ದೇವನಹಳ್ಳಿ: ಕೋವಿಡ್ 19 ಲಾಕ್‌ಡೌನ್ ಪರಿ ಸ್ಥಿತಿಯಲ್ಲಿ ವಿವಿಧ ದೇಶಗಳಿಂದ ಒಟ್ಟು 681 ಪ್ರಯಾಣಿಕರು ತಾಲೂಕಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭಾನು ವಾರ ಬಂದಿಳಿದಿದ್ದಾರೆ. ಸಿಂಗಾಪೂರ್‌ನಿಂದ 180 ಮಂದಿ, ಮೆಲ್ಬೋರ್ನ್ ನಿಂದ 207, ದುಬೈ 180, ಟೊರೆಂಟೋದಿಂದ 146 ಪ್ರಯಾಣಿಕರು ಬಂದಿದ್ದಾರೆ. ಸಿಂಗಾಪೂರ್‌ನಿಂದ 14ನೇ ಏರ್ ಇಂಡಿಯಾ ವಿಮಾನದಲ್ಲಿ 180 ಅನಿವಾಸಿ ಭಾರತೀಯರು ಆಗಮಿಸಿದ್ದು ಅದರಲ್ಲಿ 03 ಮಕ್ಕಳು, 101 ಪುರುಷರು, 71 ಮಹಿಳೆ ಯರು ಇದ್ದಾರೆ.
15ನೇ ಏರ್ ಇಂಡಿಯಾ ವಿಮಾನದಲ್ಲಿ ಆಸ್ಟ್ರೇಲಿ ಯಾದ ಮೆಲ್ಬೋರ್ನ್ ನಿಂದ 207 ಪ್ರಯಾಣಿಕರು ಆಗಮಿ ಸಿದ್ದು ಅದರಲ್ಲಿ ಒಂದು ಮಗು, 99 ಪುರುಷ, 107 ಮಹಿಳೆ ಯರು ಇದ್ದಾರೆ. 16ನೇ ಏರ್ ಇಂಡಿಯಾ ವಿಮಾನದಲ್ಲಿ ಟೊರೆಂ ಟೋದಿಂದ 146 ಪ್ರಯಾಣಿಕರು ಬಂದಿದ್ದು ಅದ ರಲ್ಲಿ 11 ಮಕ್ಕಳು ಸೇರಿ 84 ಪುರುಷರು, 62 ಮಹಿಳೆಯರು ಇದ್ದಾರೆ. 17ನೇ ಏರ್ ಇಂಡಿಯಾ ವಿಮಾನದಲ್ಲಿ ದುಬೈನಿಂದ 180 ಪ್ರಯಾಣಿಕರು ಆಗಮಿ ಸಿದ್ದು ಅದರಲ್ಲಿ 3 ಮಕ್ಕಳು ಸೇರಿ 101 ಪುರುಷ, 76 ಮಹಿಳೆ ಯರು ಇದ್ದಾರೆ.
ದುಬೈನಿಂದ ಬಂದ ಏರ್ ಇಂಡಿಯಾ ವಿಮಾನ ಕೆಂಪೇ ಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಂಗ ಳೂರು ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಿತು. ತಜ್ಞ ವೈದ್ಯರು ಹಾಗೂ ಸಿಬ್ಬಂದಿ ವರ್ಗ 681 ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸಿದ್ದು ಯಾವುದೇ ಪ್ರಯಾಣಿಕರಲ್ಲಿ ಕೋವಿಡ್ 19 ವೈರಸ್‌ನ ಸೋಂಕಿನ ಲಕ್ಷಣ ಕಂಡು ಬಂದಿಲ್ಲ. ಎಲ್ಲಾ ಪ್ರಯಾಣಿಕರನ್ನು 14 ದಿನ ಕ್ವಾರಂಟೈನ್‌ಗಾಗಿ ಹೋಟೆಲ್‌ಗಳಿಗೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು. ಈ ವೇಳೆ ಅಪರ ಜಿಲ್ಲಾಧಿ ಕಾರಿ ಡಾ.ಜಗದೀಶ್ ಕೆ. ನಾಯಕ್, ತಹಶೀಲ್ದಾರ್ ಅಜಿತ್ ಕುಮಾರ್, ಪುರಸಭಾ ಮುಖ್ಯಾಧಿಕಾರಿ ಎ.ಎಚ್.ನಾಗರಾಜ್, ಅಧಿಕಾರಿಗಳು ಇದ್ದರು.
ಕೋವಿಡ್ 19 ಕರ್ಫ್ಯೂಗೆ ಸ್ತಬ್ಧ: ರಾಜ್ಯ ಸರ್ಕಾರ ಕೋವಿಡ್ 19 ತಡೆಗಟ್ಟುವ ನಿಟ್ಟಿ ನಲ್ಲಿ ರಾಜ್ಯಾದ್ಯಂತ ಕೋವಿಡ್ 19 ಕರ್ಫ್ಯೂ ಜಾರಿಗೊಳಿ ಸಿದ್ದು ಭಾನುವಾರ ತಾಲೂಕು ಸ್ತಬ್ಧವಾಗಿತ್ತು. ಎಂದಿನಂತೆ ಹಾಲು, ತರಕಾರಿ, ಮೆಡಿಕಲ್ ಸ್ಟೋರ್, ದಿನಸಿ ಅಂಗಡಿ, ಆಸ್ಪತ್ರೆ ತೆರೆದಿ ದ್ದವು. ಹೋಟೆಲ್‌ಗಳಲ್ಲಿ ಪಾರ್ಸಲ್ ಗಳಿಗೆ ಅವಕಾಶ ಕಲ್ಪಿಸ ಲಾಗಿತ್ತು. ಜಿಲ್ಲಾಡಳಿತ ಬೆಳಗ್ಗೆ 07 ಗಂಟೆಯಿಂದ ಮಧ್ಯಾಹ್ನ 11 ಗಂಟೆವರೆಗೆ ಮಾಂಸದ ಮಾರಾಟಕ್ಕೆ ಅವ ಕಾಶ ನೀಡಿತ್ತು.
ಬೆಳಗ್ಗೆ ಕೆಲ ವಾಹನಗಳು ಸಂಚರಿಸುತ್ತಿದ್ದವು. ನಂತರ 11 ಗಂಟೆ ವೇಳೆ ವಾಹನ ಸಂಚಾರ ಸ್ಥಗಿತವಾಗಿತ್ತು. ಪೊಲೀಸರು ಪ್ರಮುಖ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿ ಬಂದ್ ಮಾಡಿದ್ದರು. ತಾಲೂಕಿನ ರಸ್ತೆಗಳು ಜನರಿಲ್ಲದೆ ಬಿಕೋ ಎನ್ನುತ್ತಿತ್ತು. ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್ ಸ್ಥಗಿತವಾ ಗಿತ್ತು. ಪೋಲಿಸರು ವಾಹನದ ಮೂಲಕ ಬರುವ ಜನರಿಗೆ ಮಾಸ್ಕ್ ಧರಿಸಿ, ಪದೇ ಪದೆ ಓಡಾಡಬೇಡಿ ಎಂಬ ಸಂದೇಶ ಸಾರಿದರು.