Advertisement

ಆರೆಸ್ಸೆಸ್‌ ಸ್ವಯಂ ಸೇವಕರಿಂದ ಕ್ವಾರಂಟೈನ್‌ ನಿಗಾ

06:09 AM Jul 04, 2020 | Lakshmi GovindaRaj |

ಬೆಂಗಳೂರು: ರಾಜಧಾನಿಯಲ್ಲಿ ಕೋವಿಡ್‌ 19 ಜಾಗೃತಿಗಾಗಿ ಬೂತ್‌ ಮಟ್ಟದಲ್ಲಿ ಸೇವೆ ಸಲ್ಲಿಸಲು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂ ಸೇವಕರು ಸಜ್ಜಾಗುತ್ತಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್‌ 19 ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿರುವುದು ಒಂದೆಡೆಯಾದರೆ, ಹೋಂ ಕ್ವಾರಂಟೈನ್‌ನಲ್ಲಿ ಇರಬೇಕಾದವರು ನಿಯಮ  ಗಳನ್ನು ಸರಿಯಾಗಿ ಪಾಲನೆಯಾಗುತ್ತಿಲ್ಲ. ಹೋಂ ಕ್ವಾರಂಟೈನ್‌ ನಲ್ಲಿ ಇರಬೇಕಾದವರು ಹೊರಗಡೆ ಸುತ್ತಿದ್ದಾರೆ. ಹೀಗಾಗಿ  ಸ್ವಯಂಸೇವಕರ ಮೂಲಕ ಹೋಂ ಕ್ವಾರಂಟೈನ್‌ನಲ್ಲಿರುವವರ ಮೇಲೆ ಹೆಚ್ಚಿನ ನಿಗಾ ಹಾಗೂ ನಿಯಂತ್ರಣಕ್ಕೆ ಬಿಬಿಎಂಪಿ ಮುಂದಾಗಿದೆ.

Advertisement

ಬೆಂಗಳೂರಿನಲ್ಲಿರುವ ಸುಮಾರು 8500 ಬೂತ್‌ಗಳಿದ್ದು, 40 ಸಾವಿರ ಸ್ವಯಂಸೇವಕರ ಅವ್ಯಶಕತೆ  ಈಗ ಬಿಬಿಎಂಪಿಗೆ ಇದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ 10 ಸಾವಿರ ಸ್ವಯಂಸೇವಕರನ್ನು ಒದಗಿಸುವ ಬಗ್ಗೆ ಪ್ರಯತ್ನ ನಡೆಯುತ್ತಿದೆ. ಇದಕ್ಕಾಗಿ ವಸತಿ, ಉಪವಸತಿಯ ಕಾರ್ಯಕರ್ತರಿಗೆ ಸೂಚನೆಯನ್ನು ನೀಡಲಾಗಿದೆ ಎಂದು  ಆರೆಸ್ಸೆಸ್‌ ಮೂಲಗಳು ತಿಳಿಸಿವೆ. ಈ ಸಂಬಂಧ ಬಿಬಿಎಂಪಿಯ ಅಧಿಕಾರಿಗಳು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಹಾನಗರ  ವ್ಯಾಪ್ತಿಯ ಪ್ರಮುಖರೊಂದಿಗೆ ಮಾತುಕತೆ ನಡೆಸಿದ್ದಾರೆ. ಹಾಗೆಯೇ ಸಂಘದ ಹಿರಿಯ ನಗರ ಹಾಗೂ  ವಸತಿಯ ಕಾರ್ಯಕರ್ತರಿಗೆ ಈ ಸಂಬಂಧ ಸೂಚನೆ ನೀಡಿದ್ದಾರೆ.

ಅದರಂತೆ ಸ್ವಯಂಸೇವಕರು ಬಿಬಿಎಂಪಿಯಿಂದ ಕ್ವಾರಂಟೈನ್‌ ವಾಚ್‌ಗಾಗಿ ರಚಿಸಿರುವ ಆ್ಯಪ್‌ ಮೂಲಕ ನೋಂದಣಿ ಕಾರ್ಯ ಆರಂಭಿಸಿದ್ದಾರೆ. ಈಗಾಗಲೇ 2 ಸಾವಿರ  ಸ್ವಯಂ ಸೇವಕರು ನೋಂದಣಿಯನ್ನು ಮಾಡಿಕೊಂಡಿದ್ದಾರೆ  ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ. ಅರೆಸ್ಸೆಸ್‌ ಜತೆಗೆ ಇನ್ನು ಕೆಲವು ಸಂಘಟನೆಗಳ ಸ್ವಯಂಸೇವಕರು ಬಿಬಿಎಂಪಿ ಆ್ಯಪ್‌ ಮೂಲಕ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ.  ಆ್ಯಪ್‌ನಲ್ಲಿ ಸಂಪೂರ್ಣ ಮಾಹಿತಿ ನೀಡಿ, ನೋಂದಣಿ ಮಾಡಿಕೊಂಡ ನಂತರ ಅಲ್ಲಿಯೇ ಒಂದು ಐಡಿ ಸಿಗಲಿದೆ. ಅದನ್ನು ಪ್ರಿಂಟ್‌ಔಟ್‌ ತೆಗೆದುಕೊಂಡು ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ ಎಂದು ವಿವರ ನೀಡಿದರು.

