Advertisement
ಕೇರಳದಲ್ಲಿ ಸೋಂಕು ತೀವ್ರವಾಗಿ ವ್ಯಾಪಿಸಿರುವುದರಿಂದ ಅಲ್ಲಿನ ಜನರು ರಾಜ್ಯ ಪ್ರವೇಶಿಸಲು ಕೋವಿಡ್ ನೆಗೆಟಿವ್ ವರದಿಯನ್ನು ಕಡ್ಡಾಯಗೊಳಿಸಲಾಗಿದೆ. ಚೆಕ್‌ಪೋಸ್ಟ್‌ನಲ್ಲಿ ನೆಗೆಟಿವ್ ವರದಿ ಇದ್ದ ರಷ್ಟೇ ಪ್ರವೇಶ ಸಿಗುತ್ತದೆ. ಹೀಗಾಗಿ ಪ್ರಯಾಣಿಕರು ವರದಿ ಸಲ್ಲಿಸಲು ಸಾಲಗಟ್ಟಿ ನಿಂತಿದ್ದರು. ಸರಕು ಸಾಗಣೆ ವಾಹನಗಳ ಚಾಲಕರಿಗೆ ಥರ್ಮಲ್ ಸ್ಕ್ರೀನಿಂಗ್ ನಡೆಸಿ ಒಳ ಬಿಡಲಾಗುತ್ತಿದೆ. ಹೀಗಾಗಿ ಶುಕ್ರವಾರ ಬೆಳ್ಳಂ ಬೆಳಗ್ಗೆ ಕೊರೆಯುವ ಚಳಿಯಲ್ಲಿ ಪ್ರಯಾಣಿಕರು ನೆಗೆಟಿವ್ ವರದಿ ಸಲ್ಲಿಸಲು ಹಾಗೂ ಚಾಲಕರು ಥರ್ಮಲ್ ಸ್ಕ್ರೀನಿಂಗ್ ಮಾಡಿಸಿಕೊಳ್ಳಲು ಕ್ಯೂನಲ್ಲಿ ನಿಂತಿದ್ದರು. ಈ ದೃಶ್ಯವು ಚಿತ್ರಮಂದಿರಗಳಲ್ಲಿ ಮೊದಲ ಪ್ರದರ್ಶನಕ್ಕೆ ಟಿಕೆಟ್ ಪಡೆಯಲು ಕ್ಯೂ ನಿಂತಿರುವಂತೆ ಕಂಡು ಬಂದಿತು. ಸೋಂಕಿತರು ಕೇರಳದಿಂದ ಕರ್ನಾಟಕಕ್ಕೆ ಬಾರದಂತೆ ಕಟ್ಟುನಿಟ್ಟಿನ ಎಚ್ಚರವಹಿಸಿದ್ದು, ಆರ್ ಟಿಪಿಸಿಆರ್ ನೆಗೆಟಿವ್ ವರದಿಯನ್ನೇ ತರಬೇಕು ಎಂದು ಸೂಚಿಸಲಾಗಿದೆ.
Related Articles
Advertisement