Advertisement
ಪೌರಕಾರ್ಮಿಕರ ಸುರಕ್ಷತೆ ಹಾಗೂ ಹೋಮ್ ಕ್ವಾರೆಂಟೈನ್ ಮನೆ ಗಳ ತ್ಯಾಜ್ಯ ಸಂಗ್ರಹಿಸುವ ಕುರಿತು ರಾಜ್ಯ ಹೈಕೋರ್ಟ್ ಮಾ.30 ರಂದು ನೀಡಿದ ಆದೇಶದ ಅನ್ವಯ ನಿರ್ದಿಷ್ಟ ಕ್ರಮ ಕೈಗೊಂಡಿದ್ದು, ಪಾಲಿಕೆ ವ್ಯಾಪ್ತಿಯಲ್ಲಿರುವ ಆಸ್ಪತ್ರೆ, ಕ್ಲಿನಿಕ್ ಗಳಲ್ಲಿ ಉತ್ಪತ್ತಿಯಾಗುವ ಬಯೋ ಮೆಡಿಕಲ್ ತ್ಯಾಜ್ಯ ಸಂಗ್ರಹಿಸಲು ಮತ್ತು ವಿಲೇವಾರಿ ಮಾಡಲು ತಲಾ ಎರಡು ವಲಯಕ್ಕೆ ಒಂದರಂತೆ ಎಂಟು ವಲಯಗಳಿಗೆ ನಾಲ್ಕು ಏಜನ್ಸಿ ನೇಮಿಸಿ ಬಿಬಿಎಂಪಿಯ ಜಂಟಿ ಆಯುಕ್ತ ಸಫìರಾಜ ಖಾನ್ ಆದೇಶ ಹೊರಡಿಸಿದ್ದಾರೆ.
- ಕೆಲಸ ಆರಂಭಿಸುವ ಮುನ್ನ ಪ್ರತಿ ನಿತ್ಯ ಪೌರಕಾರ್ಮಿಕರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಬೇಕು. ಈ ಬಗ್ಗೆ ಸೂಕ್ರ ಕ್ರಮ ಕೈಗೊಳ್ಳುವಂತೆ ವಿಭಾಗದ ಎಲ್ಲ ಸಹಾಯಕ ಎಂಜಿನಿಯರ್ ಗಳಿಗೆ, ಆರೋಗ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
- ಬಯೋ ಮೆಡಿಕಲ್ ತ್ಯಾಜ್ಯ ಸಂಗ್ರಹಿಸುವ ಪೌರಕಾರ್ಮಿಕರಿಗೆ ವೈಯಕ್ತಿಕ ರಕ್ಷಣಾ ಕಿಟ್ ನೀಡಬೇಕು.
- ಬಯೋ ಮೆಡಿಕಲ್ ತ್ಯಾಜ್ಯ ಸಂಗ್ರಹಿಸುವ ಪೌರಕಾರ್ಮಿಕರಿಗೆ ಪ್ರತಿನಿತ್ಯ ಹೊಸ ವೈಯಕ್ತಿಕ ರಕ್ಷಣಾ ಕಿಟ್ ನೀಡಬೇಕು.
- ಕಿಟ್‌ನಲ್ಲಿ ಮೂರು ಪದರದ ಮಾಸ್ಕ್, ಹ್ಯಾಂಡ್ ಗ್ಲೌಜ್, ಕನ್ನಡಕ, ಗೌನ್ ಪರಿಕರ ನೀಡಬೇಕು.
- ಪೌರಕಾರ್ಮಿಕರು ಬಳಸಿದ ರಕ್ಷಣಾ ಪರಿಕರಗಳನ್ನು ಸಂಗ್ರಹಿಸಿ ಬಯೋ ತ್ಯಾಜ್ಯ ಎಂದು ಪರಿಗಣಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು.
- ಪೌರಕಾರ್ಮಿಕರಿಗೆ ಅನಾರೋಗ್ಯ ಉಂಟಾದರೆ ಕೂಡಲೇ ಚಿಕಿತ್ಸೆ ಕೊಡಿಸಬೇಕು.