ಸ್ವಯಂಸೇವಕರ ಕಾರ್ಯವೇನು?: ಬಿಬಿಎಂಪಿಯ ಸೂಚನೆಯಂತೆ ಬೂತ್‌ಗಳಲ್ಲೇ ಸ್ವಯಂಸೇವಕರು ಕಾರ್ಯನಿರ್ವಹಿಸಲಿದ್ದಾರೆ. ಪ್ರತಿ ಬೂತ್‌ನಲ್ಲಿ ಯಾರ್ಯಾರು ಕ್ವಾರಂಟೈನ್‌ ಆಗಲು ಇರುವವರನ್ನು ಪತ್ತೆ ಹಚ್ಚಿ, ಕ್ವಾರಂಟೈನ್‌  ಮಾಡಿಸಲು ಬಿಬಿಎಂಪಿಗೆ ಸಹಾಯ ಮಾಡಲಿದ್ದಾರೆ. ಹಾಗೆಯೇ ಹೋಂ ಕ್ವಾರಂಟೈ ನ್‌ ಆದವರನ್ನು ಸಂಪರ್ಕ ಮಾಡಿ, ಅವರಿಗೆ ಅಗತ್ಯ ವಸ್ತುಗಳ ಮಾಹಿತಿ ಪಡೆಯಲಿದ್ದಾರೆ. ಹಾಗೆಯೇ ತಮ್ಮ ಬೂತ್‌ ವ್ಯಾಪ್ತಿಯಲ್ಲಿ ನಿಯಮ  ಮೀರಿದವರ ಮಾಹಿತಿ ಸಂಗ್ರಹಿಸಿ, ಬಿಬಿಎಂಪಿಗೆ ಒದಗಿಸಲಿದ್ದಾರೆ. ಸೋಂಕಿತರಲ್ಲಿ ಯಾವುದೇ ರೀತಿಯ ರೋಗ ಲಕ್ಷಣ  ಇಲ್ಲದವರು ಅನೇಕರಿದ್ದಾರೆ. ಅಂತವರಿಗೆ ಮನೆಯಲ್ಲೇ ಐಸೋಲೇಷನ್‌ ವ್ಯವಸ್ಥೆ ಮಾಡಿ, ಚಿಕಿತ್ಸೆ ನೀಡುವ ಬಗ್ಗೆ  ಬಿಬಿಎಂಪಿ ತಜ್ಞರ ಸಲಹೆಯಂತೆ ಚಿಂತೆನೆ ನಡೆಸುತ್ತಿದೆ. ಈ ರೀತಿಯ ವ್ಯವಸ್ಥೆ ಬೂತ್‌ ಮಟ್ಟದ ಸ್ವಯಂ ಸೇವಕರ ಕಾರ್ಯ ಅತಿ ಅಗತ್ಯವಿರುತ್ತದೆ ಎಂದು ಬಿಬಿಎಂಪಿ ಅಧಿಕಾರಿಯೊಬ ºರು ವಿವರ ನೀಡಿದರು.

