ನೆಲಮಂಗಲ: ಆಹಾರ ಭದ್ರತೆ ಕಾಯ್ದೆ ಪ್ರಕಾರ ಪ್ರತಿಯೊಬ್ಬರಿಗೂ ಗುಣಮಟ್ಟದ ಆಹಾರ ಒದಗಿಸುವುದು ನಮ್ಮ ಆದ್ಯ ಕರ್ತವ್ಯ ಎಂದು ಕರ್ನಾಟಕ ಆಹಾರ ಆಯೋಗದ ಅಧ್ಯಕ್ಷ ಡಾ.ಎನ್. ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.
ತಾಲೂಕಿನ ನ್ಯಾಯಬೆಲೆ ಅಂಗಡಿ ಆಹಾರ ಪದಾರ್ಥ ಪರಿಶೀಲನೆ ನಡೆಸಿ ಮಾತನಾಡಿ, ಲಾಕ್‌ಡೌನ್‌ನಿಂದಾಗಿ ಬಡವರು ಕೂಲಿಕಾರ್ಮಿಕರಿಗೆ ಆಹಾರದ ಸಮಸ್ಯೆ ಎದುರಾಗಬಾರದೆಂಬ ಕಾರಣಕ್ಕೆ ಸರಕಾರ ಎರಡು ತಿಂಗಳ ಮುಂಗಡ ಪಡಿತರ ವಿತರಣೆಗೆ ಆದೇಶ ನೀಡಿದೆ. ಹೀಗಾಗಿ ವಿತರಣೆ ಸಮರ್ಪಕವಾಗಿ ತರಿಸಲಾಗುತ್ತಿದೆಯೇ? ಎಂಬುದನ್ನು ಪರಿಶೀಲಿಸಲಾಗಿದೆ. ಆದರೆ, ತಾಲೂಕಿನಲ್ಲಿ ಸಮಸ್ಯೆ ಕೇಳಿ ಬಂದಿಲ್ಲ ಎಂದು ತಿಳಿಸಿದರು.
ಗೋಧಿ ಕೆಟ್ಟಿಲ್ಲ: ಕಳೆದ 3 ದಿನಗಳ ಹಿಂದೆ ಪಟ್ಟಣದ ತಲಕಾಡು ಸುಬ್ಬರಾಯರ ಬೀದಿಯಲ್ಲಿ ನ್ಯಾಯ ಬೆಲೆ ಅಂಗಡಿಯಲ್ಲಿ ಗೋಧಿಗೆ ಹುಳು ಬಿದ್ದಿ ರುವ ಪ್ರಕರಣ ವರದಿಯಾಗಿತ್ತು. ಅದನ್ನು ಪರಿಶೀಲಿ ಸಲಾಗಿದ್ದು, ಗೋಧಿ ಕೆಟ್ಟಿಲ್ಲ, ಹುಳು ಬಿದ್ದಿಲ್ಲ. ಗೋಧಿ ಚೀಲಗಳು ವಿವಿಧ ಬಗೆಯ ಹಿಟ್ಟಿರುವ ಚೀಲಗಳ ಮಧ್ಯೆ ಇದ್ದಿದ್ದರಿಂದ ಹಿಟ್ಟಿನ ಮಿಶ್ರಣವಾಗಿತ್ತು. ಹೀಗಾಗಿ ಗೋಧಿ ಕಳಪೆಯಂತೆ ಕಂಡಿದೆ. ತಾಲೂಕಿಗೆ ಸರಬರಾ ಜಾಗಿದ್ದ 922 ಚೀಲ ಗೋಧಿ ಸರಿಪಡಿಸಿ ವಿತರಿಸಲು ಸೂಚನೆ ನೀಡಲಾಗಿದೆ ಎಂದರು.
ತಾಲೂಕಿನ ಜಯನಗರ, ಟಿಎಪಿಸಿಎಂಎಸ್, .ಕೆ. ಅಗ್ರಹಾರ, ಕುಲುವನಹಳ್ಳಿ, ಅರೆಬೊಮ್ಮನಹಳ್ಳಿ ನ್ಯಾಯಬೆಲೆ ಅಂಗಡಿಗಳಿಗೆ ಆಯೋಗ ಭೇಟಿನೀಡಿ ಪರಿಶೀಲಿಸಿ ಪಡಿತರದಾರರ ಸಮಸ್ಯೆ ಆಲಿಸಿ, ಮಾಲಿಕರು ಪಡಿತರ ವಿತರಣೆಯಲ್ಲಿ ಸಮಯಪಾಲನೆ ಮಾಡುತಿಲ್ಲ ಎಂಬ ದೂರುಗಳು ಕೇಳಿ ಬಂದವು.
ಪಟ್ಟಣದ ತಲಕಾಡು ಸುಬ್ಬರಾಯರ ಬೀದಿಯಲ್ಲಿರುವ ನ್ಯಾಯಬೆಲೆ ಅಂಗಡಿಯಲ್ಲಿ ಕಳಪೆ ಗೋದಿ ವಿತರಣೆ ಕುರಿತಾಗಿ ಏ.6ರಂದು ಉದಯವಾಣಿ ಪತ್ರಿಕೆಯಲ್ಲಿ “ಹುಳುತಿಂದ ಗೋಧಿ ವಿತರಣೆ’ ಶೀರ್ಷಿಕೆಯಡಿ ಸುದ್ದಿ ಪ್ರಕಟಿಸಲಾಗಿತ್ತು. ಈ ಬೆನ್ನಲ್ಲೆ ಎಚ್ಚೆತ್ತ ಇಲಾಖೆ ಮತ್ತು ನಿಗಮದ ಅಧಿಕಾರಿ ಗಳು ತಾಲೂಕಿನಲ್ಲಿರುವ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ರಾಜ್ಯ ಆಹಾರ ನಿಗಮದ ಸದಸ್ಯ ಎಚ್.ವಿ. ಶಿವಶಂಕರ್, ನೋಡೆಲ್ ಅಧಿಕಾರಿ ಗೌತಮ್‌ರಾಜು, ಆಹಾರ ನಿರೀಕ್ಷಕ ಅಮಾನುಲ್ಲಾ, ಟಿಎ ಪಿಸಿಎಂಎಸ್ ಕಾರ್ಯದರ್ಶಿ ರಮೇಶ್ ಮತ್ತಿತರರಿದ್ದರು.