Advertisement

ಯು.ಕೆ.ಗೆ ಕ್ವಾರಂಟೈನ್‌ ತಿರುಗೇಟು

12:26 AM Oct 02, 2021 | Team Udayavani |

ಹೊಸದಿಲ್ಲಿ/ವಾಷಿಂಗ್ಟನ್‌: ಭಾರತದಿಂದ 2 ಡೋಸ್‌ ಲಸಿಕೆ ಪಡೆದುಕೊಂಡಿದ್ದರೂ ಪ್ರಮಾಣಪತ್ರ ಕ್ರಮಬದ್ಧವಾಗಿಲ್ಲ ಎಂದು ತಕರಾರು ತೆಗೆದಿರುವ ಯುನೈಟೆಡ್‌ ಕಿಂಗ್‌ಡಮ್‌ಗೆ ಕೇಂದ್ರ ಸರಕಾರದ ಸರಿಯಾದ ಪಾಠ ಕಲಿಸಿದೆ. ಅ.4ರಿಂದ ಅನ್ವಯವಾಗುವಂತೆ ಯು.ಕೆ.ಯಿಂದ ದೇಶಕ್ಕೆ ಆಗಮಿಸುವವರಿಗೆ ಕಡ್ಡಾಯವಾಗಿ ಹತ್ತು ದಿನಗಳ ಕ್ವಾರಂಟೈನ್‌ ನಿಯಮ ಕಡ್ಡಾಯಗೊಳಿಸಿ ಶುಕ್ರವಾರ ಆದೇಶ ಹೊರಡಿಸಲಾಗಿದೆ. ಆ ದೇಶದಿಂದ ಆಗಮಿಸುವರಲ್ಲಿ ಲಸಿಕೆ ಪಡೆದವರು, ಪಡೆಯದವರು ಎಂಬ ವರ್ಗೀಕರಣ ಮಾಡದೆ ನಿಯಮ ಅನುಷ್ಠಾನ ಮಾಡಲು ನಿರ್ಧರಿಸಲಾಗಿದೆ. ಇದರ ಜತೆಗೆ ಪ್ರಯಾಣಕ್ಕೆ 72 ಗಂಟೆಗಳ ಮುನ್ನ ನಡೆಸಲಾಗಿರುವ ಆರ್‌ಟಿ-ಪಿಸಿಆರ್‌ ಪರೀಕ್ಷೆಯ ಪ್ರಮಾಣ ಪತ್ರವನ್ನು ಪ್ರಯಾಣಿಕರು ಹಾಜರುಪಡಿಸಬೇಕಿದೆ.

Advertisement

ಯುನೈಟೆಡ್‌ ಕಿಂಗ್‌ಡಮ್‌ ಸರಕಾರ ಅ.4ರಿಂದ ಅನ್ವಯವಾಗುವಂತೆ ನಿಯ ಮಗಳಲ್ಲಿ ಬದಲಾವಣೆ ಮಾಡಿತ್ತು. ಈ ಪೈಕಿ ಕೊವಿಶೀಲ್ಡ್‌ ಅನ್ನು ಮಾನ್ಯತೆ ಪಡೆದ ಲಸಿಕೆಯ ಪಟ್ಟಿಗೆ ಸೇರಿಸಿರಲಿಲ್ಲ. ಜತೆಗೆ ಪ್ರಮಾಣಪತ್ರಕ್ಕೂ ತಕರಾರು ತೆಗೆದಿತ್ತು. ಕೇಂದ್ರ ಸರಕಾರ ಪ್ರಬಲ ಆಕ್ಷೇಪ ಮಾಡಿದ ಬಳಿಕ ಕೊವಿಶೀಲ್ಡ್‌ ಅನ್ನು ಮಾನ್ಯತೆ ಪಡೆದ ಲಸಿಕೆಗಳ ಪಟ್ಟಿಗೆ ಸೇರಿಸಲಾಗಿತ್ತು. ಆದರೆ ಪ್ರಮಾಣಪತ್ರದ ಬಗ್ಗೆ ಮಾತ್ರ ಅಲ್ಲಿನ ಸರಕಾರ ಕ್ರಮ ಕೈಗೊಳ್ಳಲೇ ಇಲ್ಲ. ಈ ಬಗ್ಗೆ ಪದೇ ಪದೆ ಮನವಿ ಮಾಡಿದ್ದರೂ, ಪ್ರಯೋಜನವಾಗದ್ದರಿಂದ ಕೇಂದ್ರ ಕ್ವಾರಂಟೈನ್‌ ನಿಯಮ ಕಡ್ಡಾಯಗೊಳಿಸಿದೆ.

