Advertisement
ಬುಧವಾರ ಪದವಿ ಇತರ ವಿಷಯದ ಪರೀಕ್ಷೆ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ನಡೆಯುತ್ತಿರುವ ಕಾರಣ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಕಾಲೇಜಿನ ಆವರಣದ ಹೊರಗೆ ಪ್ರತಿಭಟನೆ ನಡೆಸಿದರು.
Related Articles
Advertisement
ಠಾಣಾಧಿಕಾರಿ ಭೇಟಿ: ವಿದ್ಯಾರ್ಥಿಗಳು ಕಾಲೇಜಿನ ಗೇಟ್ ಹೊರಗೆ, ಮುಧೋಳ ನಿಪ್ಪಾಣಿ ರಾಜ್ಯ ಹೆದ್ದಾರಿ ಮೇಲೆ ವಿದ್ಯಾರ್ಥಿಗಳು ಪ್ರತಿಭಟನೆ ಮಾಡುತ್ತಿರುವ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಮಹಾಲಿಂಗಪುರ ಠಾಣಾಧಿಕಾರಿ ವಿಜಯ ಕಾಂಬಳೆ ಕಾಲೇಜು ಪ್ರಾಚಾರ್ಯ ಬಿ.ಎಂ. ಪಾಟೀಲ್ ಅವರನ್ನು ಕರೆಸಿ, ಅವರೊಂದಿಗೆ ಚರ್ಚಿಸಿ ಇದು ಪರೀಕ್ಷಾ ವಿಭಾಗದಿಂದ ಆಗಿರುವ ತೊಂದರೆ. ದಯವಿಟ್ಟು ವಿದ್ಯಾರ್ಥಿಗಳು ಪ್ರತಿಭಟನೆ ಕೈಬಿಡಲು ವಿನಂತಿಸಿದರು.
ನಂತರ ಚನ್ನಮ್ಮ ವಿವಿಯಿಂದ ಪರೀಕ್ಷೆ ಮುಂದೂಡಿರುವ ಸೂಚನಾ ಪತ್ರ ಬಂದ ನಂತರ ವಿದ್ಯಾರ್ಥಿಗಳು ಪ್ರತಿಭಟನೆ ಕೈಬಿಟ್ಟು ಮನೆಗೆ ತೆರಳಿದರು.
ಈ ವೇಳೆ ಕೆಎಎಲ್ ಸಂಸ್ಥೆಯ ಎಸ್‌ಸಿಪಿ ಪದವಿ ಕಾಲೇಜು ಪ್ರಾಚಾರ್ಯ ಡಾ| ಬಿ.ಎಂ. ಪಾಟೀಲ್, ಉಪನ್ಯಾಸಕರಾದ ವಿ.ಎ. ಅಡಹಳ್ಳಿ, ಶಂಕರ ಕೋಳಿ, ಅಭಯ ಉಗಾರೆ, ಎಎಸೈ ಎಲ್.ಕೆ. ಅಗಸರ, ಪೇದೆಗಳಾದ ಜೆ.ಜಿ. ಪಾಟೀಲ್, ರಾಘವೇಂದ್ರ ಕಾಂಬಳೆ, ಎಬಿವಿಪಿಯ ಅಭಿ ಲಮಾಣಿ, ಮಹಾಲಿಂಗ ಪಾಟೀಲ ಹಾಗೂ ಪತ್ರಿಕೋದ್ಯಮ ವಿದ್ಯಾರ್ಥಿಗಳು ಇದ್ದರು.