Advertisement

ಪದವಿ ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿ “ಕ್ಯುಆರ್‌ ಕೋಡ್‌’!

02:48 AM Mar 23, 2022 | Team Udayavani |

ಮಂಗಳೂರು: ಪದವಿ ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿಯೂ ಇದೀಗ ಕ್ಯು ಆರ್‌ ಕೋಡ್‌ ಅನುಷ್ಠಾನಕ್ಕೆ ಬಂದಿದೆ. ರಾಜ್ಯದಲ್ಲೇ ಮೊದಲ ಬಾರಿಗೆ ಮಂಗಳೂರು ವಿಶ್ವವಿದ್ಯಾನಿಲಯವು ಈ ಮಹತ್ವದ ಹೆಜ್ಜೆ ಇಟ್ಟಿದೆ.

Advertisement

ಪದವಿ ವಿದ್ಯಾರ್ಥಿಗಳು ಸದ್ಯ ಪಡೆಯುತ್ತಿರುವ ಅಂಕಪಟ್ಟಿಯು ಕ್ಯುಆರ್‌ ಕೋಡ್‌ ಒಳಗೊಂಡಿದೆ. ಮುಂದೆ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿಯೂ ಕ್ಯುಆರ್‌ ಕೋಡ್‌ ಜಾರಿಗೆ ಬರಲಿದೆ.

ಅಂಕಪಟ್ಟಿಯ ಜತೆಗೆ ವಿದ್ಯಾರ್ಥಿಯ ಪದವಿ ಪ್ರದಾನ ಸರ್ಟಿಫಿಕೆಟ್‌ನಲ್ಲಿಯೂ ಕ್ಯುಆರ್‌ ಕೋಡ್‌ ಸಿಸ್ಟಮ್‌ ಜಾರಿಯಾಗಲಿದೆ. ಜತೆಗೆ ಸರ್ಟಿಪಿಕೆಟ್‌ ಹಾಗೂ ಡಿಪ್ಲೊಮಾ ಕೋರ್ಸ್‌ ಸರ್ಟಿಪಿಕೆಟ್‌ನಲ್ಲಿಯೂ ಇದು ಅನುಷ್ಠಾನ ವಾಗಲಿದೆ. ಈ ಮೂಲಕ ಮೊದಲ ಬಾರಿಗೆ ಮಂಗಳೂರು ವಿ.ವಿ.ಯಲ್ಲಿ “ಬಾರ್‌ಕೋಡ್‌’ ಬದಲು ಭದ್ರತಾ ದೃಷ್ಟಿಯಿಂದ ಕ್ಯುಆರ್‌ ಕೋಡ್‌ ಜಾರಿಗೆ ಬಂದಿದೆ.

ಈ ಹಿಂದೆ ಅಂಕಪಟ್ಟಿಯಲ್ಲಿ ಬಾರ್‌ಕೋಡ್‌ ಡಿಸ್‌ಪ್ಲೇ ಆಗುತ್ತಿತ್ತು. ಅದರಲ್ಲಿ ವಿದ್ಯಾರ್ಥಿಯ ಕ್ರಮಸಂಖ್ಯೆ ಪ್ರಕಟವಾಗುತ್ತಿತ್ತು. ಅದನ್ನು ಬಾರ್‌ಕೋಡ್‌ ಮೂಲಕವೇ ಪರಿಶೀಲಿಸಲು ಸಾಧ್ಯವಾಗುತ್ತಿತ್ತು. ಆದರೆ, ಕ್ಯುಆರ್‌ ಕೋಡ್‌ನಿಂದ ವಿದ್ಯಾರ್ಥಿಯ ಸಂಕ್ಷಿಪ್ತ ಮಾಹಿತಿಯನ್ನು ಮೊಬೈಲ್‌ ಮುಖೇನ ಪಡೆಯಲು ಸಾಧ್ಯ.

ಮೊದಲ ಬಾರಿಗೆ ಅಂಕಪಟ್ಟಿಯನ್ನು ಮಂಗಳೂರು ವಿ.ವಿ. ವತಿಯಿಂದಲೇ ಮುದ್ರಿಸಲಾಗಿದೆ. ಭದ್ರತೆಗೆ ವಿಶೇಷ ಆದ್ಯತೆ ನೀಡಲಾಗಿದೆ. ಜತೆಗೆ ಅಂಕಪಟ್ಟಿಯಲ್ಲಿ ಈ ಹಿಂದೆ ಪರೀಕ್ಷಾಂಗ ಕುಲಸಚಿವರು ಖುದ್ದು ಸಹಿ ಹಾಕುತ್ತಿದ್ದರು. ಆದರೆ ಮೊದಲ ಬಾರಿಗೆ ಕಂಪ್ಯೂಟರೀಕೃತಿ ಸಹಿ ಹಾಕಲಾಗಿದೆ.

