Advertisement

ಹೊರ ರಾಜ್ಯದವರಿಗೆ ಅವಕಾಶ ಕಲ್ಪಿಸಲು: ಸರಕಾರಿ ಕ್ವಾರಂಟೈನ್‌ ಅವಧಿ ಕಡಿತ?

03:06 PM May 30, 2020 | sudhir |

ಉಡುಪಿ: ಹೊರ ರಾಜ್ಯಗಳಿಂದ ಬಂದವರಿಗೆ 14 ದಿನಗಳ ಕ್ವಾರಂಟೈನ್‌ ಅವಧಿ ವಿಧಿಸಿದ್ದ ಸರಕಾರ ಇದೀಗ ಏಳು ದಿನಗಳ ಅವಧಿಗೆ ಇಳಿಸಿದೆ. ಏಳು ದಿನಗಳಲ್ಲಿ ವ್ಯಕ್ತಿಗೆ ಯಾವುದೇ ಕೊರೊನಾ ಲಕ್ಷಣ ಕಂಡು ಬಾರದಿದ್ದರೆ ಸರಕಾರಿ ಕ್ವಾರಂಟೈನ್‌ನಿಂದ ಮನೆ ಕ್ವಾರಂಟೈನ್‌ಗೆ ಕಳುಹಿಸುವ ನಿಯಮಾವಳಿ ತಿದ್ದುಪಡಿಯನ್ನು ಸರಕಾರ ರೂಪಿಸಿದೆ.

Advertisement

ಹಿಂದೆ 14 ಪ್ಲಸ್‌ 14 ಅಂದರೆ ಒಟ್ಟು 28 ದಿನಗಳ ಕಾಲ ಅಬ್ಸರ್ವೇಶನ್‌ ಮಾಡಲಾಗುತ್ತಿತ್ತು. ಆದರೆ ಬೇರೆ ಕಡೆಗಳಿಂದ ಬಂದವರು ತಮ್ಮನ್ನು ಬೇಗ ಬಿಡಗಡೆ ಮಾಡಬೇಕೆಂಬ ಒತ್ತಡ, ಖರ್ಚು ಉಳಿಸಲು ಮತ್ತು ಕ್ವಾರಂಟೈನ್‌ ಕೇಂದ್ರಗಳಲ್ಲಿ ಉಟೋಪಚಾರ ಸಹಿತ ಮೂಲಭೂತ ಸೌಕರ್ಯದ ಬಗ್ಗೆ ದೂರುಗಳು ಬಂದ ಕಾರಣ ಅವರನ್ನು ಬೇಗನೇ ಮನೆ ಕ್ವಾರಂಟೈನ್‌ಗೆ ಕಳುಹಿಸಲು ಸರಕಾರ ನಿರ್ಧರಿಸಿದ ಸಾಧ್ಯತೆಯಿದೆ.

ಜಿಲ್ಲೆಗೆ ಹೊರ ರಾಜ್ಯಗಳಿಂದ ಬಂದವರ ಸಂಖ್ಯೆ 8,197. ಇದರ ಎರಡು ಪಟ್ಟು ಜನರು ಜಿಲ್ಲೆಗೆ ಬರಲು ಅರ್ಜಿ ಸಲ್ಲಿಸಿ ಕಾಯುತ್ತಿದ್ದಾರೆ. ಸದ್ಯ ಜಿಲ್ಲೆಯ ಕ್ವಾರಂಟೈನ್‌ ಕೇಂದ್ರಗಳ ಸಾಮರ್ಥ್ಯ ಭರ್ತಿಯಾಗಿದೆ. ಹೀಗಾಗಿ ಈಗಿರುವವರನ್ನು ಆದಷ್ಟು ಬೇಗ ಬಿಡುಗಡೆಗೊಳಿಸಿದರೆ ಮಾತ್ರ ಹೊಸದಾಗಿ ಬರುವವರನ್ನು ಉಳಿಸಿಕೊಳ್ಳಲು ಸ್ಥಳಾವಕಾಶ ಆಗುತ್ತದೆ. ಕಡಿಮೆ ಅವಧಿಯಲ್ಲಿ ಈಗಿದ್ದವರನ್ನು ಬಿಡುಗಡೆ ಮಾಡಲು ಇದೂ ಒಂದು ಕಾರಣವೆನ್ನಲಾಗುತ್ತಿದೆ.

