Advertisement

ಸೋನೊವಾಲ್ ಅಧಿಕಾರದಲ್ಲಿ ಉಳಿಯುತ್ತಾರೆಯೇ ಎಂಬುವುದು ಪ್ರಶ್ನೆಯಲ್ಲ : ಅಸ್ಸಾಂ ಸಿಎಂ

02:57 PM Mar 28, 2021 | Team Udayavani |

ಗುವಾಹಟಿ : ಅಸ್ಸಾಂ ನಲ್ಲಿ ಭಾರತೀಯ ಜನತಾ ಪಾರ್ಟಿ ಮತ್ತೆ ಅಧಿಕಾರವನ್ನು ಹಿಡಿಯಲಿದೆ ಎಂದು ಮುಖ್ಯಮಂತ್ರಿ ಸರಬಾನಂದ ಸೋನೊವಾಲ ಭರವಸೆ ವ್ಯಕ್ತ ಪಡಿಸಿದ್ದಾರೆ.

Advertisement

ಮೊದಲ ಹಂತದ ಅಸ್ಸಾಂ ನ ವಿಧಾನ ಸಭಾ ಚುನಾವಣೆಯ ಪ್ರಮುಖ ಅಭ್ಯರ್ಥಿಯಾಗಿದ್ದ ಸೋನೊವಾಲ, ಮೊದಲ ಹಂತದ ಚುನಾವಣೆಯಿಂದ ದೊರಕಿದ ಪ್ರತಿಕ್ರಿಯೆಯ ಮೇರೆಗೆ ಈ ಭರವಸೆಯನ್ನು ನೀಡಿದ್ದು, ಅಭಿವೃದ್ಧಿ ಕಾರ್ಯಗಳಿಂದ ಹಾಗೂ ರಾಜ್ಯದಲ್ಲಿ ಶಾಂತಿಯನ್ನು ತಂದಿರುವ ಕಾರಣದಿಂದ ನಮ್ಮ ಸರ್ಕಾರ ಅಸ್ಸಾಂ ನ ಜನರ ಪ್ರೀತಿಯನ್ನು, ವಿಶ್ವಾಸವನ್ನು ಗಳಿಸಿದೆ ಎಂದು ಅವರು ಹೇಳಿದ್ದಾರೆ.

ಓದಿ :    ಸಿಡಿ ಬಗ್ಗೆ ಮಾತನಾಡಲು ನನಗೆ ವಾಕರಿಕೆ ಬರುತ್ತದೆ. ನನಗೆ ಯಾವುದೇ ಆಸಕ್ತಿಯಿಲ್ಲ: ಈಶ್ವರಪ್ಪ

ಐದು ವರ್ಷಗಳ ಹಿಂದೆ ನಾವು ಇಲ್ಲಿ ನಮ್ಮ ಸರ್ಕಾರವನ್ನು ಪ್ರಾರಂಭಿಸಿದಾಗ ಉತ್ತಮ ಆಡಳಿತವನ್ನು ಖಾತರಿ ಪಡಿಸುವುದಕ್ಕೆ ಹಲವಾರು ಸವಾಲನ್ನು ಎದುರಿಸಬೇಕಾಯಿತು. ಅಸ್ಸಾಂ ನಲ್ಲಿದ್ದ ಭ್ರಷ್ಟಾಚಾರ, ಉಗ್ರಗ್ರಾಮಿಗಳು ಹಾಗೂ ಅಕ್ರಮ ವಲಸಿಗರಿಂದ ರಾಜ್ಯವನ್ನು ರಕ್ಷಣೆ ಮಾಡಲು, ಮುಕ್ತಗೊಳಿಸಲು ನಾವು ಹರಸಾಹಸ ಪಡಬೇಕಾಯಿತು. ನಾವು ಜನ ಪರ ಕಾರ್ಯಗಳನ್ನು ಮಾಡುವುದರ ಮೂಲಕ ಜನರ ಪ್ರೀತಿಯನ್ನು ಗಳಿಸಿಕೊಂಡಿದ್ದೇವೆ. ಅವರ ನಂಬಿಕೆಯನ್ನು ಉಳಿಸಿಕೊಂಡಿದ್ದೇವೆ. ಪ್ರಧಾನಿ ನರೇಂದ್ರ ಮೋದಿಯವರು ಸಾಕಷ್ಟು ಪರಿಶ್ರಮ ಪಟ್ಟಿದ್ದಾರೆ. ಜನರು ನಮ್ಮ ಮೇಲೆ ಈಗ ಅಪಾರವಾದ ನಂಬಿಕೆಯನ್ನು ಹೊಂದಿದ್ದಾರೆ. ಬಿಜೆಪಿ ಇದ್ದಲ್ಲಿ ರಕ್ಷಣೆ, ಅಭಿವೃದ್ಧಿ, ಶಾಂತಿ ಇರುತ್ತದೆ ಎಂದು ಜನರಿಗೆ ಈಗ ಗೊತ್ತಾಗಿದೆ ಎಂದು ಸರಬಾನಂದ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಅಸ್ಸಾಂ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸೋನೊವಾಲ್ ಅಧಿಕಾರದಲ್ಲಿ ಉಳಿಯುತ್ತಾರೆಯೇ ಎಂಬುವುದು ಪ್ರಶ್ನೆಯಲ್ಲ. ಬಿಜೆಪಿ ಉತ್ತಮ ಕೆಲಸ ಮಾಡಿದೆ. ಬಿಜೆಪಿ ಅಸ್ಸಾಂ ನಲ್ಲಿ ಮತ್ತೆ ಅಧಿಕಾರ ಹಿಡಿಯಬೇಕೆಂಬುವುದು ನಮ್ಮ ಆಶಯ. ಪ್ರಧಾನಿ ಮೋದಿಯವರ ಆಶೀರ್ವಾದ ನಮ್ಮೆಲ್ಲರ ಮೇಲಿದೆ. ಎಲ್ಲಾ ಮಂತ್ರಿಗಳು ನಮಗೆ ಪ್ರೋತ್ಸಾಹಿಸಿದ್ದಾರೆ.

Advertisement

ಇನ್ನು, ಬಿಜೆಪಿ ಸರ್ಕಾರವು ದೋಷರಹಿತ ರಾಷ್ಟ್ರೀಯ ನಾಗರಿಕರ ನೋಂದಣಿಯನ್ನು (ಎನ್‌ಆರ್‌ಸಿ) ತರುತ್ತದೆ ಮತ್ತು ಯಾವುದೇ “ಅಕ್ರಮ ವಲಸಿಗರು” ರಾಜ್ಯದಲ್ಲಿ ಉಳಿಯದಂತೆ ನೋಡಿಕೊಳ್ಳುತ್ತದೆ ಎಂದು ಅವರು ಪುನರುಚ್ಚರಿಸಿದ್ದಾರೆ.

ಓದಿ :    ಭಾವನಾತ್ಮಕತೆಯ ಬದುಕನ್ನು ತೇಲಿಸಿದ ‘ಹಿನ್ನೀರ ಅಲೆಗಳು’

Advertisement

Udayavani is now on Telegram. Click here to join our channel and stay updated with the latest news.

Next