ಸ್ವಸಹಾಯ ಸಂಘಗಳಿಗೆ ತರಬೇತಿ: ಕೋವಿಡ್‌-19 ಸಂಬಂಧಿಸಿದಂತೆ ಬೆಂಗಳೂರು ನಗರ ಜಿಪಂ ವ್ಯಾಪ್ತಿಯ ಸ್ವಸಹಾಯ ಸಂಘಗಳಿಗೆ ಕೋವಿಡ್‌ ಬಾಧಿತರಲ್ಲಿ ಉಂಟಾಗುವ ತೊಂದರೆ ಹೋಗಲಾಡಿಸುವ ನಿಟ್ಟಿನಲ್ಲಿ ವಿಡಿಯೋ  ಕಾನ್ಫರೆನ್ಸ್‌ ಮೂಲಕ ತರಬೇತಿ  ನೀಡಲಾಯಿತು. ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್‌ನ ಹಿರಿಯ ಅಧಿಕಾರಿ ಕವಿತಾ ಮಾತನಾಡಿ, ಸೋಂಕು ಕಾಣಿಸಿಕೊಂಡವರನ್ನು ಕ್ವಾರಂಟೈನ್‌ ಮಾಡುವುದು. ಗುಣಮುಖರಾಗಿ  ಬಂದವರನ್ನು ಕೆಲದಿನ ಹೋಂ ಕ್ವಾರಂಟೈನ್‌ನಲ್ಲಿ ಇರಿಸಿ ಅವರ ಬಗ್ಗೆ ನಿಗಾವಹಿಸುವುದರ ಬಗ್ಗೆ ಬೆಂಗಳೂರು ನಗರ ಜಿಪಂ ವ್ಯಾಪ್ತಿಯಲ್ಲಿ ಇರುವ ಸ್ವಸಹಾಯ ಗುಂಪುಗಳಿಗೆ ತಿಳಿವಳಿಕೆ ನೀಡಿದರು. ಕೋವಿಡ್‌ 19 ಗುಣಮುಖರಾದವರನ್ನು ದೂರವಿಡುವುದು ಸರಿಯಲ್ಲ. ಈ ಬಗ್ಗೆ ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ತಿಳುವಳಿಕೆ ನೀಡಬೇಕು. ಅವರಿಗೆ ಯಾವುದೇ ಸಮಸ್ಯೆಯಾಗದ ರೀತಿ ನೋಡಿಕೊಳ್ಳಬೇಕು. ಈ ಬಗ್ಗೆ ಜನರಲ್ಲಿ ಮತ್ತಷ್ಟು ಅರಿವು ಮೂಡಿಸಬೇಕು ಎಂದು  ಹೇಳಿದರು.

Advertisement

ಸದ್ಯ ಕೋವಿಡ್‌ ಕೇಂದ್ರದಲ್ಲಿ ಸೋಂಕಿನ ಲಕ್ಷಣ ಇಲ್ಲದವರಿಗೆ ಚಿಕಿತ್ಸೆ ಕೊಡಬಹುದಾಗಿದೆ. ಪ್ರಸ್ತುತಕ್ಕಿಂತ ಹೆಚ್ಚಿನ ಸೋಂಕಿತರನ್ನು ಕಂಡು ಬಂದಲ್ಲಿ, ಅವರವರ ಮನೆಯಲ್ಲೇ ಚಿಕಿತ್ಸೆಗೆ ತಿಳಿಸಲಾಗಿದೆ. ಮುಂದಿನ ದಿನಗಳಲ್ಲಿ ಸೋಂಕಿತ  ಸಂಖ್ಯೆಗೆ ಅನುಗುಣವಾಗಿ ತೀರ್ಮಾನ ತೆಗೆದುಕೊಳ್ಳಲಾಗುವುದು. 
-ಬಿ.ಎಚ್‌.ಅನಿಲ್‌ ಕುಮಾರ್‌, ಬಿಬಿಎಂಪಿ ಆಯುಕ್ತ

ಬಿಬಿಎಂಪಿ ಆ್ಯಪ್‌ ಮೂಲಕ ರಿಜಿಸ್ಟೇಷನ್‌ ಮಾಡಿಕೊಂಡು ಸ್ವಯಂಸೇವಕರಾಗಿ ಸೇವೆ ಸಲ್ಲಿಸಲು ಸೂಚನೆ ನೀಡಿದ್ದೇವೆ. ಈಗಾಗಲೇ 2 ಸಾವಿರ ಸ್ವಯಂಸೇವಕರು ನೋಂದಣಿ ಮಾಡಿಕೊಂಡಿದ್ದಾರೆ. ತಮ್ಮ ಬೂತ್‌ಗಳನ್ನೇ ಬಿಬಿಎಂಪಿ  ಸೂಚನೆಯಂತೆ ಕಾರ್ಯನಿರ್ವಹಿಸಲಿ ದ್ದಾರೆ. 10 ಸಾವಿರ ಸ್ವಯಂಸೇವಕರನ್ನು ಈ ಕಾರ್ಯಕ್ಕಾಗಿ ವ್ಯವಸ್ಥೆ ಮಾಡಲಾಗುವುದು.
-ಕೆ.ಎಸ್‌.ಶ್ರೀಧರ್‌, ಮಹಾನಗರ ಕಾರ್ಯವಾಹ, ಆರೆಸ್ಸೆಸ್‌

* ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next