Advertisement

Quick 5 with Pavana Gowda; ಮೈಥಾಲಜಿ ಪಾತ್ರ ಕನಸಿನಲ್ಲಿ ಪಾವನಾ ಗೌಡ

05:19 PM Oct 05, 2023 | Team Udayavani |

1 ಬಿಡುಗಡೆಯಾಗುತ್ತಿರುವ “ಫೈಟರ್‌’ ಸಿನಿಮಾದಲ್ಲಿ ನಿಮ್ಮ ಪಾತ್ರ ಹೇಗಿದೆ?

Advertisement

“ಫೈಟರ್‌’ ಒಂದು ಔಟ್‌ ಆ್ಯಂಡ್‌ ಔಟ್‌ ಆ್ಯಕ್ಷನ್‌ ಎಂಟರ್‌ಟೈನ್ಮೆಂಟ್‌ ಶೈಲಿಯ ಸಿನಿಮಾ. ಇದರಲ್ಲಿ ಹಳ್ಳಿ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಹಳ್ಳಿ ಹುಡುಗಿ ಅಂದ್ರೆ ತುಂಬ ಟ್ರೆಡಿಷನಲ್‌ ಪಾತ್ರ ಅಲ್ಲ. ಇಂದಿನ ಹಳ್ಳಿ ಹುಡುಗಿಯರು ಹೇಗಿರುತ್ತಾರೋ ಹಾಗೆ ಕಾಣಿಸಿಕೊಂಡಿದ್ದೇನೆ.

2 “ಫೈಟರ್‌’ ಶೂಟಿಂಗ್‌ ಅನುಭವ ಹೇಗಿತ್ತು?

ಶೂಟಿಂಗ್‌ ಅನುಭವ ತುಂಬ ಚೆನ್ನಾಗಿತ್ತು. ನನ್ನ ಪಾತ್ರದ ಬಹುತೇಕ ಶೂಟಿಂಗ್‌ ಚಿತ್ರದುರ್ಗದಲ್ಲಿ ನಡೆಯಿತು. ಹಿರಿಯ ನಟರಾದ ಶರತ್‌ ಲೋಹಿತಾಶ್ವ, ಗಿರಿಜಾ ಲೋಕೇಶ್‌, ಕುರಿ ಪ್ರತಾಪ್‌ ಮೊದಲಾದ ಕಲಾವಿದರ ಜೊತೆಗೆ ಹೆಚ್ಚಿನ ದೃಶ್ಯಗಳಿದ್ದವು

3 ಸಿನಿಮಾದ ಮೇಲೆ ನಿಮ್ಮ ನಿರೀಕ್ಷೆ ಹೇಗಿದೆ?

Advertisement

“ಫೈಟರ್‌’ ಸಿನಿಮಾದ ಸೆಕೆಂಡ್‌ ಹಾಫ್ನಲ್ಲಿ ನನ್ನ ಪಾತ್ರ ಬರುತ್ತದೆ. ಲವ್‌, ಎಮೋಶನ್ಸ್‌ ಎಲ್ಲವೂ ಇರುವಂಥ ಪಾತ್ರ ಇದಾಗಿದೆ. ಸಿನಿಮಾ ಮತ್ತು ನನ್ನ ಪಾತ್ರ ಆಡಿಯನ್ಸ್‌ಗೆ ಇಷ್ಟವಾಗಲಿದೆ ಎಂಬ ನಂಬಿಕೆಯಿದೆ. ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದೇನೆ.

4 ಸದ್ಯ ಕೈಯಲ್ಲಿರುವ ಚಿತ್ರಗಳ ಬಗ್ಗೆ ಏನಂತೀರಿ?

ಸದ್ಯ “ಮೆಹಬೂಬ’ ಮತ್ತು “ಅಜ್ಞಾತವಾಸಿ’ ಸಿನಿಮಾಗಳಲ್ಲಿ ನಾಯಕಿಯಾಗಿ ಅಭಿನಯಿಸಿದ್ದು, ಈ ಎರಡೂ ಸಿನಿಮಾಗಳೂ ಬಿಡುಗಡೆಗೆ ರೆಡಿಯಾಗಿವೆ. “ಮೆಹಬೂಬ’ ಸಿನಿಮಾದಲ್ಲಿ ನಾಜಿಯಾ ಎಂಬ ಮುಸ್ಲಿಂ ಹುಡುಗಿಯಾಗಿ ಮತ್ತು “ಅಜ್ಞಾತವಾಸಿ’ ಸಿನಿಮಾದಲ್ಲಿ ಪಂಕಜ ಎಂಬ ಕೊಡಗಿನ ಹಳ್ಳಿ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ.

5 ಮುಂದೆ ಮಾಡಬೇಕೆಂದಿರುವ ಪಾತ್ರಗಳ ಬಗ್ಗೆ?

ಮುಂದೆ ಮಾಡಬೇಕು ಎಂದುಕೊಂಡಿರುವ ಪಾತ್ರಗಳು ತುಂಬ ಇದೆ. ಅದರಲ್ಲೂ ಮೈಥಾಲಜಿಕಲ್‌ ಸಬ್ಜೆಕ್ಟ್ ಸಿನಿಮಾದಲ್ಲಿ ಪಾತ್ರ ಮಾಡಬೇಕು ಮತ್ತು ಕಾಮಿಡಿ ಪಾತ್ರಗಳನ್ನು ಮಾಡಬೇಕು ಎಂಬ ಆಸೆಯಿದೆ. ಅವಕಶ ಸಿಕ್ಕರೆ ಖಂಡಿತಾ ಅಂಥ ಪಾತ್ರಗಳನ್ನು ಮಾಡುತ್ತೇನೆ.

Advertisement

Udayavani is now on Telegram. Click here to join our channel and stay updated with the latest news.

Next