್ಯಾರ್ಥಿಗಳ ಪಾಲಕರೊಂದಿಗೆ ಶಾಲೆಯ ಸಮಸ್ಯೆಗಳ ಕುರಿತು ಸಭೆ ನಡೆಸಿ ಚರ್ಚಿಸಿದರು. ಆದರೆ, ಚರ್ಚೆಯ ಫಲವಾಗಿ ಪಾಲಕರು ಅಪೇಕ್ಷಿಸಿದ ಮೂಲಭೂತ ಸೌಕರ್ಯಗಳನ್ನು ಹಂತ ಹಂತವಾಗಿ ಈಡೇರಿಸುವ ಭರವಸೆ ನೀಡಿದರು. ಆದರೆ, ಎಲ್ಲ ಸೌಲಭ್ಯಗಳನ್ನು ಕಲ್ಪಿಸುವವರೆಗೆ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಪಾಲಕರು ಪಟ್ಟು ಹಿಡಿದರು.
Related Articles
ಈ ವಿಚಾರದಲ್ಲಿ ಒಮ್ಮತ ಮೂಡಲೇ ಇಲ್ಲ.
Advertisement
ಶಾಲೆಗೆ ಒಬ್ಬ ದಕ್ಷ ಪದವೀಧರ ಮುಖ್ಯ ಶಿಕ್ಷಕರನ್ನು ನೇಮಿಸಬೇಕು. ಇಲ್ಲಿನ ಮಕ್ಕಳ ತರಗತಿಗಳಿಗೆ ಅನುಗುಣವಾಗಿ ಶಿಕ್ಷಕರನ್ನು ಒದಗಿಸಬೇಕು. ಆಂಗ್ಲ ಮಾಧ್ಯಮ ಶಾಲೆ ಇದೆ. ಆದರೆ, ಅದಕ್ಕನುಗುಣವಾಗಿ ಒಟ್ಟು ಶಿಕ್ಷಕರ ಕೊರತೆಯಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಅಡಚಣೆಯಾಗದಂತೆ ಕ್ರಮ ಜರುಗಿಸುವ ಜವಾಬ್ದಾರಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನೀಡಲಾಯಿತು. ಆದರೆ, ಪಾಲಕರು ಈ ಬಗ್ಗೆ ನಾಳೆಯಿಂದ ಯಾವ ನಿರ್ಣಯ ತೆಗೆದುಕೊಳ್ಳುವರು ಎಂಬುದರ ಮೇಲೆ ಶಾಲೆ ಆರಂಭದ ನಿರ್ಣಯವಾಗಲಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಖುದ್ದಾಗಿ ಶಾಲೆಗೆ ಭೇಟಿ ನೀಡಿ, ಅಲ್ಲಿನ ಸಮಸ್ಯೆಗಳಿಗೆ ಪರಿಹಾರ ನೀಡಿ, ಸೌಲಭ್ಯ ಒದಗಿಸಲು ಆಸಕ್ತಿ ತೋರಲೇಬೇಕು. ಇಲ್ಲಿಯೇ ಬಿಆರ್‌ಸಿ ಕೇಂದ್ರವಿದ್ದು, ಈ ಕೇಂದ್ರದ ಆವರಣದಲ್ಲೇ ಇರುವ ಸರಕಾರಿ ಶಾಲೆಗೆ ಬೇಕಾಗುವ ಸೌಲಭ್ಯ ಒದಗಿಸದ ಸ್ಥಿತಿ ನಿಜಕ್ಕೂ ಬೇಸರ ತರಿಸುವಂತದ್ದು ಎಂದು ಪಾಲಕರು ದೂರಿದರು.
ಈ ಸಂದರ್ಭದಲ್ಲಿ ಪಾಲಕ ಪ್ರತಿನಿಧಿಗಳಾದ ಪ್ರಶಾಂತ ಮುಚ್ಚಂಡಿ, ರವಿಚಂದ್ರ ಪುರೋಹಿತ, ಪ್ರವೀಣ ಸುಲಾಖೆ, ಪ್ರವೀಣ ಲಿಂಗೇರಿ, ತುಳಜೇಶ ಮೂಲಿಮನಿ, ಮನೋಜ ಕಲಾಲ, ನೇತಾಜಿ ಕಲಾಲ, ಗುರು ಏಸಕ್ಕನವರ, ಗುರುಮೂರ್ತಿ ಹೆಗಡೆ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಉಮೇಶ ಮಾಳಗಿ ಮಾತನಾಡಿದರು.