Advertisement

ಏಷ್ಯಾಡ್‌:ಭಾರತಕ್ಕೆ 5 ನೇ ಬಂಗಾರ;ಇತಿಹಾಸ ನಿರ್ಮಿಸಿದ ರೋಯಿಂಗ್‌ ತಂಡ 

10:07 AM Aug 24, 2018 | |

ಜಕಾರ್ತ: ಏಷ್ಯಾಡ್‌ನ‌ಲ್ಲಿ ರೋಯಿಂಗ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತ ತಂಡ ಇತಿಹಾಸ ನಿರ್ಮಿಸಿದೆ. ಶುಕ್ರವಾರ ನಡೆದ ಫೈನಲ್‌ನಲ್ಲಿ ರೋಯಿಂಗ್‌ ತಂಡ ಇದೇ ಮೊದಲ ಬಾರಿಗೆ ಚಿನ್ನದ ಪದಕ ಜಯಿಸಿದೆ. 

Advertisement

ಸಾವರ್ನ್ ಸಿಂಗ್‌,ದತ್ತು ಬಾಬನ್‌ ಭೋಕನಾಲ್‌, ಓಂ ಪ್ರಕಾಶ್‌  ಮತ್ತು ಸುಖ್‌ಮೀತ್‌ ಸಿಂಗ್‌ ಅವರ ರೋಯಿಂಗ್‌ ತಂಡ 6:17:13 ನಿಮಿಷಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ತನ್ನದಾಗಿಸಿಕೊಂಡರು. 

2010 ರ ಏಷ್ಯನ್‌ ಗೇಮ್ಸ್‌ ನಲ್ಲಿ ಭಜರಂಗ್‌ ಲಾಲ್‌ಥಕ್ಕರ್‌ ಅವರು ವೈಯಕ್ತಿಕ ವಿಭಾಗದಲ್ಲಿ ಚಿನ್ನ ಗೆದ್ದಿದ್ದರು. 

ಭಾರತ ಸದ್ಯ 5 ಚಿನ್ನ, 4 ಬೆಳ್ಳಿ ಮತ್ತು 12 ಕಂಚಿನ ಪದಕಗಳೊಂದಿಗೆ 21 ಪದಕಗಳನ್ನು ತನ್ನದಾಗಿಸಿಕೊಂಡಿದೆ. 

Advertisement

Udayavani is now on Telegram. Click here to join our channel and stay updated with the latest news.

Next