ಹೊಳೆನರಸೀಪುರ: ಕೋವಿಡ್ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ತಾಲೂಕಿನಲ್ಲಿನ ಎಲ್ಲಾ ರಸ್ತೆಗಳನ್ನು ಮುಚ್ಚಿದರೂ ನಿನ್ನೆ ಹೊರ ಜಿಲ್ಲೆಯಿಂದ ಸುಮಾರು 23 ಮಂದಿ ನುಸುಳಿದ್ದು ಅವರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ತಹಶೀಲ್ದಾರ್ ಕೆ.ಆರ್. ಶ್ರೀನಿವಾಸ್ ತಿಳಿಸಿದರು. ಪಟ್ಟಣದ ತಾಲೂಕು ಕಚೇರಿಯಲ್ಲಿ ಉಪವಿಭಾಗಾಧಿಕಾರಿಗಳ ಸಭೆ ಬಳಿಕ ಮಾತನಾಡಿದರು. ತಾಲೂಕಿನಲ್ಲಿ ಬಹಳಷ್ಟು ದಿನಗಳಿಂದ ಕಟ್ಟಡ ಕಾಮಗಾರಿ ನಿಲುಗಡೆಯಾಗಿದ್ದು ಅಂತಹ ಸರ್ಕಾರಿ ರಸ್ತೆ ಹಾಗೂ ದೊಡ್ಡ ಕಟ್ಟಡ ಕಾಮಗಾರಿಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು. ತಾಲೂಕಿನಲ್ಲಿ ಇಲ್ಲಿಯವರೆಗೆ ದಿನಸಿ ಅಂಗಡಿಗಳಿಗೆ ಇಲ್ಲಿ ಯವರೆಗೆ ವಾರಕ್ಕೆ 3 ದಿನಗಳಾದ ಸೋಮವಾರ, ಬುಧವಾರ, ಶುಕ್ರವಾರ ಹನ್ನೊಂದು ಗಂಟೆವರೆಗೆ ಅವಕಾಶ ನೀಡಲಾಗಿತ್ತು, ಆ ಅವಧಿಯನ್ನು ಮಧ್ಯಾಹ್ನ 2 ಗಂಟೆವರೆಗೆ ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿದರು.
ಪರಿಶೀಲನೆ ಮಾಡಿದ್ದೇವೆ: ಪಟ್ಟಣದಲ್ಲಿನ ದಿನಸಿ ಅಂಗಡಿ ಮಾಲಿಕರು ದರಪಟ್ಟಿ ಗಳನ್ನು ಪ್ರದರ್ಶನ ಮಾಡದೆ ಇರುವ ಸುಮಾರು 16 ಅಂಗಡಿಗಳ ಮೇಲೆ ದಾಳಿ ನಡೆಸಲಾಗಿದೆ. ಜತೆಗೆ ಮೆಡಿ ಕಲ್ ಸ್ಟೋರ್ ಗಳಲ್ಲಿ ಸ್ಯಾನಿಟೈಸರ್, ಮಾಸ್ಕ್ಗಳನ್ನು ಅಧಿಕ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂಬ ದೂರಿನ ಮೇಲೆ ಮೆಡಿಕಲ್ ಸ್ಟೋರ್‌ಗೂ ತೆರಳಿ ಪರಿಶೀಲನೆ ನಡೆಸಲಾಗಿದೆ ಎಂದರು.
ಕೋವಿಡ್ ವಾರಿಯರ್ ನಲ್ಲಿ ತೊಡಗಿಕೊಂಡಿರುವವ ರಿಗೆ ಕೋವಿಡ್ ಟೆಸ್ಟ್ ಗಾಗಿ ಮಾಧ್ಯಮ ಹಾಗು ಇಂದು ಪೊಲೀಸ್ ಇಲಾಖೆ ಸಿಬ್ಬಂದಿಗಳಿಗೆ ಪಟ್ಟಣದ ಸಾರ್ವಜನಿಕ
ಆಸ್ಪತ್ರೆಯಲ್ಲಿ ತಪಾಸಣೆ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಡಿವೈಎಸ್‌ಪಿ ಲಕ್ಷ್ಮೇಗೌಡ, ಸರ್ಕಲ್ ಇನ್ಸ್‌ಪೆಕ್ಟರ್ ಆರ್. ಪಿ.ಅಶೋಕ್, ಇಒ ಯೋಗೇಶ್, ಟಿಎಚ್‌ಒ ಡಾ. ರಾಜೇಶ್, ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಟಿ.ಎಸ್.ಲಕ್ಷ್ಮೀಕಾಂತ್ ಸಮಾಜಕಲ್ಯಾಣ ಇಲಾಖೆ ಅಧಿಕಾರಿ ಸಿದ್ಲಿಂದು, ಕಾರ್ಮಿಕ ಅಧಿಕಾರಿ ಮಂಗಳಗೌರಿ, ಅಬಕಾರಿ ಇನ್ಸ್‌ಪೆಕ್ಟರ್, ಪಿಎಸ್‌ಐ ಗೀತಾ, ಬಿಇಒ ಲೋಕೇಶ್ ಮತ್ತಿತರರಿದ್ದರು.