Advertisement

ಚತುಷ್ಪಥ ಕೆಲಸ ಅವೈಜ್ಞಾನಿಕ: ಐಆರ್‌ಬಿ ವಿರುದ್ಧ ಆಕ್ರೋಶ

02:31 PM Aug 02, 2019 | Team Udayavani |

ಅಂಕೋಲಾ: ಚತುಷ್ಪಥ ಹೆದ್ದಾರಿ ಕಾಮಗಾರಿ ಕೈಗೊಂಡ ಐಆರ್‌ಬಿ ಕಂಪನಿ ಅವೈಜ್ಞಾನಿಕ ಕಾಮಗಾರಿಯಿಂದ ಬೆಳಸೆಯ 40 ಎಕರೆ ಕೃಷಿ ಭೂಮಿ ಜಲಾವೃತಗೊಂಡು ಕೃಷಿ ಕಾರ್ಯ ಮಾಡಲು ಸಾಧ್ಯವಾಗುತ್ತಿಲ್ಲ. ಸ್ಥಳಕ್ಕೆ ಅಧಿಕಾರಿಗಳು ಬಂದು ಸಮೀಕ್ಷೆ ನಡೆಸಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಗುರುವಾರ ಬೆಳಸೆ ಗ್ರಾಮಸ್ಥರು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

Advertisement

ಐಆರ್‌ಬಿ ಕಂಪನಿಯವರು ಬೆಳಸೆ ರೈಲ್ವೆ ಸೇತುವೆ ಅಡಿಯಿಂದ ರಸ್ತೆ ಹಾಗೂ ಹಳ್ಳಕ್ಕೆ ಸೇತುವೆ ನಿರ್ಮಿಸುವ ಸಲುವಾಗಿ ರೈತರ ಕೃಷಿ ಜಮೀನು ಸ್ವಾಧೀನಪಡಿಸಿಕೊಂಡು ಕೃಷಿ ಭೂಮಿಯನ್ನು ಸಮತಟ್ಟುಗೊಳಿಸಿ ರಸ್ತೆ ಹಾಗೂ ಸೇತುವೆ ನಿರ್ಮಿಸಲು ಮಣ್ಣು ಹಾಕಲಾಗಿದೆ. ಸ್ವಾಧೀನಪಡಿಸಿಕೊಂಡ ಜಮೀನಿನ ಮಧ್ಯ ಭಾಗದಲ್ಲಿ ಹಳ್ಳ ಹರಿಯುತ್ತಿದ್ದು, ಈ ಹಳ್ಳಕ್ಕೆ ಸೇತುವೆ ನಿರ್ಮಿಸುವ ಸಂದರ್ಭದಲ್ಲಿ ಹೂಳು ತುಂಬಿಕೊಂಡಿದೆ. ಮಳೆಗಾಲದಲ್ಲಿ ನೀರಿನ ಹರಿವು ಹೆಚ್ಚಿರುವುದರಿಂದ ನೀರು ಸರಿಯಾಗಿ ಹರಿದು ಹೋಗಲಾರದೆ 40 ಎಕರೆ ಅಕ್ಕ ಪಕ್ಕದ ಕೃಷಿ ಭೂಮಿ ಮುಳುಗಡೆಯಾಗಿ ತೊಂದರೆಯಾಗಿದೆ. ಕಂಪನಿಯವರನ್ನು ಸ್ಥಳಕ್ಕೆ ಕರೆಸಿ ಸಮಸ್ಯೆ ಬಗೆಹರಿಸದಿದ್ದರೆ ತೀವ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ತಹಶೀಲ್ದಾರ್‌ ಅಶೋಕ ಗುರಾಣಿ ಮನವಿ ಸ್ವೀಕರಿಸಿ ಕಂಪನಿ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಪರಿಹಾರದ ಕುರಿತು ಚರ್ಚಿಸುವ ಭರವಸೆ ನೀಡಿದರು. ಜಿಪಂ ಸದಸ್ಯ ಜಗದೀಶ ನಾಯಕ ಮೊಗಟಾ, ಬೆಳಸೆ ಗ್ರಾಪಂ ಅಧ್ಯಕ್ಷ ಶಂಕರ ಗೌಡ, ತಾಪಂ ಸದಸ್ಯ ಬೀರಾ ಗೌಡ, ಗ್ರಾಪಂ ಸದಸ್ಯರಾದ ಸೋಮು ಗೌಡ, ರಮೇಶ ಗೌಡ, ತಿಮ್ಮಾ ಗೌಡ, ಪ್ರಮುಖರಾದ ಬೊಮ್ಮಯ್ಯ ಗೌಡ, ಮಾರುತಿ ಗೌಡ, ಲಕ್ಷ್ಮಣ ಗೌಡ, ನಾಗಪ್ಪ ಗೌಡ, ಮಂಜುನಾಥ ಗೌಡ, ನಾಗರಾಜ ಗೌಡ, ಮಣಿಕಂಠ ಗೌಡ ಸೇರಿದಂತೆ ಹಲವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next