Advertisement

ಪಾಕ್‌ ಆಕ್ರಮಿತ ಪ್ರದೇಶಗಳಲ್ಲಿ ಕ್ವಾರಂಟೈನ್ ಶಿಬಿರ

12:08 PM Mar 29, 2020 | Suhan S |

ಇಸ್ಲಾಮಾಬಾದ್‌, ಮಾ. 28: ಮಾರಣಾಂತಿಕ ಕೋವಿಡ್‌ 19 ವೈರಸ್‌ ಹರಡುವಿಕೆಗೆ ಸಂಬಂಧಿಸಿದಂತೆ ಚೀನಾ, ಅಮೆರಿಕ ನಡುವೆ ಆರೋಪ ಪ್ರತ್ಯಾರೋಪ ನಡೆಯುತ್ತಿದ್ದರೆ, ಮತ್ತೂಂದೆಡೆ ಪಾಕಿಸ್ತಾನ ಸೇನೆ ನೂರಾರು ಕೋವಿಡ್‌ 19 ಪೀಡಿತರನ್ನು ಪಂಜಾಬ್‌ ಪ್ರಾಂತ್ಯದಿಂದ ಪಾಕ್‌ ಆಕ್ರಮಿತ ಕಾಶ್ಮೀರ(ಪಿಒಕೆ) ಮತ್ತು ಗಿಲ್ಗಿಟ್‌ ಬಾಲ್ಟಿಸ್ಥಾನ್‌ ಪ್ರದೇಶಕ್ಕೆ ತಂದು ಕೂಡಿ ಹಾಕತೊಡಗಿದೆ.

Advertisement

ಪಿಒಕೆ ಮೂಲಗಳ ಪ್ರಕಾರ, ಸೇನಾ ನೆಲೆಗಳ ಹಾಗೂ ಸೇನಾ ಕುಟುಂಬದ ನಿವಾಸಗಳ ಸುತ್ತಮುತ್ತ ಕೋವಿಡ್‌ 19 ರೋಗಿಗಳು ಇರಬಾರದು. ಪಂಜಾಬ್‌ ಪ್ರಾಂತ್ಯದಲ್ಲಿರುವ ಎಲ್ಲ ಕೋವಿಡ್‌ ಸೋಂಕಿತರಿಗೆ ಪಾಕ್‌ ಆಕ್ರಮಿತ ಪ್ರದೇಶಗಳಲ್ಲಿ ಕ್ವಾರಂಟೈನ್‌ ಶಿಬಿರ ನಿರ್ಮಿಸಿ ಕೂಡಿ ಹಾಕುವಂತೆ ಸೇನೆ ಆದೇಶ ನೀಡಿದೆಯಂತೆ. ಸೇನೆಯ ವಾಹನಗಳಲ್ಲಿ ಅಪಾರ ಪ್ರಮಾಣದ ಕೋವಿಡ್‌ 19 ಸೋಂಕು ಪೀಡಿತರನ್ನು ತುಂಬಿಕೊಂಡು ಮೀರ್‌ಪುರ್‌ ನಗರ ಮತ್ತು ಪಿಒಕೆ, ಗಿಲ್ಗಿಟ್‌ ಬಾಲ್ಟಿಸ್ತಾನ್‌ ಪ್ರದೇಶಗಳಲ್ಲಿ ತಂದು ಬಿಡುತ್ತಿರುವುದಾಗಿ ವರದಿ ತಿಳಿಸಿದೆ.

ಇದರಿಂದ ಆಕ್ರೋಶಗೊಂಡ ಸ್ಥಳೀಯ ನಿವಾಸಿಗಳು ಪಾಕಿಸ್ತಾನದ ಕೋವಿಡ್‌ 19 ರೋಗಿಗಳು ಹಾಗೂ ಕ್ವಾರಂಟೈನ್‌ ಸೆಂಟರ್‌ಗಳನ್ನು ನಿರ್ಮಿಸುತ್ತಿರುವುದರ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಹಾಗಾಗಿ ಪಾಕ್‌ ಸೇನೆಗೆ ಪಂಜಾಬ್‌ ಪ್ರಾಂತ್ಯ ಮುಖ್ಯ ವಿನಃ ಪಿಒಕೆ ಅಲ್ಲ ಎಂದು ವರದಿ ವಿಶ್ಲೇಷಿಸಿದೆ. ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಪಿಒಕೆ ಹಾಗೂ ಗಿಲ್ಗಿಟ್‌ ಬಾಲ್ಟಿಸ್ತಾನ್‌ ಪ್ರದೇಶಗಳಲ್ಲಿಯಾವುದೇ ಮೂಲ ಸೌಕರ್ಯಗಳಿಲ್ಲ. ಆಸ್ಪತ್ರೆಯಾಗಲೀ, ವೈದ್ಯಕೀಯ ಸಿಬಂದಿಯಾಗಲೀ ಇಲ್ಲ. ಪಂಜಾಬ್‌ ಪ್ರಾಂತ್ಯದ ಕೋವಿಡ್‌ 19 ಸೋಂಕಿತರನ್ನು ತಂದು ಇಲ್ಲಿ ಕೂಡಿಹಾಕಿದರೆ ಇಡೀ ಪ್ರದೇಶವೇ ಸೋಂಕಿಗೀಡಾಗಲಿದೆ ಎಂಬುದು ಸ್ಥಳೀಯರ ಆತಂಕ. ಇದು ಕಾಶ್ಮೀರಿ ಜನರಿಗೆ ಅಪಾಯದ ಕರೆಗಂಟೆಯಾಗಿದೆ ಎಂದು ಎಚ್ಚರಿಸಿದ್ದಾರೆ. ಸಣ್ಣ ಖಾಯಿಲೆಗೂ ಚಿಕಿತ್ಸೆ ನೀಡುವ ಪ್ರಾಥಮಿಕ ಆರೋಗ್ಯ ಕೇಂದ್ರವೂ ಪಿಒಕೆ, ಗಿಲಿYಟ್‌ ಪ್ರದೇಶದಲ್ಲಿ ಕಷ್ಟ. ಇಂತಹ ಪ್ರದೇಶದಲ್ಲಿ ಕೋವಿಡ್‌ 19 ಸೋಂಕು ಹರಡಿದರೆ ಮುಂದೆ ನಮ್ಮ ಕಥೆ ಏನು ಎಂದು ಮುಜಾಫ‌ರ್‌ ಬಾದ್‌ ನಿವಾಸಿಯೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next