Advertisement

ಸದೃಢ ಸಮಾಜ ಕಟ್ಟಲು ಗುಣಮಟ್ಟದ ಶಿಕ್ಷಣ ಅಗತ್ಯ -ಡಾ. ಸಿ.ಎನ್. ಅಶ್ವತ್ಥ ನಾರಾಯಣ 

09:30 AM Dec 18, 2022 | Team Udayavani |

ಮೂಡುಬಿದಿರೆ: ಗುಣಮಟ್ಟದ ಶಿಕ್ಷಣ ನೀಡಲು ಸರಕಾರ ಬದ್ಧವಾಗಿದ್ದು, ವಿದ್ಯಾರ್ಥಿ ಕೇಂದ್ರಿತವಾಗಿ ಹಲವು ಸುಧಾರಣೆಗಳಾಗಿವೆ. ಯುವಕ ಯುವತಿಯರಿಗೆ ಉತ್ತಮ ಭವಿಷ್ಯ ಕಲ್ಪಿಸಿಕೊಡಲು ಸ್ಕಿಲ್ ಕನೆಕ್ಟ್ ಫ್ಲಾಟ್ ಎಂಬ ವ್ಯವಸ್ಥೆಯನ್ನು ರೂಪಿಸಲಾಗಿದೆ. ವಿದ್ಯಾರ್ಥಿಗಳು ಈ ವ್ಯವಸ್ಥೆಯೊಳಗೆ ನೋಂದಣಿ ಮಾಡಿಕೊಂಡು ಸೂಕ್ತ ಅವಕಾಶಗಳನ್ನು ತಮ್ಮದಾಗಿಸಿಕೊಳ್ಳಬೇಕಾಗಿದೆ ಎಂದು ಉನ್ನತ ಶಿಕ್ಷಣ, ವಿಜ್ಞಾನ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಕರೆ ನೀಡಿದರು.

Advertisement

ಮೂಡುಬಿದಿರೆ ಹೊರವಲಯದ ಬನ್ನಡ್ಕದಲ್ಲಿ ಸ್ಥಾಪನೆಯಾಗಿರುವ ಮಂಗಳೂರು ವಿಶ್ವವಿದ್ಯಾನಿಲಯದ 6ನೇ ಘಟಕ ಕಾಲೇಜನ್ನು ಉದ್ಘಾಟಿಸಿ ಮಾತನಾಡಿದ ಅವರು ನೂತನ ಶಿಕ್ಷಣ ನೀತಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಇ-ಗವರ್ನೆನ್ಸ್, ಯೂನಿಫೈಡ್ ಯೂನಿವರ್ಸಿಟಿ ಕಾಲೇಜ್ ಮ್ಯಾನೇಜ್ಮೆಂಟ್, ಇ-ಆಫೀಸ್, ಸೇವಾಸಿಂಧು ಎಂದು ಮುಂತಾಗಿ ಗಣಕೀಕರಣವನ್ನು ಸಮರ್ಥವಾಗಿ ಜಾರಿಗೆ ತರಲಾಗುತ್ತಿದ್ದು ಆ ಮೂಲಕ ಆಡಳಿತದಲ್ಲಿ ಪಾರದರ್ಶಕತೆಯನ್ನು ತೋರಲಾಗುತ್ತಿದೆ ಎಂದರು.

ವೆಬ್‌ಸೈಟ್‌ ಅನಾವರಣ:

ಶಾಸಕ ಉಮಾನಾಥ್ ಕೋಟ್ಯಾನ್ ಘಟಕ ಕಾಲೇಜಿನ ವೆಬ್ ಸೈಟ್ ಅನಾವರಣಗೊಳಿಸಿ ಚುನಾವಣೆ ಸಂದರ್ಭ ಕೊಟ್ಟ ಮಾತಿನಂತೆ ಬಡ, ಮಧ್ಯಮ ವರ್ಗದವರ ಶಿಕ್ಷಣಕ್ಕೆ ಸಹಕಾರಿಯಾಗಬೇಕೆಂದು ಈ ಕಾಲೇಜು ಸ್ಥಾಪಿಸಲಾಗಿದೆ; ಕಳೆದ ಸಾಲಿನಲ್ಲಿ ಪ್ರಾರಂಭವಾದ ಕಾಲೇಜು ತರಗತಿಗಳಲ್ಲಿ ಈ ವರ್ಷ ನಿಗದಿತ ಸಂಖ್ಯೆ ಮೀರಿ 100ರಷ್ಟು ದಾಖಲಾತಿ ಆಗಿದೆ. ಸುಸಜ್ಜಿತ ಕಾಲೇಜು ಕ್ಯಾಂಪಸ್ ಕಟ್ಟಲು ಐದು ಎಕ್ರೆ ಜಾಗವನ್ನು ವಿಶ್ವವಿದ್ಯಾನಿಲಯಕ್ಕೆ ಹಸ್ತಾಂತರಿಸಲಾಗುವುದು ಎಂದರು.

ಮಂಗಳೂರು ವಿ.ವಿ. ಕುಲಪತಿ ಪ್ರೊ. ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಅಧ್ಯಕ್ಷತೆ ವಹಿಸಿದ್ದರು. ಕೊಟ್ಟ ಮಾತಿನಂತೆ ಅವಿರತ ಶ್ರಮವಹಿಸಿ ಈ ಗ್ರಾಮೀಣ ಪ್ರದೇಶಕ್ಕೆ ಕಾಲೇಜು ಒದಗಿಸಿಕೊಡಲು ಶಾಸಕರು ಅವಿರತ ಶ್ರಮವಹಿಸಿದ್ದಾರೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂಬುದರ ಜತೆಗೆ ಸಬ್ ಕಾ ಪ್ರಯಾಸ್ ಕೂಡ ಅಗತ್ಯ ಎಂದರು.

Advertisement

ಮುಖ್ಯ ಅತಿಥಿಗಳಾಗಿ ಪಡುಮಾರ್ನಾಡು ಗ್ರಾ.ಪಂ. ಅಧ್ಯಕ್ಷೆ ಸಿ.ಎಸ್. ಕಲ್ಯಾಣಿ, ಪಡುಮಾರ್ನಾಡು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ದಯಾನಂದ ಪೈ ಪಾಲ್ಗೊಂಡಿದ್ದರು.

ಮೂಡುಬಿದಿರೆ ಪುರಸಭೆ ಅಧ್ಯಕ್ಷ ಪ್ರಸಾದ್ ಕುಮಾರ್, ವಿ.ವಿ. ಹಣಕಾಸು ಅಧಿಕಾರಿ ಡಾ. ವೈ. ಸಂಗಪ್ಪ, ವಿವಿಧ ವಿಭಾಗಗಳ ಡೀನ್‌ಗಳು, ಸಿಂಡಿಕೇಟ್ ಸದಸ್ಯರು ಉಪಸ್ಥಿತರಿದ್ದರು.

ಮಂಗಳೂರು ವಿ.ವಿ. ಕುಲಸಚಿವ ಪ್ರೊ. ಕಿಶೋರ್ ಕುಮಾರ್ ಸಿ.ಕೆ. ಸ್ವಾಗತಿಸಿದರು.

ಆಶಾ ಶ್ಯಾಲೆಟ್ ಡಿ’ಸೋಜ ವiತ್ತು ಸುಲೋಚನಾ ಪಚ್ಚನಡ್ಕ  ನಿರೂಪಿಸಿದರು. ಘಟಕ ಕಾಲೇಜಿನ ಸಂಯೋಜಕ ಡಾ. ಗಣಪತಿ ಗೌಡ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next