Advertisement

ಚತುಷ್ಪಥ: ಶೇ.99 ಭೂಸ್ವಾಧೀನ

11:48 PM Nov 21, 2019 | Sriram |

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಚತುಷ್ಪಥವಾಗಿ ಅಭಿವೃದ್ಧಿ ಯೋಜ ನೆಗೆ ಸಂಬಂಧಿಸಿ ಕಾಸರಗೋಡು ಜಿಲ್ಲೆಯಲ್ಲಿ ಈಗಾಗಲೇ ಶೇ.99 ರಷ್ಟು ಭೂಸ್ವಾಧೀನ ನಡೆದಿದೆ ಎಂದು ಲೋಕೋಪಯೋಗಿ ಖಾತೆ ಸಚಿವ ಜಿ.ಸುಧಾಕರನ್‌ ತಿಳಿಸಿದ್ದಾರೆ.

Advertisement

ಕಾಸರಗೋಡು, ಅಡ್ಕತ್ತಬೈಲು ಮತ್ತು ಹೊಸದುರ್ಗ ಗ್ರಾಮಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಾಗಿ ವಶಪಡಿಸಲಾದ ಭೂಮಿಗೆ ನೀಡಲಾದ ಮೊತ್ತ ನಿಶ್ಚಯಿಸಿದ ಪ್ರಮಾಣಕ್ಕಿಂತಲೂ ಹೆಚ್ಚಾಗಿರುವುದನ್ನು ಪತ್ತೆಹಚ್ಚಲಾಗಿದೆ. ಈ ಹಿನ್ನೆಲೆಯಲ್ಲಿ ನಷ್ಟಪರಿಹಾರ ಮೊತ್ತವನ್ನು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ತಡೆ ಹಿಡಿದಿದೆ ಎಂದು ಸಚಿವರು ತಿಳಿಸಿದ್ದಾರೆ. ಸ್ವಾಧೀನಪಡಿಸಲಾದ ಭೂಮಿಗೆ ಬೆಲೆ ನಿಶ್ಚಯಿಸಲು ಉಂಟಾಗಿರುವ ವಿಳಂಬವೇ ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಅಡಚಣೆಯಾಗಿ ನಿಂತಿದೆ ಎಂದು ಸಚಿವರು ಹೇಳಿದ್ದಾರೆ.

ಈ ಯೋಜನೆಯಂತೆ ಭೂಸ್ವಾಧೀ ನಕ್ಕಾಗಿ ಕೇಂದ್ರ ಸರಕಾರ 557.57 ಕೋಟಿ ರೂ. ಈಗಾಗಲೇ ಮಂಜೂರು ಮಾಡಿದೆ. ಅದರಲ್ಲಿ 320.36 ಕೋಟಿ ರೂ. ವಿತರಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿ ನವೀಕ ರಣಗೊಂಡ ಬಳಿಕ ಅದರಲ್ಲಿ ಹೊಂಡಗಳು ಉಂಟಾದಲ್ಲಿ ಅದನ್ನು ಆ ಯೋಜನೆ ಗುತ್ತಿಗೆದಾರರೇ ಸರಿಪಡಿಸಬೇಕೆಂದು ಸಚಿವರು ಇದೇ ವೇಳೆ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ಕಾಸರಗೋಡು ಶಾಸಕ ಎನ್‌.ಎ.ನೆಲ್ಲಿಕುನ್ನು ಅವರ ಪ್ರಶ್ನೆಗೆ ಸಚಿವರು ಮೇಲಿನಂತೆ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next