Advertisement
ಜಾಗತಿಕ ಮಟ್ಟದ ಕ್ಯೂಎಸ್ ವಿವಿ ರ್‍ಯಾಂಕಿಂಗ್‌ನಲ್ಲಿ ವಿಶ್ವದ 26,000 ವಿವಿಗಳ ಪೈಕಿ ಮಣಿಪಾಲ ಮಾಹೆಯು 701-750 ರೇಂಜ್‌ನಲ್ಲಿ ಸ್ಥಾನ ಪಡೆದಿದೆ. ಇದರಲ್ಲಿ ಭಾರತದ ಖಾಸಗಿ ವಿವಿಗಳ ಪೈಕಿ ಮಣಿಪಾಲ ಮಾಹೆಯು ಪ್ರಥಮ ಸ್ಥಾನ ಪಡೆದಿದೆ. ಕ್ಯೂಎಸ್ ಏಶಿಯಾ ರ್‍ಯಾಂಕಿಂಗ್‌ನಲ್ಲಿ 200ರಿಂದ 198ಕ್ಕೆ ಜಿಗಿದಿದೆ. ಭಾರತದ ವಿವಿಗಳನ್ನು ಹೋಲಿಸಿದರೆ ಮಣಿಪಾಲ ಮಾಹೆಯು ಮೂರನೇ ಸ್ಥಾನ ಪಡೆದುಕೊಂಡಿದೆ. ಇದರಲ್ಲಿ 11,900 ವಿವಿಗಳು ಭಾಗಿಯಾಗಿದ್ದವು. ಕ್ಯೂಎಸ್ ಬ್ರಿಕ್ಸ್ ರಾಷ್ಟ್ರಗಳ ವಲಯದಲ್ಲಿ ಮಣಿಪಾಲ ಮಾಹೆಯು 119ನೇ ರ್‍ಯಾಂಕಿಂಗ್ ಪಡೆದಿದ್ದು, ಭಾರತದ ಖಾಸಗಿ ವಿವಿಗಳ ಪೈಕಿ 2ನೇ ಸ್ಥಾನ ಕಾಯ್ದುಕೊಂಡಿದೆ. ಇದರಲ್ಲಿ ಒಟ್ಟು 9,000 ವಿವಿಗಳು ಪಾಲ್ಗೊಂಡಿದ್ದವು ಎಂದರು.
ಯುನಿವರ್ಸಿಟಿಗಳ ಶೈಕ್ಷಣಿಕ ಯಶಸ್ಸು, ಮುಖ್ಯಸ್ಥರು ಗಳ ಪ್ರಖ್ಯಾತಿ, ಸಿಬಂದಿ ಮತ್ತು ವಿದ್ಯಾರ್ಥಿಗಳ ಅನುಪಾತ, ಡಾಕ್ಟ ರೇಟ್ ಪಡೆದಿರುವ ಅಧ್ಯಾಪಕರು, ಸಂಶೋ ಧನಾ ಪ್ರಬಂಧ ಮಂಡನೆಗಳು, ಅಂತಾ ರಾಷ್ಟ್ರೀಯ ಮಟ್ಟದ ಅಧ್ಯಾಪಕರು, ಅಂತಾರಾಷ್ಟ್ರೀಯ ವಿದ್ಯಾರ್ಥಿ ಗಳ ಮಾನದಂಡಗಳನ್ನು ಪರಿಗಣಿಸಿ ರ್‍ಯಾಂಕಿಂಗ್‌ಗೆ ಆಯ್ಕೆ ಮಾಡಲಾಗುತ್ತದೆ ಎಂದು ಡಾ| ವಿನೋದ್ ಭಟ್ ತಿಳಿಸಿದರು. ರ್‍ಯಾಂಕಿಂಗ್ ಒಂದೇ ನಮ್ಮ ಉದ್ದೇಶವಲ್ಲ. ಆದರೂ ಪ್ರತಿವರ್ಷ ಮಾಹೆಯ ಸಾಧನೆ ಹೆಚ್ಚುತ್ತ ಲಿದೆ. ಇದೊಂದು ಶೈಕ್ಷಣಿಕ ಸಾಧನೆಗಳ ಪಯಣ ವಾಗಿದೆ. ಗುಣಮಟ್ಟದ ಶಿಕ್ಷಣಕ್ಕೆ ಮಾಹೆ (ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜು ಕೇಶನ್) ಡೀಮ್ಡ್ ವಿವಿಯು ಒತ್ತು ಕೊಡುತ್ತದೆ ಎಂದು ಮಾಹೆಯ ಕುಲಪತಿ ಡಾ| ಎಚ್.ವಿನೋದ್ ಭಟ್ ಅವರು ಹೇಳಿದರು.
Related Articles
Advertisement