ಮಣಿಪಾಲ: ಮಾಹೆ ವಿ.ವಿ.ಯು ಕ್ವಾಕ್ವರೆಲಿ ಸಿಮಾಂಡ್ಸ್ ಜಾಗತಿಕ ವಿ.ವಿ.ಗಳ ಶ್ರೇಯಾಂಕದಲ್ಲಿ ಸ್ಥಾನ ಪಡೆದಿದೆ. ಜೀವವಿಜ್ಞಾನ ಮತ್ತು ವೈದ್ಯಕೀಯ ವಿಭಾಗದ ದಂತ ವೈದ್ಯಕೀಯ, ಅಂಗರಚನಾಶಾಸ್ತ್ರ, ಶರೀರಶಾಸ್ತ್ರ ವಿಭಾಗಗಳಿಗೆ ಈ ಶ್ರೇಯಾಂಕ ಬಂದಿದೆ.
ಕ್ವಾಕ್ವರೆಲಿ ಸಿಮಾಂಡ್ಸ್ ಜಾಗತಿಕ ಶ್ರೇಯಾಂಕದ 20ನೇ ಆವೃತ್ತಿಯಲ್ಲಿ 104 ದೇಶಗಳಿಂದ 1,500 ಸಂಸ್ಥೆಗಳು ಭಾಗವಹಿಸಿವೆ. ಉದ್ಯೋಗಶೀಲ ಯೋಜನೆ ಮತ್ತು ಸುಸ್ಥಿರತೆಗೆ ಒತ್ತು ನೀಡಿ ಶ್ರೇಯಾಂಕ ಘೋಷಿಸಲಾಗಿದೆ.
ಮಾಹೆ ವಿ.ವಿ.ಯ ಲೈಫ್ ಸೈನ್ಸಸ್‌ನ ವಿಷಯದ ಶ್ರೇಯಾಂಕ ಮಟ್ಟವು ಗಣನೀಯವಾಗಿ ಹೆಚ್ಚಿದ್ದು ಪ್ರಸ್ತುತ 317ನೇ ಸ್ಥಾನ ಪಡೆದಿದ್ದು ಕಳೆದ ವರ್ಷಕ್ಕಿಂತ 51ರಷ್ಟು ಅಧಿಕ ಶ್ರೇಯಾಂಕ ಬಂದಿದೆ. ವೈದ್ಯಕೀಯ ವಿಭಾಗದಲ್ಲಿಯೂ ಶ್ರೇಯಾಂಕದ ಮಟ್ಟ ಏರಿದೆ. ಜಗತ್ತಿನಾದ್ಯಂತ 150 ವಿ.ವಿ.ಗಳು ಶ್ರೇಯಾಂಕವನ್ನು ಪಡೆದುಕೊಂಡಿದ್ದು ಅಂಗರಚನಾಶಾಸ್ತ್ರ ಮತ್ತು ಶರೀರ ಶಾಸ್ತ್ರ ವಿಭಾಗಗಳಲ್ಲಿ ಭಾರತದಿಂದ ಮಾಹೆ ವಿ.ವಿ ಮಾತ್ರ ಆಯ್ಕೆಯಾಗಿದೆ ಎಂಬುದು ವಿಶೇಷ.
ದಂತವೈದ್ಯಕೀಯ ವಿಭಾಗ ದಲ್ಲಿ ಜಗತ್ತಿನಾದ್ಯಂತ 100 ವಿಶ್ವವಿದ್ಯಾ ನಿಲಯಗಳು ಶ್ರೇಯಾಂಕವನ್ನು ಪಡೆದಿದ್ದು ಅವುಗಳಲ್ಲಿ ಭಾರತದ ಕೇವಲ ಎರಡು ವಿ.ವಿ.ಗಳಿಗೆ ಮಾತ್ರ ಶ್ರೇಯಾಂಕ ನೀಡಲಾಗಿದೆ. ಭಾರತದ ಎರಡು ವಿ.ವಿ.ಗಳಲ್ಲಿ ಮಾಹೆ ಕೂಡ ಒಂದಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ 200 ಪಟ್ಟಿಗಳಲ್ಲಿ ದಂತ ವೈದ್ಯಕೀಯ, ಅಂಗರಚನಾಶಾಸ್ತ್ರ, ಔಷಧ ವಿಜ್ಞಾನ ನ್ಯಾನೋ ಸಬೆಕ್ಟ್ ಆಗಿವೆ ಎಂದು ಪ್ರಕಟನೆ ತಿಳಿಸಿದೆ.
ಶ್ರೇಯಾಂಕ ವಿವರ
ಜೀವ ವಿಜ್ಞಾನ ಮತ್ತು ವೈದ್ಯ ಕೀಯ-317, ಎಂಜಿನಿಯರಿಂಗ್ ಮತ್ತು
ತಂತ್ರಜ್ಞಾನ 601-650, ಜೀವ ವಿಜ್ಞಾನ
ಮತ್ತು ವೈದ್ಯಕೀಯ ವಿಭಾಗದ ಶರೀರ
ರಚನ ಶಾಸ್ತ್ರ-101-150, ಜೀವ ಶಾಸ್ತ್ರೀಯ ವಿಜ್ಞಾನ-451-500, ದಂತ
ವೈದ್ಯಕೀಯ-51-100, ವೈದ್ಯಕೀಯ-
201-250, ಔಷಧ ವಿಜ್ಞಾನ-151- 200, ನಿಸರ್ಗ ವಿಜ್ಞಾನ-601-650 ಶ್ರೇಯಾಂಕ ಬಂದಿದೆ.