Advertisement

ಮಠಾಧೀಶರಿಗೆ ಮಠಗಳಲ್ಲಿ “ಕ್ವಾರಂಟೈನ್‌’!

10:31 AM Apr 19, 2020 | sudhir |

ಉಡುಪಿ: ನಾನಾ ಕಡೆಗಳಲ್ಲಿ ಧರ್ಮ ಪ್ರಸಾರಕ್ಕಾಗಿ ಸಂಚಾರ ಮಾಡುತ್ತಿದ್ದ ಮಠಾಧಿಪತಿಗಳು ಇದೀಗ ಅಕ್ಷರಶಃ ಮಠಗಳಲ್ಲಿ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ.

Advertisement

ಶ್ರೀಕೃಷ್ಣ ಮಠದ ಪರ್ಯಾಯ ಪೀಠಾಧೀಶರು ಸಂಚಾರ ಮಾಡದಿದ್ದರೂ ಅಪಾರ ಸಂಖ್ಯೆಯ ಭಕ್ತರು ಶ್ರೀಕೃಷ್ಣ ಮಠಕ್ಕೆ ಬರುತ್ತಿದ್ದರು. ಈಗ ಕೊರೊನಾ ಕಾರಣಕ್ಕಾಗಿ ಭಕ್ತರಿಗೂ ಪ್ರವೇಶವಿಲ್ಲ. ಪರ್ಯಾಯ ಶ್ರೀ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಕೊರೊನಾ ಬಿಗಿ ಆರಂಭವಾಗುತ್ತಲೇ ಮಠದ ಆವರಣದೊಳಗೆ ಇರುವವರು ಕೊನೆಯ ವರೆಗೂ ಇರಬೇಕು. ಇಲ್ಲವಾದರೆ ಈಗಲೇ ಹೋಗಿ ಲಾಕ್‌ಡೌನ್‌ ಮುಗಿದ ಬಳಿಕ ಬನ್ನಿ ಎಂದು ಕಟ್ಟಪ್ಪಣೆ ಮಾಡಿದ್ದರಿಂದ ಒಂದಿಷ್ಟು ಸಿಬಂದಿ ಮಠದ ಆವರಣದೊಳಗೆ ಇದ್ದಾರೆ.

ಪೇಜಾವರ ಶ್ರೀಗಳು ಬೆಂಗಳೂರಿನಲ್ಲೇ ಬಾಕಿ
ಅದಮಾರು ಮಠದ ಹಿರಿಯ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು, ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು, ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು, ಸೋದೆ ಮಠದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಉಡುಪಿಯ ಮಠದಲ್ಲಿದ್ದರೆ, ಲಾಕ್‌ಡೌನ್‌ ಘೋಷಣೆ ಸಂದರ್ಭ ಬೆಂಗಳೂರಿನಲ್ಲಿದ್ದ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿಯೇ ಉಳಿದುಕೊಂಡಿದ್ದಾರೆ. ವಿದ್ಯಾಪೀಠಕ್ಕೆ ಬರುವವರು ಹೋಗುವವರು ಯಾರೂ ಇಲ್ಲ. ಅಲ್ಲಿದ್ದ ವಿದ್ಯಾರ್ಥಿಗಳೆಲ್ಲರೂ ಮನೆಗೆ ಹೋಗಿದ್ದು ಎಸೆಸೆಲ್ಸಿ ಪರೀಕ್ಷೆಗಾಗಿ ಇರುವ ಬೆರಳೆಣಿಕೆ ವಿದ್ಯಾರ್ಥಿಗಳಿಗೆ ಸ್ವಾಮೀಜಿ ಪಾಠವನ್ನು ಹೇಳುತ್ತಿದ್ದಾರೆ.

ಶ್ರೀ ಕಾಶೀ ಶ್ರೀಗಳು ಬಸೂÅರು ಮಠದಲ್ಲಿ
ಶ್ರೀ ಕಾಶೀ ಮಠದ ಶ್ರೀ ಸಂಯಮೀಂದ್ರತೀರ್ಥ ಶ್ರೀಪಾದರು ಬಸೂÅರು ಶಾಖಾ ಮಠದ ದೇವರಿಗೆ ಸಹಸ್ರಕುಂಭಾಭಿಷೇಕಕ್ಕೆ ಆಗಮಿಸಿದವರು ಅಲ್ಲಿಯೇ ವಸಂತ ಮಾಸವನ್ನು ಆಚರಿಸುವವರಿದ್ದರು. ಈಗ ಅಲ್ಲಿಯೇ ಮೊಕ್ಕಾಂ ಮುಂದುವರಿಸುತ್ತಿದ್ದಾರೆ. ಎಲ್ಲ ಶಾಖಾ ಮಠಗಳಿಗೂ ಲಾಕ್‌ಡೌನ್‌ ಪಾಲಿಸುವಂತೆ ನಿರ್ದೇಶನ ನೀಡಿದ್ದಾರೆ. ಶ್ರೀ ಗೋಕರ್ಣ ಪರ್ತಗಾಳಿ ಮಠದ ಶ್ರೀ ವಿದ್ಯಾಧಿರಾಜತೀರ್ಥ ಶ್ರೀಪಾದರು, ಶಿಷ್ಯ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಗೋವಾದ ಪರ್ತಗಾಳಿ ಮಠದಲ್ಲಿದ್ದಾರೆ.
ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಪಲಿಮಾರು ಮೂಲಮಠದಲ್ಲಿದ್ದು ಶಿಷ್ಯ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರಿಗೆ ಪಾಠ ಮಾಡುತ್ತಿದ್ದಾರೆ. ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಉಡುಪಿ ಪಾಡಿಗಾರು ಮಠದಲ್ಲಿದ್ದರೆ ಕಿರಿಯ ಶ್ರೀಗಳು ಪುತ್ತಿಗೆ ಮೂಲಮಠದಲ್ಲಿದ್ದಾರೆ. ಭಂಡಾರಕೇರಿ ಮಠದ ಶ್ರೀ ವಿದ್ಯೆàಶತೀರ್ಥ ಶ್ರೀಪಾದರು ಬೆಂಗಳೂರಿನ ಮಠದಲ್ಲಿದ್ದಾರೆ. ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು ಸುಬ್ರಹ್ಮಣ್ಯದಲ್ಲಿಯೂ ಚಿತ್ರಾಪುರ ಮಠದ ಶ್ರೀ ವಿದ್ಯೆàಂದ್ರತೀರ್ಥ ಶ್ರೀಪಾದರು ಚಿತ್ರಾಪುರದಲ್ಲೂ ಇದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next