196 ದಿನಗಳಿಗೆ ಕನಿಷ್ಠ: ದೇಶದಲ್ಲಿ 196 ದಿನಗಳಿಗೆ ಹೋಲಿಕೆ ಮಾಡಿದರೆ, ಗುರುವಾರದಿಂದ ಶುಕ್ರವಾರದ ಅವಧಿಯಲ್ಲಿ ಸಕ್ರಿಯ ಸೋಂಕು ಸಂಖ್ಯೆ 2,75,224ಕ್ಕೆ ಇಳಿಕೆಯಾಗಿದೆ. ಇದು 2020ರ ಮಾರ್ಚ್‌ ಬಳಿಕ ಕನಿಷ್ಠದ್ದು. ಇನ್ನು ಇದೇ ಅವಧಿ ಯಲ್ಲಿ 26, 727 ಹೊಸ ಸೋಂಕು ದೃಢಪಟ್ಟಿದೆ. ಇದು ಶೇ.13ರಷ್ಟು ಹೆಚ್ಚಳವಾಗಿದೆ. ಜತೆಗೆ 277 ಮಂದಿ ಸಾವನ್ನಪ್ಪಿದ್ದಾರೆ. ಚೇತರಿಕೆ ಪ್ರಮಾಣ ಶೇ.97.86 ಆಗಿದೆ.

ಇದನ್ನೂ ಓದಿ:ಕಾಂಗ್ರೆಸ್‌ ವರ್ಸಸ್‌ ಕ್ಯಾಪ್ಟನ್‌ ಮಾಜಿ ಸಿಎಂ-ರಾವತ್‌ ವಾಕ್ಸಮರ

18 ತಿಂಗಳ ಆಸೀಸ್‌ ನಿರ್ಬಂಧ ಅಂತ್ಯ
ಬರೋಬ್ಬರಿ 18 ತಿಂಗಳ ಬಳಿಕ ಆಸ್ಟ್ರೇಲಿಯಾ ಸರಕಾರ ಲಾಕ್‌ ಡೌನ್‌ ನಿಯಮಗಳನ್ನು ಸಡಿಲಿಸಿದೆ. ಮುಂದಿನ ತಿಂಗಳಿಂದ ಅಂತಾರಾಷ್ಟ್ರೀಯ ಪ್ರಯಾಣಕ್ಕೆ ಅನುಮತಿ ನೀಡಿದೆ. ಮೊದಲನೇ ಹಂತದಲ್ಲಿ ಆಸೀಸ್‌ ಪ್ರಜೆಗಳಿಗೆ ಮತ್ತು ಆ ದೇಶದ ಶಾಶ್ವತ ಪೌರತ್ವ ಹೊಂದಿದವರಿಗೆ, ಅನಂತರದ ಹಂತದಲ್ಲಿ ಇತರ ದೇಶಗಳ ಪ್ರಯಾಣಿಕರಿಗೆ ಅನುಮತಿ ನೀಡಲಾಗುತ್ತದೆ. ಲಸಿಕೆ ಪಡೆದವರು ವಿದೇಶಕ್ಕೆ ತೆರಳಿದರೆ, 7 ದಿನ ಗಳ ಹೋಂ ಕ್ವಾರಂಟೈನ್‌ ಹಾಗೂ ಲಸಿಕೆ ಪೂರ್ಣ ವಾಗದವರು ಪ್ರಯಾಣ ಮಾಡಿ ಬಂದರೆ 14 ದಿನಗಳ ಕಾಲ ಹೋಟೆಲ್ ನಲ್ಲಿ ಕ್ವಾರಂಟೈನ್‌ ಆಗ ಬೇಕು ಎಂದು ಪ್ರಧಾನಿ ಸ್ಕಾಟ್‌ ಮಾರಿಸನ್‌ ತಿಳಿಸಿದ್ದಾರೆ.

