Advertisement

ಗ್ರಾಮೀಣ ಭಾಗದಲ್ಲೂ ಕ್ವಾರಂಟೈನ್‌ ವ್ಯವಸ್ಥೆ: ಡಾ.ಕೆ.ಸುಧಾಕರ್‌

08:02 PM May 30, 2020 | Sriram |

ಬೆಂಗಳೂರು: ಮುಂದಿನ ದಿನಗಳಲ್ಲಿ ಕ್ವಾರಂಟೈನ್‌ ವ್ಯವಸ್ಥೆಯನ್ನು ಬದಲಾಯಿಸುತ್ತೇವೆ. ಗ್ರಾಮೀಣ ಮಟ್ಟದಲ್ಲಿಯೂ ಕ್ವಾರಂಟೈನ್‌ಗೆ ಅಗತ್ಯ ವ್ಯವಸ್ಥೆ ಮಾಡುತ್ತೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದ್ದಾರೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಗಡಿ ಭಾಗದಲ್ಲಿ ಹೊರಗಡೆಯಿಂದ ಜನರು ಬರುತ್ತಿರುವುದರಿಂದ ಕೋವಿಡ್-19 ಹೆಚ್ಚಾಗುತ್ತಿದೆ. ಆದರೆ, ಸೋಂಕು ಹರಡುವಿಕೆ ಸಾಮುದಾಯಿಕವಾಗಿಲ್ಲ. ಮುಂದಿನ ದಿನಗಳಲ್ಲಿ ಪರಿಸ್ಥಿತಿಗೆ ತಕ್ಕಂತೆ ಕ್ವಾರಂಟೈನ್‌ ವ್ಯವಸ್ಥೆ ಬದಲಾಯಿಸಿ ಗ್ರಾಮೀಣ ಭಾಗಕ್ಕೂ ವಿಸ್ತರಿಸಲಾಗುವುದು ಎಂದು ಹೇಳಿದರು.

ಲಾಕ್‌ ಡೌನ್‌ ಮಾಡುವುದರಿಂದ ರೋಗಾಣು ಸಾಯುವುದಿಲ್ಲ. ರೋಗ ತಡೆಯಲು ಬೇಕಾದ ಸಿದ್ಧತೆ ಮಾಡಿಕೊಳ್ಳಲು ಲಾಕ್‌ ಡೌನ್‌ ಮಾಡಿದ್ದೇವೆ. ಹಿರಿಯರು ಹೆಚ್ಚು ಜಾಗೃತರಾಗಿರಬೇಕು. ಮಧ್ಯ ವಯಸ್ಕರು ಯುವಕರು ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಬೇಕು. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಕೋವಿಡ್-19 ನಿಯಂತ್ರಿಸುವಲ್ಲಿ ಬಹಳ ಮುಂದಿದೆ ಎಂದರು.

ರಾಜ್ಯದಲ್ಲಿ ಕೋವಿಡ್-19 ಹರಡುವ ಪ್ರಮಾಣ ನಿಯಂತ್ರಣದಲ್ಲಿದೆ ಜನರು ಆತಂಕಗೊಳ್ಳುವ ಅಗತ್ಯವಿಲ್ಲ. ಕೋವಿಡ್-19 ಜೀವ ತೆಗೆಯುವಷ್ಟು ಕೆಟ್ಟ ವೈರಸ್‌ ಅಲ್ಲ. ಹೊರ ರಾಜ್ಯದಿಂದ ಕಲಬುರ್ಗಿಗೆ 35 ಸಾವಿರ ಜನರು ಬಂದಿದ್ದಾರೆ. ಅವರಲ್ಲಿ 29 ಸಾವಿರ ಜನರು ಚೇತರಿಸಿಕೊಂಡು ವಾಪಸ್‌ ಆಗಿದ್ದಾರೆ ಎಂದು ಹೇಳಿದರು.

ಯಾದಗಿರಿಗೆ 14600 ಜನ ಬಂದಿದ್ದಾರೆ. ಅವರಲ್ಲಿ 244 ಜನರಲ್ಲಿ ಪೊಸಿಟಿವ್‌ ಪ್ರಕರಣ ಇವೆ. ಈಗ 6022 ತಪಾಸಣೆ ಮಾಡಲಾಗಿದೆ ಯಾರಿಗೂ ರೋಗದ ಲಕ್ಷಣ ಇಲ್ಲ. ಜನರು ಆತಂಕಕ್ಕೆ ಒಳಗಾಗುವುದು ಬೇಡ ಎಂದರು.

Advertisement

ರಾಯಚೂರಿಗೆ 11300 ಜನ ಬಂದಿದ್ದಾರೆ. ಮಹಾರಾಷ್ಟ್ರದಿಂದ 3000 ಜನ ಬಂದಿದ್ದಾರೆ. ಅವರಲ್ಲಿ ಶೇ 3 % ರಷ್ಟು ಜನರಲ್ಲಿ ಪಾಸಿಟೀವ್‌ ಇದೆ. ಬೀದರ್‌ ಗೆ 16852 ಜನ ಬಂದಿದ್ದಾರೆ. ಅದರಲ್ಲಿ 15016 ಜನರನ್ನು ತಪಾಸಣೆ ಮಾಡಲಾಗಿದೆ. ಅಲ್ಲಿ ಶೇ 1 ರಷ್ಟು ಮಾತ್ರ ಸೋಂಕು ಕಂಡು ಬಂದಿದೆ ಎಂದು ತಿಳಿಸಿದರು.

ಮುಂಬೈನಿಂದ ಮಂಡ್ಯಕ್ಕೆ 1564 ಜನರು ಬಂದಿದ್ದಾರೆ. ಅವರಲ್ಲಿ 224 ಜನರಿಗೆ ಪೊಜಿಸಿವ್‌ ಬಂದಿದೆ. ಇನ್ನೂ 706 ಜನರ ಫಲಿತಾಂಶ ಬರಬೇಕು. ಆದರೆ, ಸೋಂಕಿತ ವ್ಯಕ್ತಿಯನ್ನು ಇಡೀ ಸಮಾಜ ದೂರ ಮಾಡುವ ಪ್ರಯತ್ನ ಮಾಡುತ್ತಿದೆ. ಇದೊಂದು ಸಾಮಾನ್ಯ ಸೋಂಕು. ಸೋಂಕಿತ ವ್ಯಕ್ತಿಗೆ ಸಾಮಾಜಿಕವಾಗಿ ಕೀಳಾಗಿ ಕಾಣುವುದು ಬೇಡ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next