Advertisement

ಗುಣಮಟ್ಟದ ಚಿಕಿತ್ಸೆ ಎಲ್ಲರಿಗೂ ದೊರೆಯಲಿ

12:47 PM Feb 24, 2018 | |

ಕೆಂಗೇರಿ: ಅಂತಾರಾಷ್ಟ್ರೀಯ ಗುಣಮಟ್ಟದ ಚಿಕಿತ್ಸೆ ಎಲ್ಲರಿಗೂ ಸಿಗಬೇಕು. ಹಾಗೇ ಚಿಕಿತ್ಸಾ ವಿಧಾನ, ತಂತ್ರಜ್ಞಾನದ ಅವಿಷ್ಕಾರಗಳ ವಿನಿಮಯವಾದಾಗ ಮಾತ್ರ ಉತ್ತಮ ಚಿಕಿತ್ಸಾ ಫ‌ಲಿತಾಂಶ ಲಭಿಸಲು ಸಾಧ್ಯ ಎಂದು ಇಂಗ್ಲೆಂಡ್‌ನ‌ ರಾಯಲ್‌ ಕಾಲೇಜ್‌ ಆಪ್‌ ಫಿಜಿಷಿಯನ್ಸ್‌ ಮತ್ತು ಸರ್ಜನ್‌ ಆಪ್‌ ಗ್ಲಾಸಗೋ ಗೌರವ ಅಧ್ಯಕ್ಷ ಡಾ.ಡೇವಿಡ್‌ ಗ್ಯಾಲೋವೆ ತಿಳಿಸಿದರು.

Advertisement

ಮೈಸೂರು ಬೆಂಗಳೂರು ಮುಖ್ಯರಸ್ತೆಯ ರಾಜರಾಜೇಶ್ವರಿ ವೈದ್ಯಕೀಯ ವಹಾವಿದ್ಯಾಲಯ ಮತ್ತು ಆಸ್ಪತ್ರೆ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾಗರಿಕರ ಆರೋಗ್ಯ ಸುಧಾರಣೆಗೆ ಕೈಗೊಳ್ಳಬಹುದಾದ ಎಲ್ಲ ರೀತಿಯ ಚಿಕಿತ್ಸಾ ವಿಧಾನಗಳ ಬಗ್ಗೆ ಮಾಹಿತಿ ಹಂಚಿಕೊಂಡು ತರಬೇತಿ ನೀಡಲಾಗುವುದು ಎಂದರು.

ಸಮೂಹ ಸಂಸೆÏಯ ಮುಖ್ಯಸ್ಥರಾದ ಎ.ಸಿ.ಷಣ್ಮುಗಂ ಮಾತನಾಡಿ, ರಾಯಲ್‌ ಕಾಲೇಜ್‌ ಆಪ್‌ ಫಿಜಿಷಿಯನ್ಸ್‌ ಮತ್ತು ಸರ್ಜನ್‌ ಆಪ್‌ ಗ್ಲಾಸಗೋ ಕಾಲೇಜಿನ ಎಂಆರ್‌ಸಿಎಚ್‌, ಎಂಆರ್‌ಪಿಪಿ, ಎಪ್‌ಅರ್‌ಸಿಸಿ, ಎಫ್ಆರ್‌ಸಿಎಚ್‌ ಕೋರ್ಸ್‌ಗಳಿಗೆ ನಡೆಸುವ ಪರೀಕ್ಷೆಗಳಿಗೆ ತಮ್ಮ ಕಾಲೇಜಿನಲ್ಲಿ ಪರೀûಾ ಕೇಂದ್ರಗಳನ್ನು ಸಾ#ಪಿಸುವಂತೆ ಮನವಿ ಮಾಡಿದರು.

ಡಾ.ಹೆನಿ ಇಟೀಬಾ, ಆಂಡ್ರೀಯಾ ರಾಯ್‌, ಪ್ರೊ.ಲೀಸಾಮಿಕ್‌ ಮಾನಸ್‌, ರಾಜರಾಜೇಶ್ವರಿ ಆಸ್ಪತ್ರೆಯ ಡಾ.ಎಡ್ವಿನ್‌ ದೇವದಾಸ್‌, ಸಿಇಒ ಸೀತರಾಮ್‌, ಎಂಡಿ ಡಾ.ಡಿ.ಎಲ್‌.ರಾಮಚಂದ್ರ, ಡಾ.ಗೋವಿಂದರಾಜ್‌, ಪ್ರಾಂಶುಪಾಲ ಡಾ.ನವೀನ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next