Advertisement

ಚತುರ್ದಿನ ಟೆಸ್ಟ್‌ : ಭಾರತ “ಎ’ಸರಣಿ ವಿಕ್ರಮ

02:50 AM Aug 05, 2019 | Team Udayavani |

ಪೋರ್ಟ್‌ ಆಫ್ ಸ್ಪೇನ್‌: ಆತಿಥೇಯ ವೆಸ್ಟ್‌ ಇಂಡೀಸ್‌ “ಎ’ ವಿರುದ್ಧ ದ್ವಿತೀಯ ಅನಧಿಕೃತ ಟೆಸ್ಟ್‌ ಪಂದ್ಯದಲ್ಲೂ ಜಯಭೇರಿ ಮೊಳಗಿಸಿದ ಭಾರತ “ಎ’ ತಂಡ ಸರಣಿ ವಶಪಡಿಸಿಕೊಂಡಿದೆ.

Advertisement

ಗೆಲುವಿಗೆ 278 ರನ್ನುಗಳ ಕಠಿನ ಗುರಿ ಪಡೆದಿದ್ದ ಭಾರತ, ದ್ವಿತೀಯ ಸರದಿಯಲ್ಲಿ ಭರ್ಜರಿ ಬ್ಯಾಟಿಂಗ್‌ ಪ್ರದರ್ಶಿಸಿ ಮೂರೇ ವಿಕೆಟಿಗೆ ಗುರಿ ಮುಟ್ಟಿತು; ಕೆರಿಬಿಯನ್ನರ ಸರಣಿ ಸಮಬಲದ ಕನಸನ್ನು ಛಿದ್ರಗೊಳಿಸಿತು.

ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 190ಕ್ಕೆ ಕುಸಿದಾಗ, ವಿಂಡೀಸಿನ ದ್ವಿತೀಯ ಸರದಿಯ ಮೊತ್ತ 149ಕ್ಕೆ ಸೀಮಿತಗೊಂಡಾಗ ಪೋರ್ಟ್‌ ಆಫ್ ಸ್ಪೇನ್‌ ಟ್ರ್ಯಾಕ್‌ನಲ್ಲಿ ಬ್ಯಾಟಿಂಗ್‌ ಸುಲಭವಲ್ಲ ಎಂದೇ ಭಾವಿಸಲಾಗಿತ್ತು. ಆದರೆ ಭಾರತದ ಅಗ್ರ ಸರದಿಯ ಬ್ಯಾಟ್ಸ್‌ಮನ್‌ಗಳೆಲ್ಲ ಸೇರಿ ವಿಂಡೀಸ್‌ ಮೇಲೆ ಸವಾರಿ ಮಾಡಿದರು.

ಮೊದಲ ವಿಕೆಟಿಗೆ 150 ರನ್‌
ಆರಂಭಿಕರಾದ ಪ್ರಿಯಾಂಕ್‌ ಪಾಂಚಾಲ್‌ (68)-ಮಾಯಾಂಕ್‌ ಅಗರ್ವಾಲ್‌ (81) ಭರ್ತಿ 150 ರನ್‌ ಪೇರಿಸಿ ಭದ್ರ ಅಡಿಪಾಯ ನಿರ್ಮಿಸಿದರು. ವನ್‌ಡೌನ್‌ನಲ್ಲಿ ಬಂದ ಅಭಿಮನ್ಯು ಈಶ್ವರನ್‌ (ಅಜೇಯ 59) ಮತ್ತು ಅನ್ಮೋಲ್‌ಪ್ರೀತ್‌ ಸಿಂಗ್‌ (ಅಜೇಯ 51) ಮುರಿಯದ 4ನೇ ವಿಕೆಟಿಗೆ ಸರಿಯಾಗಿ 100 ರನ್‌ ಪೇರಿಸಿ ತಂಡವನ್ನು ದಡ ಮುಟ್ಟಿಸಿದರು. ಬ್ಯಾಟಿಂಗ್‌ ವೈಫ‌ಲ್ಯ ಅನುಭವಿಸಿದ್ದು ನಾಯಕ ಹನುಮ ವಿಹಾರಿ ಮಾತ್ರ (ಒಂದು ರನ್‌).

ಸಂಕ್ಷಿಪ್ತ ಸ್ಕೋರ್‌
ವೆಸ್ಟ್‌ ಇಂಡೀಸ್‌ “ಎ’-318 ಮತ್ತು 149. ಭಾರತ “ಎ’-190 ಮತ್ತು 3 ವಿಕೆಟಿಗೆ 278.

Advertisement
Advertisement

Udayavani is now on Telegram. Click here to join our channel and stay updated with the latest news.

Next