ಕ್ವಾರಂಟೈನ್‌ ಅವಧಿಯಂತೆ ಸೋಂಕಿತರ ಆಸ್ಪತ್ರೆ ಅವಧಿಯಲ್ಲಿಯೂ ಕಡಿತಗೊಳಿಸಲಾಗಿದೆ. ಏಳು ದಿನಗಳವರೆಗೆ ನೋಡಿ 10ನೆಯ ದಿನದವರೆಗೆ ಯಾವುದೇ ಲಕ್ಷಣಗಳಿಲ್ಲದಿದ್ದರೆ ಗಂಟಲು ದ್ರವ ಮಾದರಿ ಪರೀಕ್ಷಿಸಿ ನೆಗೆಟಿವ್‌ ಬಂದರೆ ಮನೆ ಕ್ವಾರಂಟೈನ್‌ಗೆ ಕಳುಹಿಸಲಾಗುತ್ತದೆ. 10 ದಿನಗಳ ಬಳಿಕ ಲಕ್ಷಣಗಳಿದ್ದರೆ ಚಿಕಿತ್ಸೆಯನ್ನು ಮುಂದುವರಿಸಲಾಗುತ್ತದೆ.

ಸಾಂಸ್ಥಿಕ ಕ್ವಾರಂಟೈನ್‌ನಿಂದ ಬಿಡುಗಡೆಗೊಂಡವರು ಮನೆ ಕ್ವಾರಂಟೈನ್‌ ಅವಧಿಯಲ್ಲಿ ಹೊರಗೆ ತಿರುಗಾಡಬಾರದು. ಜಿಯೋ ಫೆನ್ಸಿಂಗ್‌ ಮೂಲಕ ಇದು ತಿಳಿಯುತ್ತದೆ. ಒಂದು ಬಾರಿ ಎಚ್ಚರಿಕೆ ಕೊಟ್ಟು ಎರಡನೆಯ ಬಾರಿ ನಿಯಮ ಉಲ್ಲಂ ಸಿದರೆ ಶಿಸ್ತು ಕ್ರಮ ಕೈಗೊಳ್ಳುತ್ತೇವೆ ಎಂದು ಜಿಲ್ಲಾಧಿಕಾರಿಯವರು ಎಚ್ಚರಿಕೆ ನೀಡಿದ್ದಾರೆ.

Advertisement

ದಕ್ಷಿಣ ಕನ್ನಡ ಜಿಲ್ಲೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸಂಬಂಧ ಸುರತ್ಕಲ್‌ನ ಎನ್‌ಐಟಿಕೆ ಹಾಗೂ ಮಂಗಳೂರಿನ ಇಎಸ್‌ಐ ಆಸ್ಪತ್ರೆ
ಸಹಿತ ವಿವಿಧ ತಾಲೂಕುಗಳಲ್ಲಿ ಕ್ವಾರಂಟೈನ್‌ ವ್ಯವಸ್ಥೆ ಮಾಡಲಾಗಿದೆ. ಇಷ್ಟರವರೆಗೆ 1243 ಮಂದಿಯನ್ನು ಕ್ವಾರಂಟೈನ್‌ ಮಾಡಲಾಗಿದೆ. ಇವರಲ್ಲಿ 863 ಮಂದಿ ಸರಕಾರಿ ಕ್ವಾರಂಟೈನ್‌ನಲ್ಲಿದ್ದಾರೆ. ಶುಕ್ರವಾರ 94 ಮಂದಿಯನ್ನು ಹೋಂ ಕ್ವಾರಂಟೈನ್‌ಗೆ ಕಳುಹಿಸಲಾಗಿದ್ದು 769 ಮಂದಿ ಸರಕಾರಿ ಕ್ವಾರಂಟೈನ್‌ನಲ್ಲಿ ಉಳಿದಿದ್ದಾರೆ.

8,197ರಲ್ಲಿ 7,182 ಬಿಡುಗಡೆ
ಜಿಲ್ಲೆಯ ವಿವಿಧ ಕೇಂದ್ರಗಳಲ್ಲಿ 8,197 ಮಂದಿ ಕ್ವಾರಂಟೈನ್‌ಗೆ ಒಳಗಾಗಿದ್ದರು. ಇವರೆಲ್ಲ ಬೇರೆ ಬೇರೆ ದಿನಗಳಲ್ಲಿ ಮೇ 6ರ ಅನಂತರ ಬಂದಿದ್ದರು. ಇವರಲ್ಲಿ ಮೇ 28ರ ವರೆಗೆ 7,182 ಜನರು ಬಿಡುಗಡೆಗೊಂಡು ಮನೆ ಕ್ವಾರಂಟೈನ್‌ಗೆ
ಹೋಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next