Advertisement
ಚೆಕ್ ಪೋಸ್ಟ್‌ನಲ್ಲಿ ಪೊಲೀಸ್ ಹಾಗೂ ಆರೋಗ್ಯ ಇಲಾಖೆಯಿಂದ ಕಟ್ಟುನಿಟ್ಟಿನ ತಪಾಸಣೆ ನಡೆಯುತ್ತಿದೆ. ಜತೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬಂದಿಗಳು ಹಗಲು ರಾತ್ರಿ ಕೋವಿಡ್-19 ಸೋಂಕು ತಡೆಗಟ್ಟುವಲ್ಲಿ ಕರ್ತವ್ಯ ನಿರತರಾಗಿದ್ದಾರೆ.
ಚೆಕ್ ಪೋಸ್ಟ್‌ನಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬಂದಿಗಳು ಸೇರಿದಂತೆ 19 ಜನರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪೊಲೀಸ್, ಆರೋಗ್ಯ, ಕಂದಾಯ, ಅರಣ್ಯ, ಪಂಚಾಯತ್, ತೋಟಗಾರಿಕೆ, ಶಿಕ್ಷಣ ಹೀಗೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬಂದಿಗಳು ಕೆಲಸ ನಿರ್ವಹಿಸುತ್ತಿದ್ದಾರೆ. ದಿನದ 24 ಗಂಟೆಗಳ ಕಾಲ ಸರತಿಯ ಪ್ರಕಾರ ಚೆಕ್ ಪೋಸ್ಟ್‌ನಲ್ಲಿ ಪ್ರಮುಖವಾಗಿ ಇಬ್ಬರು ಸರಕಾರಿ ವೈದ್ಯರು, ಇಬ್ಬರು ಪೊಲೀಸ್ ಉಪನಿರೀಕ್ಷರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಮಾಸೆಬೈಲು ಪೊಲೀಸ್ ಠಾಣೆಯ ಪೊಲೀಸ್ ಉಪನೀರಿಕ್ಷಕ ಅನಿಲ್‌ಕುಮಾರ್ ಅವರ ಮಾರ್ಗದರ್ಶನದಲ್ಲಿ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜತೆಯಲ್ಲಿ ಶಂಕರನಾರಾಯಣ ಪೊಲೀಸ್ ಠಾಣೆಯ ಪೊಲೀಸ್ ಉಪನೀರಿಕ್ಷಕ ಶ್ರೀಧರ್ ನಾಯ್ಕ ಹಾಗೂ ಕಂಡ್ಲೂರು ಪೊಲೀಸ್ ಠಾಣೆಯ ಸಿಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕುಂದಾಪುರ ಹಾಗೂ ಬೈಂದೂರು ತಾಲೂಕಿನ ವಿವಿಧ ಕಡೆಗಳ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು , ಆರೋಗ್ಯ ಸಹಾಯಕಿಯರು ಜಿಲ್ಲೆಯಿಂದ ಹೊರ ಹೋಗುವ ಹಾಗೂ ಒಳ ಬರುವವರ ಸ್ಕ್ರೀನಿಂಗ್ ನಡೆಸುತ್ತಿದ್ದಾರೆ. ಕಾಲು ನಡಿಗೆಯವರಿಂದ ತೊಂದರೆ