Advertisement

ಲಾಭವೇನು?
ಕ್ಯುಆರ್‌ ಕೋಡ್‌ ಅನ್ನು ಮೊಬೈಲ್‌ ಮೂಲಕ ಸ್ಕಾ Âನ್‌ ಮಾಡಿದ ಅಂಶಗಳನ್ನು ಉದ್ಯೋಗ/ಇತರ ಸಂದರ್ಭದಲ್ಲಿ ವಿದ್ಯಾರ್ಥಿಯ ಅಂಕಪಟ್ಟಿಯ ಪರಿಶೀಲನೆ ಅಥವಾ ಆನ್‌ಲೈನ್‌ ಮುಖೇನ ಈ ಮಾಹಿತಿಯನ್ನು ಪರಿಶೀಲಿಸಲು ಅನುಕೂಲವಾಗಲಿದೆ. ಒಂದು ವೇಳೆ ಅಂಕಪಟ್ಟಿ ನಕಲು ಮಾಡಿದರೆ ಅದನ್ನು ಪತ್ತೆಹಚ್ಚಲು ಇದರಿಂದ ಸಾಧ್ಯ. ಹೀಗಾಗಿ ಭದ್ರತೆಯ ದೃಷ್ಟಿಯಿಂದ ಇದು ಮಹತ್ವದ ಹೆಜ್ಜೆ.

ಕ್ಯುಆರ್‌ ಕೋಡ್‌ನ‌ಲ್ಲಿ ಏನಿದೆ?
ಅಂಕಪಟ್ಟಿಯಲ್ಲಿರುವ ಕ್ಯುಆರ್‌ ಕೋಡ್‌ ಅನ್ನು ಮೊಬೈಲ್‌ನಲ್ಲಿ ಸ್ಕಾ Âನ್‌ ಮಾಡಿದಾಗ ವಿದ್ಯಾರ್ಥಿಯ ಹೆಸರು, ಕಾಲೇಜು ಹೆಸರು, ವಿಭಾಗ, ಪರೀಕ್ಷೆಯಲ್ಲಿ ಬಂದ ಅಂಕ, ಗ್ರೇಡ್‌ ಪಾಯಿಂಟ್ಸ್‌ ಅನ್ನು ಪಡೆಯಬಹುದು.

ರಾಜ್ಯದಲ್ಲಿಯೇ ಮೊದಲ ಬಾರಿ ಜಾರಿ
ರಾಜ್ಯದಲ್ಲಿಯೇ ಇದೇ ಮೊದಲ ಬಾರಿಗೆ ಪದವಿ ಅಂಕಪಟ್ಟಿಯಲ್ಲಿ ಕ್ಯುಆರ್‌ ಕೋಡ್‌ ಕ್ರಮವನ್ನು ಮಂಗಳೂರು ವಿ.ವಿ.ಯು ಅನುಷ್ಠಾನಿಸಿದೆ. ಈ ಮೂಲಕ ವಿದ್ಯಾರ್ಥಿಯ ಅಂಕ ಒಳಗೊಂಡಂತೆ ಸಂಕ್ಷಿಪ್ತ ಮಾಹಿತಿಯನ್ನು ಮೊಬೈಲ್‌ನಲ್ಲಿ ಪರಿಶೀಲಿಸಲು ಸಾಧ್ಯವಿದೆ. ಈಗಾಗಲೇ ಬಹುತೇಕ ಕಾಲೇಜಿಗೆ ಅಂಕಪಟ್ಟಿ ವಿತರಿಸಲಾಗಿದೆ. ಅಂಕಪಟ್ಟಿಯ ಸಮಸ್ಯೆ ಇದ್ದರೆ ವಿ.ವಿ. ವೆಬ್‌ಸೈಟ್‌ನಲ್ಲಿರುವ ಇಮೈಲ್‌ ಮುಖೇನ ವಿ.ವಿ.ಯನ್ನು ಸಂಪರ್ಕಿಸಬಹುದು.
– ಪ್ರೊ| ಪಿ.ಎಲ್‌. ಧರ್ಮ,
ಪರೀಕ್ಷಾಂಗ ಕುಲಸಚಿವರು, ಮಂಗಳೂರು ವಿ.ವಿ.


-ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next