Advertisement

Moscow: ಕೆಮಿಕಲ್‌ ಅಸ್ತ್ರ ಬಳಸಿದ್ದ ರಷ್ಯಾ ಪರಮಾಣು ರಕ್ಷಣಾಪಡೆ ಮುಖ್ಯಸ್ಥನ ಹತ್ಯೆ

07:50 PM Dec 17, 2024 | Team Udayavani |

ಮಾಸ್ಕೋ:ಉಕ್ರೇನ್‌ ಯುದ್ಧದಲ್ಲಿ ನಿಷೇಧಿತ ರಾಸಾಯನಿಕಗಳನ್ನು ಒಳಗೊಂಡ ಶಸ್ತ್ರಾಸ್ತ್ರಗಳನ್ನು ಬಳಸಿದ್ದ ರಷ್ಯಾ ಪರಮಾಣು ರಕ್ಷಣಾ ಪಡೆಗಳ ಮುಖ್ಯಸ್ಥ ಲೆ.ಜನರಲ್‌ ಇಗೊರ್‌ ಕಿರಿಲೋವ್‌ ಹಾಗೂ ಅವರ ಸಹಾಯಕ ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ಮಂಗಳವಾರ ನಡೆದ ಸ್ಫೋಟದಲ್ಲಿ ಮೃತಪಟ್ಟಿದ್ದಾರೆ.

Advertisement

ನಗರದ ಅಪಾರ್ಟ್‌ಮೆಂಟ್‌ವೊಂದರ ಬಳಿ ಸ್ಕೂಟರ್‌ನಲ್ಲಿ ಸ್ಫೋಟಕವನ್ನು ಅಳವಡಿಸಲಾಗಿತ್ತು. ಅದು ಸ್ಫೋಟಗೊಂಡು ಈ ದುರ್ಘ‌ಟನೆ ಸಂಭವಿಸಿದೆ ಎಂದು ರಷ್ಯಾದ ತನಿಖಾ ಸಮಿತಿ ಹೇಳಿದೆ. ದಾಳಿಯ ಹೊಣೆಯನ್ನು ಉಕ್ರೇನ್‌ ಭದ್ರತಾ ಪಡೆ ವಹಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆಮಿಕಲ್‌ ಶಸ್ತ್ರಾಸ್ತ್ರ ಬಳಕೆ ಆರೋಪದ ಮೇಲೆ ಉಕ್ರೇನ್‌ ಕೋರ್ಟ್‌ ಇಗೊರ್‌ಗೆ ಶಿಕ್ಷೆ ವಿಧಿಸಿತ್ತು. ಅವರು ಇಂಥ 4800ಕ್ಕೂ ಹೆಚ್ಚು ಕೆಮಿಕಲ್‌ ಅಸ್ತ್ರ ಬಳಸಿದ್ದರು ಎಂದು ಉಕ್ರೇನ್‌ ಆರೋಪಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next