Advertisement

ಕೊವಿಶೀಲ್ಡ್‌ಗೆ ಮಾನ್ಯತೆ
ದೇಶದ ಕೊವಿಶೀಲ್ಡ್‌ ಲಸಿಕೆಗೆ ಆಸ್ಟ್ರೇಲಿಯಾ ಸರಕಾರ ಮಾನ್ಯತೆ ನೀಡಿದೆ. ಹೀಗಾಗಿ, ಅದನ್ನು ಪಡೆದುಕೊಂಡ ದೇಶದ ವಿದ್ಯಾರ್ಥಿಗಳಿಗೆ ಆ ದೇಶಕ್ಕೆ ಪ್ರಯಾಣ ಮಾಡುವುದು ಸುಲಭವಾಗಲಿದೆ. ಈ ಬಗ್ಗೆ ಕೇಂದ್ರ ಸರಕಾರ ಆಸೀಸ್‌ ಪ್ರಧಾನಿ ಸ್ಕಾಟ್‌ ಮಾರಿಸನ್‌ಗೆ ಒತ್ತಡ ಹೇರಿತ್ತು. ಇದರ ಜತೆಗೆ ಅಲ್ಲಿನ ಸರಕಾರ ಚೀನದ ಸಿನೊವಾಕ್‌ ಲಸಿಕೆಗೆ ಕೂಡ ಮಾನ್ಯತೆ ಸಿಕ್ಕಿದೆ.

ಕೊರೊನಾಕ್ಕೆ ಬರಲಿದೆ ಮಾತ್ರೆ!
ಅಮೆರಿಕದ ಮೆರ್ಕ್‌ ಆ್ಯಂಡ್‌ ರಿಡ್ಜ್ಬ್ಯಾಕ್‌ ಬಯೋಥೆರಪ್ಯೂಟಿಕ್ಸ್‌ ಎಂಬ ಔಷಧ ಕಂಪೆನಿ ಸೋಂಕಿಗೆ ಮಾತ್ರೆಯನ್ನು ಅಭಿವೃದ್ಧಿಪಡಿಸಿ ರುವುದಾಗಿ ಹೇಳಿಕೊಂಡಿದೆ. ಅದಕ್ಕೆ ಮಾಲ್‌ನ್ಯುಪಿರಾವಿರ್‌ (molnupiravir ) ಎಂಬ ಹೆಸರು ಇರಿಸಲಾಗಿದೆ. ಅದನ್ನು ತೆಗೆದುಕೊಂಡರೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುವ ಅಗತ್ಯ ಬರುವುದಿಲ್ಲ ಎಂದು ಕಂಪೆನಿ ಹೇಳಿಕೊಂಡಿದೆ. ಸದ್ಯ ಮೂರನೇ ಹಂತದ ಪ್ರಯೋಗಗಳು ನಡೆಯುತ್ತಿದೆ. ಕಂಪೆನಿ ಹೇಳಿಕೊಂಡಿರುವ ಪ್ರಕಾರ ಅದು ಶೇ.50ರಷ್ಟು ಸಾವು ಸಂಭವಿಸುವುದನ್ನು ತಡೆ ಯುತ್ತದೆ. ಒಂದು ವೇಳೆ ಅಮೆರಿಕ ಸರಕಾರ ಅದಕ್ಕೆ ಅನುಮತಿ ನೀಡಿದರೆ, ಜಗತ್ತಿನ ಮೊದ ಲನೇಯದ್ದು ಎಂಬ ಹೆಗ್ಗಳಿಕೆ ಅದಕ್ಕೆ ಸಿಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next