Advertisement

ಕಾಗದಪತ್ರಗಳ ಸಮಿತಿ ನೋಟಿಸ್‌ ಪ್ರಶ್ನಿಸಿ ರಿಟ್‌

09:40 AM Jan 17, 2018 | Team Udayavani |

ಬೆಂಗಳೂರು: ಲೋಕಾಯುಕ್ತ ಸಂಸ್ಥೆಯ ವಾರ್ಷಿಕ ಲೆಕ್ಕಪರಿಶೋಧನಾ ವರದಿ ಸಲ್ಲಿಸಿಲ್ಲವೆಂಬ ಕಾರಣಕ್ಕೆ ವಿಧಾನಮಂಡಲದ ಕಾಗದ ಪತ್ರಗಳ ಸಮಿತಿ ಜಾರಿಗೊಳಿಸಿದ್ದ ನೋಟಿಸ್‌ ಪ್ರಶ್ನಿಸಿ ಲೋಕಾಯುಕ್ತ ರಿಜಿಸ್ಟ್ರಾರ್‌ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

Advertisement

ಸ್ವಾಯತ್ತ ಸಂಸ್ಥೆಯಾದ ಲೋಕಾಯುಕ್ತ ಸಂಸ್ಥೆ ಪ್ರತಿವರ್ಷದ ಆಯವ್ಯಯ ಲೆಕ್ಕಗಳನ್ನು ಕೇಂದ್ರ ಲೆಕ್ಕ ಪರಿಶೋಧನಾ ಸಂಸ್ಥೆ (ಸಿಎಜಿ) ನಡೆಸಿ ವರದಿ ನೀಡುತ್ತದೆ. ಸಿಎಜಿ ವರದಿ ಹಾಗೂ ಸಂಸ್ಥೆಯ ಆಡಳಿತದ ವಾರ್ಷಿಕ ವರದಿಯನ್ನು ಲೋಕಾಯುಕ್ತ ಕಾಯಿದೆ 12(6) ಅನ್ವಯ ಪ್ರತಿವರ್ಷ ರಾಜ್ಯಪಾಲರಿಗೆ ವರದಿ ಕಳುಹಿಸಿಕೊಡಲಾಗುತ್ತದೆ. ನೇರವಾಗಿ ರಾಜ್ಯಸರ್ಕಾರಕ್ಕೆ ಸಲ್ಲಿಸಲು ಅವಕಾಶವಿಲ್ಲ. ಹೀಗಾಗಿ ಕಾಗದ ಪತ್ರಗಳ ಸಮಿತಿ ಮುಂದೆ ಹಾಜರಾಗಿ ವಿವರಣೆ ನೀಡುವಂತೆ ನೀಡಿರುವ ನೋಟಿಸ್‌ ರದ್ದುಗೊಳಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ. 

ಈ ಅರ್ಜಿ ಬುಧವಾರ ಹೈಕೋರ್ಟ್‌ ಏಕಸದಸ್ಯ ಪೀಠದ ಮುಂದೆ ವಿಚಾರಣೆಗೆ ಬರುವ ಸಾಧ್ಯತೆಯಿದೆ. ಕಳೆದ ಆರು ವರ್ಷಗಳಿಂದ ಲೋಕಾಯುಕ್ತ ಆಯವ್ಯಯ ಲೆಕ್ಕವನ್ನು ಕಾಗದಪತ್ರಗಳ ಸಮಿತಿ ಮುಂದೆ ಮಂಡಿಸಿಲ್ಲ. ಈ ಬಗ್ಗೆ ಸಮಿತಿಯ ಮುಂದೆ ಹಾಜರಾಗಿ ವಿವರಣೆ ನೀಡುವಂತೆ ಕೋರಿ ಕಳೆದ ಆಗಸ್ಟ್‌ನಲ್ಲಿ ಸಮಿತಿ ಅಧ್ಯಕ್ಷ ಶಾಸಕ ಸಾ.ರಾ ಮಹೇಶ್‌, ಲೋಕಾಯುಕ್ತ ರಿಜಿಸ್ಟ್ರಾರ್‌ಗೆ ನೋಟಿಸ್‌ ಜಾರಿಗೊಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next