Advertisement
ಸಂಪೂರ್ಣ ಲಾಕ್‌ಡೌನ್ ಇದ್ದ ಸಂದರ್ಭ ಹೊರ ರಾಜ್ಯ, ವಿದೇಶಗಳಿಂದ ಬರುವವರಿಗೆ ಆರಂಭದಲ್ಲಿ 28 ದಿನ ಮತ್ತೆ 14 ದಿನಗಳ ಸಾಂಸ್ಥಿಕ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿತ್ತು. 2 ಬಾರಿ ತಪಾಸಣೆ ವ್ಯವಸ್ಥೆ ಇತ್ತು. ಆಗ ಕೋವಿಡ್ ಸೋಂಕು ಬೇಗ ಪತ್ತೆಯ ಜತೆಗೆ ಹರಡುವಿಕೆಯೂ ನಿಯಂತ್ರಣದಲ್ಲಿತ್ತು. ಹೊಸ ಮಾರ್ಗಸೂಚಿ ಪ್ರಕಾರ 7 ದಿನಗಳ ಸಾಂಸ್ಥಿಕ ಕ್ವಾರಂಟೈನ್, ಸೋಂಕಿನ ಗುಣ ಲಕ್ಷಣವಿದ್ದಲ್ಲಿ ಮಾತ್ರವೇ ತಪಾಸಣೆ. ಈ ಮಾರ್ಗಸೂಚಿ ಅನುಸರಿಸಿದರೆ ಸೋಂಕು ರಾಜ್ಯದಲ್ಲಿ ಗಂಭೀರ ಸ್ವರೂಪ ತಾಳಲಿದೆ ಎಂದು ಎಚ್ಚರಿಸಿದರು. ಹೊಸ ಮಾರ್ಗಸೂಚಿಯನ್ನು ಪುನರ್ ವಿಮರ್ಶೆ ಮಾಡುವಂತೆಯೂ ಆಗ್ರಹಿಸಿದರು.
ಕೋವಿಡ್ ಸೋಂಕಿನ ಆರಂಭದ ದಿನಗಳಲ್ಲಿ ಪ್ರತಿದಿನ ಸಭೆ ನಡೆಸುತ್ತಿದ್ದ ಜಿಲ್ಲೆಯ ಸಚಿವರು, ಸಂಸದರು, ಶಾಸಕರು ಈಗ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಕೋವಿಡ್ ಕ್ಕೆ ವಿಶೇಷಾಧಿಕಾರಿಯಾಗಿ ನೇಮಕ ಗೊಂಡಿದ್ದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಲ್ಲಿದ್ದಾರೆಂಬುದೇ ತಿಳಿದಿಲ್ಲ. ಒಟ್ಟಿನಲ್ಲಿ ಜನಸಾಮಾನ್ಯರಲ್ಲಿ ಆತಂಕ ಹೆಚ್ಚಾಗಿದೆ ಎಂದು ಯು.ಟಿ. ಖಾದರ್ ಹೇಳಿದರು.