ಹೊಸಂಗಡಿ ಚೆಕ್ ಪೋಸ್ಟ್‌ನಲ್ಲಿ ಹೊರ ಜಿಲ್ಲೆಯವರನ್ನು ಪರವಾಗಿಗೆ ಇಲ್ಲದೆ ಜಿಲ್ಲೆಯ ಒಳ ಭಾಗಕ್ಕೆ ಬಿಡದೆ ಇರುವುದರಿಂದ, ಚೆಕ್ ಪೋಸ್ಟ್‌ನ ಅನತಿ ದೂರದಲ್ಲಿ ಬಾಳೆಬರೆ ಘಾಟಿಯ ಬದಿಯಲ್ಲಿ ಕಾಲು ನಡಿಗೆಯಿಂದ ಜಿಲ್ಲೆಗೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಪೊಲೀಸ್ ಇಲಾಖೆ ಬಾಳೆಬರೆ ಘಾಟಿಯಲ್ಲಿರುವ ಕಾಲು ದಾರಿಗಳನ್ನು ಬಂದ್ ಮಾಡಿದರೂ ಕೂಡ, ಆಗಾಗ ಒಂದೊಂದು ಘಟನೆ ನಡೆಯುತ್ತಿರುತ್ತದೆ. ಕಾಲು ನಡಿಗೆಯಿಂದ ಹೊಸಂಗಡಿ ಪೇಟೆಗೆ ಬಂದವರನ್ನು ಸಂಬಂಧಿಕರು ತಮ್ಮ ವಾಹನಗಳ ಮೂಲಕ ತಮ್ಮ ಊರುಗಳಿಗೆ ಕರೆದುಕೊಂಡು ಹೋಗುತ್ತಿದ್ದಾರೆ. ಕಾಲುನಡಿಗೆಯಿಂದ ಹೊರ ರಾಜ್ಯ ಹಾಗೂ ಬೆಂಗಳೂರಿನಿಂದ ಹೀಗೆ ಬರುವವ ಸಂಖ್ಯೆ ಹೆಚ್ಚಾಗುತ್ತಿದ್ದು, ಇದು ಪೊಲೀಸರಿಗೆ ಹಾಗೂ ಆರೋಗ್ಯ ಇಲಾಖೆಗೆ ತಲೆ ನೋವಾಗಿ ಪರಿಣಾಮಿಸುತ್ತಿವೆ. ಇದರ ಬಗ್ಗೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕಾಗಿದೆ.
Related Articles
ಜಿಲ್ಲೆಗೆ 50ಸಾವಿರ ಜನರು ಬರುವ ನಿರೀಕ್ಷೆ ಇರುವುದರಿಂದ ಗಡಿಯಲ್ಲಿ ಜನರ ಸಂದಣಿಯಾಗ ಬಾರದೆಂದು ಇರುವ ಚೆಕ್ ಪೋಸ್ಟ್‌ನೊಂದಿಗೆ ಮತ್ತೊಂದು ಚೆಕ್ ಪೋಸ್ಟ್ ನಿರ್ಮಿಸಲಾಗಿದೆ. ಸದ್ಯ ಬರುವವ ಸಂಖ್ಯೆ ಕಡಿಮೆಯಾದುದರಿಂದ ಒಂದು ಚೆಕ್ ಪೋಸ್ಟ್ ಮಾತ್ರ ಕಾರ್ಯಚರಿಸುತ್ತಿದೆ. ಹೊರ ಜಿಲ್ಲೆ ಹಾಗೂ ಹೊರ ರಾಜ್ಯದಿಂದ ಬರುವ ಪ್ರತಿಯೊಬ್ಬರನ್ನು ಸ್ಕ್ರೀನಿಂಗ್ ಮಾಡಿ, ಗಡಿಯ ಒಳ ಭಾಗಗಕ್ಕೆ ಬಿಡಲಾ ಗುತ್ತಿದೆ. ಇದರಿಂದ ಸಹಜವಾಗಿ ಚೆಕ್‌ಪೋಸ್ಟ್‌ನಲ್ಲಿ ವಾಹನಗಳ ಮತ್ತು ಜನರ ಸಂದಣಿ ಹೆಚ್ಚಾಗುವ ಸಾಧ್ಯತೆ ಇರುದರಿಂದ ಜನರಿಗೆ ತೊಂದರೆಯಾಗುದನ್ನು ತಪ್ಪಿಸಲು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಗಡಿಯಲ್ಲಿ ಇರುವ ಚೆಕ್ ಪೋಸ್ಟ್‌ನೊಂದಿಗೆ ಮತ್ತೊಂದು ಚೆಕ್ ಪೋಸ್ಟ್ ವ್ಯವಸ್ಥೆ ಮಾಡಿದೆ.
Advertisement