ಚೆನ್ನೈ: 2023ರ ಐಪಿಎಲ್ ನ ಲೀಗ್ ಹಂತ ಮುಗಿದು ಇಂದಿನಿಂದ ಪ್ಲೇ ಆಫ್ ಪಂದ್ಯಗಳು ನಡೆಯಲಿದೆ. ಮಂಗಳವಾರ ಚೆನ್ನೈನಲ್ಲಿ ನಡೆಯಲಿರುವ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಸೆಣಸಾಡಲಿದೆ. ಇಂದಿನ ಪಂದ್ಯದಲ್ಲಿ ಗೆದ್ದ ತಂಡವು ನೇರ ಫೈನಲ್ ತಲುಪಲಿದೆ.
ಗುಜರಾತ್ ಮತ್ತು ಚೆನ್ನೈ ತಂಡಗಳು ನಾಲ್ಕನೇ ಬಾರಿಗೆ ಮುಖಾಮುಖಿಯಾಗುತ್ತಿವೆ. ಈ ಮೊದಲು ಮೂರು ಬಾರಿಯ ಪಂದ್ಯದಲ್ಲಿಯೂ ಗುಜರಾತ್ ತಂಡವು ಚೆನ್ನೈ ತಂಡವನ್ನು ಸೋಲಿಸಲಿದೆ.
ಕ್ವಾಲಿಫೈಯರ್ ಪಂದ್ಯವು ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿದ್ದು, ಮಹೇಂದ್ರ ಸಿಂಗ್ ಧೋನಿ ತಂಡಕ್ಕೆ ತವರು ಮೈದಾನದ ಲಾಭ ಸಿಗಲಿದೆ.
ಹವಾಮಾನ ಪರಿಸ್ಥಿತಿಗಳಿಗೆ ಸಂಬಂಧಿಸಿದಂತೆ, ಚೆನ್ನೈ ಸಂಪೂರ್ಣ 40-ಓವರ್ ಆಟಕ್ಕೆ ಅನುಕೂಲಕರ ವಾತಾವರಣವನ್ನು ಒದಗಿಸುವ ನಿರೀಕ್ಷೆಯಿದೆ. ಮಂಗಳವಾರದ ಅಕ್ಯುವೆದರ್ ಮುನ್ಸೂಚನೆಯ ಪ್ರಕಾರ ಚೆನ್ನೈನಲ್ಲಿ 30-32 ಡಿಗ್ರಿ ಸೆಲ್ಸಿಯಸ್ ನಡುವಿನ ತಾಪಮಾನವಿರಲಿದ್ದು, ಮಳೆಯ ಮುನ್ಸೂಚನೆಯಿಲ್ಲ. ಆದರೆ ಪ್ರತಿಕೂಲ ಹವಾಮಾನವು ಪಂದ್ಯಕ್ಕೆ ಅಡ್ಡಿಪಡಿಸಿದರೆ, ಸೂಪರ್ ಓವರ್ ವಿಜೇತರನ್ನು ನಿರ್ಧರಿಸುತ್ತದೆ. ಈ ನಿಯಮವು ಎಲ್ಲಾ ಪ್ಲೇಆಫ್ ಗಳು ಮತ್ತು ಫೈನಲ್ ಗೆ ಅನ್ವಯಿಸುತ್ತದೆ.
ಒಂದು ವೇಳೆ ಪಂದ್ಯಕ್ಕೆ ಮಳೆ ಸಂಪೂರ್ಣ ಅಡ್ಡಿಪಡಿಸಿ, ಪಂದ್ಯ ರದ್ದಾದರೆ ಲೀಗ್ ಹಂತದಲ್ಲಿ ಅಗ್ರ ಸ್ಥಾನಿಯಾಗಿದ್ದ ಗುಜರಾತ್ ಟೈಟಾನ್ಸ್ ಫೈನಲ್ ಪ್ರವೇಶಿಸಲಿದೆ. ಬುಧವಾರ ಮೊದಲ ಎಲಿಮಿನೇಟರ್ ಪಂದ್ಯ ನಡೆಯಲಿದ್ದು, ಮುಂಬೈ ಮತ್ತು ಲಕ್ನೋ ತಂಡಗಳು ಆಡಲಿದೆ.