Advertisement
ಸ್ಪರ್ಧಾತ್ಮಕ ಪರಿಸ್ಥಿತಿ, ಭವಿಷ್ಯದ ದೃಷ್ಟಿಯಿಂದ ಆಂಗ್ಲ ಮಾಧ್ಯಮ ಅಗತ್ಯ. ಆದರೆ ಕನ್ನಡ ಭಾಷೆ ಗಟ್ಟಿಗೊಳಿಸುವ ಹೊಣೆಗಾರಿಕೆ, ಕರ್ತವ್ಯ ನಮ್ಮದಾಗಬೇಕು. ಕನ್ನಡ ಸಾಹಿತ್ಯ, ಕಥೆ, ಅಭಿರುಚಿಯನ್ನು ಉಳಿಸಿ, ಬೆಳೆಸುವ ಕಾರ್ಯ ಆಗಬೇಕು ಎಂದರು.
ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಮಕ್ಕಳಿಗೆ ಆಂಗ್ಲ ಮಾಧ್ಯಮ ಶಿಕ್ಷಣ ನೀಡುವ ಉದ್ದೇಶದಿಂದ ಕರ್ನಾಟಕ ಸರಕಾರ ಮಹತ್ವಾಕಾಂಕ್ಷಿ ಯೊಜನೆ ಜಾರಿಗೊಳಿಸಿದೆ. ಒಂದೆರಡು ವರ್ಷ ಚಿಕ್ಕ ತೊಂದರೆಗಳಿದ್ದರೂ ಮುಂದೆ ಸಕಲ ವ್ಯವಸ್ಥೆಗಳೊಂದಿಗೆ ಖಾಸಗಿ ಶಾಲೆಗಳನ್ನೂ ಮೀರಿ ಬೆಳೆಯಲಿದೆ ಎಂದರು.
ಪ್ರಾಂಶುಪಾಲ ಶ್ರೀಧರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ. ಸದಸ್ಯರಾದ ಭುಜಂಗ ಶೆಟ್ಟಿ, ಡಾ| ಸುನೀತಾ ಡಿ. ಶೆಟ್ಟಿ, ಎಸ್‌ಡಿಎಂಸಿಯ ವಸಂತ ಸೇರ್ವೆಗಾರ್, ಪಂಚಾಯತ್ ಅಧ್ಯಕ್ಷೆ ಆಶಾಲತಾ, ಉಪಾಧ್ಯಕ್ಷೆ ದೇವಕಿ ಎಸ್. ಕೋಟ್ಯಾನ್, ಸಮನ್ವಯಾಧಿಕಾರಿ ನಾಗರಾಜ್, ಸಿಆರ್‌ಪಿ ದೀಪಾ, ದೈ.ಶಿ. ಪರಿವೀಕ್ಷಣಾಧಿಕಾರಿ ಭುಜಂಗ ಶೆಟ್ಟಿ, ಪಿಡಿಒ ಪ್ರದೀಪ್, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಧಾಕೃಷ್ಣ ರಾವ್, ಕಾರ್ಯದರ್ಶಿ ಸಂಜೀವ ಮಾಸ್ಟರ್, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಭಾಸ್ಕರ ಪೂಜಾರಿ, ಶಿಕ್ಷಕ ರಕ್ಷಕ ಸಂಘದ ವಸಂತ್ ಉಪಸ್ಥಿತರಿದ್ದರು. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.ಉಪಪ್ರಾಂಶುಪಾಲೆ ಜಯಶ್ರೀ ಜಿ. ಸ್ವಾಗತಿಸಿ, ಕ್ಷೇತ್ರ ಶಿಕ್ಷಣಾಧಿಕಾರಿ ಓ.ಆರ್. ಪ್ರಕಾಶ್ ಪ್ರಸ್ತಾವನೆಗೈದರು. ಶಿಕ್ಷಕರಾದ ನಾಗರಾಜ್ ಪ್ರತಿಭಾನ್ವಿತರ ಪಟ್ಟಿ ವಾಚಿಸಿ, ರಾಘವೇಂದ್ರ ಚಾತ್ರಮಕ್ಕಿ ಕಾರ್ಯಕ್ರಮ ನಿರೂಪಿಸಿದರು.